Monday, November 29, 2021

ಬಿಗ್ ಬಾಸ್ ನ ಮಾಜಿ ಸ್ಪರ್ಧಿಗೆ ಹಿಂದಿನಿಂದ ಗುದ್ದಿದ ಮತ್ತೊಂದು ಕಾರು! ಆಸ್ಪತ್ರೆಗೆ ದಾಖಲು

Must read

ಮುಂಬೈ : ಬಿಗ್ ಬಾಸ್ ಮಾಜಿ ಸ್ಪರ್ಧಿ ಅರ್ಶಿ ಖಾನ್ ಅವರು ತಮ್ಮ ಮುಂಬರುವ ಪ್ರಾಜೆಕ್ಟ್‌ನ ಶೂಟಿಂಗ್‌ಗೆ ತೆರಳುವಾಗ ದೆಹಲಿಯಲ್ಲಿ ಕಾರು ಅಪಘಾತಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ನವೆಂಬರ್ 22 ರಂದು ಈ ಘಟನೆ ನಡೆದಿದ್ದು, ನಟಿಗೆ ಹೆಚ್ಚಿನ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರ್ಶಿ ಖಾನ್ ವಿವರಗಳನ್ನು ಹಂಚಿಕೊಂಡಿದ್ದಾರೆ
ಭೀಕರ ಘಟನೆಯ ಬಗ್ಗೆ ಮಾತನಾಡುತ್ತಾ, ಅರ್ಶಿ ಖಾನ್ “ನಾನು ಕಾರಿನಲ್ಲಿ ಹೋಗುತ್ತಿದ್ದೆ ಮತ್ತು ಕೆಲವು ಅಭಿಮಾನಿಗಳು ನನ್ನನ್ನು ಗುರುತಿಸಿ ನನ್ನ ಬಳಿಗೆ ಬರುತ್ತಿರುವುದನ್ನು ನೋಡಿದೆ. ನಾನು ನನ್ನ ಚಾಲಕನಿಗೆ ಕಾರು ನಿಧಾನಗೊಳಿಸಲು ಕೇಳಿದೆ, ನನ್ನ ಉದ್ದೇಶ ಅಭಿಮಾನಿಗಳನ್ನು ಮಾತನಾಡಿಸಬಹುದು ಎಂಬುದಾಗಿತ್ತು ಆದರೆ ಆಗ ಮತ್ತೊಂದು ವಾಹನವು ನಮ್ಮ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಮುಂಭಾಗದ ಗಾಜು ಸಂಪೂರ್ಣ ಒಡೆದು ತಲೆಗೆ ಪೆಟ್ಟು ಬಿದ್ದಿದೆ. ನಾನು ಕಾರಿನಿಂದ ಹೊರಬರಲು ಪ್ರಯತ್ನಿಸಿದೆ ಮತ್ತು ನನಗೆ ಸಹಾಯ ಮಾಡಲು ಕೆಲವರು ಕಾರಿನ ಕಡೆಗೆ ಓದಿ ಬಂದಿದ್ದು ನೆನಪಿದೆ ಎಂದು ಹೇಳಿದ್ದಾರೆ.

ಆರ್ಶಿ ತನ್ನ ಸಹಾಯಕಿ ರೇಖಾ ಜೊತೆಗೆ ಕಾರಿನಲ್ಲಿದ್ದರು ಎಂದು ತಿಳಿದುಬಂದಿದೆ.

ಬಿಗ್ ಬಾಸ್ 11 ನೇ ಸೀಸನ್ ನಲ್ಲಿ ಅರ್ಶಿ ಖಾನ್ ಮೊದಲು ಕಾಣಿಸಿಕೊಂಡು ಅವರು ಕಳೆದ ವರ್ಷ ಬಿಗ್ ಬಾಸ್ ೧೪ ರಲ್ಲಿ ಕೂಡ ಕಾಣಿಸಿಕೊಂಡಿದ್ದರು ಮತ್ತು ತಮ್ಮ ನಡತೆಯ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು.

Latest article