Monday, November 29, 2021

ಬಿಟ್​ಕಾಯಿನ್ ಹಗರಣ ಮುಗಿದು ಹೋದ ಕಥೆ-ಆರಗ ಜ್ಞಾನೇಂದ್ರ

Must read

ಬೆಂಗಳೂರು: ಬಿಟ್​ಕಾಯಿನ್ ಹಗರಣ ಅದು ಮುಗಿದು ಹೋದ ಕಥೆ. ಈಗ ಕಾಂಗ್ರೆಸ್​ನವರು ಕೂಡ ಸುಮ್ಮನಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್​ಕಾಯಿನ್ ಹಗರಣದ ಬಗ್ಗೆ ನಮ್ಮ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವಿಚಾರ ಸೆಷನ್​ನಲ್ಲಿ ಚರ್ಚೆಗೆ ಬರಲಿ, ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ ಎಂದರು.

ಇನ್ನು ಪ್ರಕರಣ ಸಂಬಂಧ ಹ್ಯಾಕರ್​ ಶ್ರೀಕಿ ಮೇಲೆ ಚಾರ್ಜ್​ಶೀಟ್ ಹಾಕಿದ್ದೇವೆ. ಇರುವ ಕಾಯ್ದೆ ಪ್ರಕಾರ ಯಾವುದು ಹಾಕಬೇಕು ಆ ಪ್ರಕರಣ ಹಾಕಿದ್ದಾರೆ. ಶ್ರೀಕಿ ಬಗ್ಗೆ ಕೋರ್ಟ್​ಗೆ ಮನವರಿಕೆ ಆಗಿರಬೇಕು. ಅದಕ್ಕೆ ಜಾಮೀನು ಕೊಟ್ಟಿರುತ್ತದೆ. ಕಾಂಗ್ರೆಸ್​ನವರು ರಾಜಭವನಕ್ಕೆ‌ ಹೋಗುವುದಾದರೆ ಹೋಗಲಿ. ನಮ್ಮದೇನು ಅಭ್ಯಂತರವಿಲ್ಲ ಎಂದರು.

Latest article