Tuesday, October 26, 2021

ಅಷ್ಟಮಿಯ ದಿನದಿಂದು ಮುದ್ದು ಮಗಳ ಫೋಟೋ ಹಂಚಿಕೊಂಡ ನಟಿ ಅನುಷ್ಕಾ

Must read

ನವರಾತ್ರಿಯ ಅಷ್ಟಮಿಯ ದಿನದಂದು ನಟಿ ಅನುಷ್ಕಾ ತಮ್ಮ ಮುದ್ದು ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

ಫೋಟೋ ಜೊತೆಗೆ ಅನುಷ್ಕಾ ಶರ್ಮಾ ತಮ್ಮ ಮಗಳು ವಾಮಿಕಾ ಬಗ್ಗೆ ಬರೆದಿದ್ದಾರೆ. ಪ್ರತಿದಿನ ನನ್ನನ್ನು ಹೆಚ್ಚು ಧೈರ್ಯಶಾಲಿಯನ್ನಾಗಿ ಮಾಡುತ್ತಿಯಾ. ನನ್ನ ಪುಟ್ಟ ವಾಮಿಕಾಳಲ್ಲಿ ಯಾವಾಗಲೂ ದೇವತೆಯ ಶಕ್ತಿಯನ್ನು ಕಂಡುಕೊಳ್ಳಬಹುದು. ಎಲ್ಲರಿಗೂ ಅಷ್ಟಮಿಯ ಶುಭಾಶಯಗಳು ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಈ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲೇಖಕಿ ಮತ್ತು ಚಲನಚಿತ್ರ ನಿರ್ಮಾಪಕಿ ತಾಹಿರಾ ಕಶ್ಯಪ್ ಹಾರೈಸಿದ್ದಾರೆ. ವಾಣಿ ಕಪೂರ್, ಮೌನಿ ರಾಯ್, ಸುನೀಲ್ ಶೆಟ್ಟಿ ಮತ್ತು ಇತರೆ ತಾರೆಯರು ಹಾರ್ಟ್ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ.

More articles

Latest article