Monday, November 29, 2021

ವಿಶ್ವ ದಾಖಲೆ ನಿರ್ಮಿಸಿದ ಐದು ವರ್ಷದ ಅಲ್ಲು ಅರ್ಜುನ್ ಮಗಳ ಸಾಧನೆ!

Must read

ಹೈದರಾಬಾದ್: ಚೆಸ್ ಆಡುವ ಮುಖಾಂತರ ಅಲ್ಲು ಅರ್ಜುನ್ ಮಗಳು ದಾಖಲೆ ನಿರ್ಮಿಸಿದ್ದಾಳೆ. ಅಲ್ಲು ಅರ್ಹಾ ಕುಟುಂಬದ ಸದಸ್ಯರ ಎದುರು ಚೆಸ್ ಆಡಿದ್ದು, ಈ ವೀಡಿಯೋವನ್ನು ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಅಲ್ಲು ಅರ್ಹಾಗೆ ನೊಬೆಲ್ ವರ್ಲ್ಡ್ ರೆಕಾರ್ಡ್ ನೀಡಿ ಗೌರವಿಸಲಾಗಿದೆ. ಇದು ಅಲ್ಲು ಅರ್ಜುನ್ ಕುಟುಂಬಕ್ಕೆ ಖುಷಿ ನೀಡಿದೆ. ಅಲ್ಲು ಅರ್ಹಾ ಕೂಡ ಚಿತ್ರರಂಗಕ್ಕೆ ಬರುತ್ತಿದ್ದಾಳೆ. ಈ ಮಧ್ಯೆ ಅವಳ ಹೆಸರಲ್ಲಿ ನೊಬೆಲ್ ದಾಖಲೆ ನಿರ್ಮಾಣ ಆಗಿದೆ. ಅತಿ ಚಿಕ್ಕ ವಯಸ್ಸಿಗೆ ಅಲ್ಲು ಅರ್ಹಾ ಚೆಸ್ ಟ್ರೇನರ್ ಆಗಿದ್ದಾಳೆ.
ಇನ್ನೂ ಆರ್ಹಾಗೆ ಐದೇ ವಯಸ್ಸು ಅಷ್ಟರಲ್ಲೇ ದಾಖಲೆ ನಿರ್ಮಿಸಿದ್ದು ಗಮನಾರ್ಹ . ಇನ್ನು ಚಿತ್ರರಂಗದಲ್ಲೂ ಸಾಧಿಸಲು ಹೊರಟ ಪುಟ್ಟ ಪೋರಿಗೆ ,ಸಮಂತಾ ಅಕ್ಕಿನೇನಿ ನಟನೆಯ ಶಾಕುಂತಲಂ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಪೌರಾಣಿಕ ಕಥೆ ಇರುವ ಈ ಸಿನಿಮಾದಲ್ಲಿ ಸಮಂತಾ ಅವರು ಶಕುಂತಲೆಯ ಪಾತ್ರ ಮಾಡಿದ್ದು, ಶಕುಂತಲೆ ಪುತ್ರ ಭರತನ ಪಾತ್ರಕ್ಕೆ ಅಲ್ಲು ಅರ್ಹಾ ಬಣ್ಣ ಹಚ್ಚಿದ್ದಾಳೆ. ಈ ವಿಚಾರವನ್ನು ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ   ಪೋಸ್ಟ್ ಮಾಡಿದ್ದಾರೆ ಸದ್ಯ ಚಿತ್ರರಂಗಕ್ಕೂ ದಾಪಯಗಾಲಿಡುತ್ತಿರುವ ಆರ್ಹಾ ತನ್ನ ಹೆಸರಿನಲ್ಲಿ ನೊಬೆಲ್ ದಾಖಲೆಯನ್ನು ಬರೆದುಕೊಂಡಿದ್ದಾಳೆ

Latest article