Monday, November 29, 2021

ನಾನು ಭಿಕ್ಷೆ ಬೇಡುವುದಿಲ್ಲ ಎಂದು ಪೆನ್ ಮಾರಲು ಇಳಿದ ಎಂಬತ್ತರ ವೃದ್ಧೆಗೆ ಎಲ್ಲರಿಂದ ಮೆಚ್ಚುಗೆ!

Must read

ಇನ್‌ಸ್ಟಾಗ್ರಾಮ್ ಬಳಕೆದಾರರಾದ ಶಿಖಾ ರಾಠಿ ರತನ್ ಎಂಬುವವರು ಪೆನ್ ಮಾರುತ್ತಿದ್ದ ವೃದ್ಧೆಯ ಬಗ್ಗೆ ಒಂದು ವಿವರವಾದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈಗ ಇದು ಎಲ್ಲೆಡೆ ವೈರಲ್ ಆಗಿದೆ.

“ನಾನು ನಿಜ ಜೀವನದ ಹೀರೋ ಮತ್ತು ಚಾಂಪಿಯನ್ ಅನ್ನು ಭೇಟಿಯಾದೆ, ನಾನು ಸ್ನೇಹಿತನ ಜೊತೆ ಹೊರ ಹೋಗಿದ್ದೆ ಆಗ ನಾವು ಆಕೆಯನ್ನು ಭೇಟಿಯಾಗಿದ್ದು, ನಾವು ಆಕೆ ಬರೆದಿದ್ದ ಸಾಲುಗಳನ್ನು ಒಧಿದಾಗ ಭಾವುಕನಾದೆ. ನನ್ನ ಸ್ನೇಹಿತ ತಕ್ಷಣ ಪೆಣ್ರೀ ಖರೀದಿಯನ್ನು ಮಾಡಿದನು. ಆಕೆ ಆಗ ತುಂಬಾ ಸಂತೋಷಪಟ್ಟರು, ಆಕೆಯ ಸಿಹಿಯಾದ ನಗು, ಮಾತೃ ಹೃದಯ, ಸಂತೋಷದ ವರ್ತನೆ ನಮ್ಮ ಮನಸ್ಸಿಗೆ ಅಗಾದವಾದ ಸಂತೋಷವನ್ನುಂಟು ಮಾಡಿದೆ ಎಂದು ಬರೆದುಕೊಂಡಿದ್ದು, ಈ ವೃದ್ದೆಯು ಪುಣೆಯ ಎಂಜಿ ರಸ್ತೆಯಲ್ಲಿ ಪೆನ್ ಗಳನ್ನು ಮಾರುತ್ತಾರೆ ಎಂದು ಹೇಳಿದ್ದಾರೆ.

ಪೆಟ್ಟಿಗೆಯ ಮೇಲಿನ ಬರವಣಿಗೆಯಲ್ಲಿ, “ನಾನು ಭಿಕ್ಷೆ ಬೇಡುವುದಿಲ್ಲ, ದಯವಿಟ್ಟು ₹ 10 ನೀಲಿ ಬಣ್ಣದ ಪೆನ್ ಖರೀದಿಸಿ. ಧನ್ಯವಾದ ” ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 

View this post on Instagram

 

A post shared by Shikha Rathi (@sr1708)

Latest article