Monday, November 29, 2021

ಸ್ಯಾಮ್ ಸಂಗ್, ಶಿಯೋಮಿಯನ್ನು ಹಿಂದಿಕ್ಕಿದ ಮೊಟೊರೊಲಾ ಕಂಪನಿ : 200MP ಕ್ಯಾಮೆರಾ ಫೋನ್ ಬಿಡುಗಡೆ ಮಾಡಿದ ಮೊದಲ ಕಂಪನಿ ಎಂಬ ಹೆಗ್ಗಳಿಕೆ

Must read

ನವದೆಹಲಿ: ಸ್ಯಾಮ್ ಸಂಗ್ ಈ ವರ್ಷದ ಸೆಪ್ಟೆಂಬರ್ ನಲ್ಲಿ 200ಎಂಪಿ ಐಎಸ್ಒಸೆಲ್ ಕ್ಯಾಮೆರಾ ಸೆನ್ಸರ್ ಅನ್ನು ಪರಿಚಯಿಸಿದೆ. ಆದರೆ ಸ್ಯಾಮ್ ಸಂಗ್ ತನ್ನ ಯಾವುದೇ ಸ್ಮಾರ್ಟ್ ಫೋನ್ ಗಳಲ್ಲಿ 200ಎಂಪಿ ಕ್ಯಾಮೆರಾ ಸೆನ್ಸರ್ ಗಳನ್ನು ನೀಡಲಿಲ್ಲ. ಆದರೆ ಮತ್ತೊಂದೆಡೆ ಮೋಟೋರೋಲಾ ಸ್ಯಾಮ್ ಸಂಗ್ ಮತ್ತು ಶಿಯೋಮಿಯನ್ನು ಮೀರಿಸುವ 200ಎಂಪಿ ಕ್ಯಾಮೆರಾ ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಮೊಟೊರೊಲಾ ತನ್ನ ಸ್ಮಾರ್ಟ್ ಫೋನ್​ನಲ್ಲಿ ಸ್ಯಾಮ್ ಸಂಗ್​ನ 200ಎಂಪಿ ಐಎಸ್ಒಸೆಲ್ ಕ್ಯಾಮೆರಾವನ್ನು ಬಳಸಿದ ಮೊದಲ ಕಂಪನಿಯಾಗಲಿದೆ. ಮೊಟೊರೊಲಾ ೨೦೦ ಎಂಪಿ ಕ್ಯಾಮೆರಾ ಫೋನ್ ಅನ್ನು ಮುಂದಿನ ವರ್ಷ ೨೦೨೨ ರಲ್ಲಿ ಬಿಡುಗಡೆ ಮಾಡಬಹುದು.
ಮೊಟೊರೊಲಾ ಸ್ಮಾರ್ಟ್ ಫೋನ್ ಮೊದಲು 200ಎಂಪಿ ಕ್ಯಾಮೆರಾ ಫೋನ್ ಅನ್ನು ಹೊರತರಲಿದೆ. ಮೋಟೋ ಈ ಸೆನ್ಸರ್​ ಕ್ಯಾಮೆರಾ ಬಿಡುಗಡೆ ಮಾಡಿದ ಮೊದಲ ಕಂಪನಿಯಾಗಲಿದೆ. ಇದರ ನಂತರ 2022ರ ದ್ವಿತೀಯಾರ್ಧದ ವೇಳೆಗೆ ಶಿಯೋಮಿಯಿಂದ 200ಎಂಪಿ ಕ್ಯಾಮೆರಾ ಫೋನ್ ಅನ್ನು ಬಿಡುಗಡೆ ಮಾಡಬಹುದು. ಸ್ಯಾಮ್ ಸಂಗ್ 2023 ರಲ್ಲಿ 200ಎಂಪಿ ಕ್ಯಾಮೆರಾ ಫೋನ್ ಅನ್ನು ಬಿಡುಗಡೆ ಮಾಡಬಹುದು.
ಮೊಟೊರೊಲಾದ ಪ್ರಮುಖ ಸ್ಮಾರ್ಟ್ ಫೋನ್​ಗಳು.
ಮೊಟೊರೊಲಾದ ಮುಂಬರುವ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಬಗ್ಗೆ ಹೇಳುವುದಾದರೆ, ಕಂಪನಿಯು 2022 ರ ವೇಳೆಗೆ 50ಎಂಪಿ ಕ್ಯಾಮೆರಾಗಳೊಂದಿಗೆ 200ಎಂಪಿ ಕ್ಯಾಮೆರಾ ಸೆನ್ಸರ್ ಗಳನ್ನು ನೀಡಬಹುದು. ಸದ್ಯ ಮೊಟೊರೊಲಾ ಎಡ್ಜ್ 20 ಸ್ಮಾರ್ಟ್ ಫೋನ್ ಗಳು ಮಾರಾಟಕ್ಕಿವೆ. ಇದು 108ಎಂಪಿ ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ. ಇದಲ್ಲದೆ, ಮೋಟೋ 108ಎಂಪಿ ಕ್ಯಾಮೆರಾ ಸೆನ್ಸರ್ ನೊಂದಿಗೆ ಮಧ್ಯಮ ಶ್ರೇಣಿಯಲ್ಲಿ ಮೋಟೋ ಜಿ60 ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ.

Latest article