Thursday, January 27, 2022

ಮಲ್ಪೆ ಬಂದರಿನಲ್ಲಿ ಹೂಳೆತ್ತದೆ ಮೂರು ವರ್ಷ: ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಬಂದರು ಇಲಾಖೆ‌

Must read

ಉಡುಪಿ: ಕರಾವಳಿಯ ಅತೀ ದೊಡ್ಡ ಸರ್ವಋತು ಮೀನುಗಾರಿಕಾ ಬಂದರು ಬಹಳ ದೊಡ್ಡ ದುರಂತವನ್ನು ಎದುರು ನೋಡುತ್ತಿದೆ. ಮಲ್ಪೆ ಬಂದರಿನಲ್ಲಿ ಹೂಳೆತ್ತದೆ ಮೂರು ವರ್ಷ ಕಳೆದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಹೂಳೆತ್ತದಿರುಬವುದರಿಂದ ಯಾರಾದರೂ ಆಯಾತಪ್ಪಿ ನೀರಿಗೆ ಬಿದ್ದರೆ, ಈಜು ಗೊತ್ತಿದ್ದರೂ ಬದುಕುವುದು ಕಷ್ಟವಾಗಿದೆ. 30 ರಿಂದ 40 ಅಡಿಯಿರುವ ಈ ಧಕ್ಕೆಯಲ್ಲಿ ನೀರಿಗಿಂತ ಹೂಳೆ ತುಂಬಿಕೊಂಡಿದೆ. ಮೀನುಗಾರಿಕೆ ನಡೆಸುವುದು ಸಮುದ್ರದಲ್ಲಿಯಾದರೂ ಮತ್ಸ್ಯ ಬೇಟೆ ಮುಗಿಸಿ ಬಂದ ಹಡಗುಗಳು ನಿಲ್ಲುವುದು ಬಂದರಿನಲ್ಲಿ. ಬಂದರಿನಲ್ಲೇ ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುತ್ತೆ.

ಆದರೆ, ಕರಾವಳಿ ಸರ್ವಋತು ಬಂದರು ಅಂತ ಹೆಸರು ಪಡೆದ ಉಡುಪಿಯ ಮಲ್ಪೆ ಬಂದರಿನಲ್ಲಿ ನೀರಿಗಿಂತ ಹೆಚ್ಚು ಹೂಳು ತುಂಬಿಕೊಂಡಿದೆ. ಇದರಿಂದ ಬಂದರಿನಲ್ಲಿ ಹಡಗುಗಳು ಸಂಚಾರವೇ ಕಷ್ಟವಾಗುತ್ತೆ. ಹೂಳೆತ್ತುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ.

Latest article