Monday, November 29, 2021

ಪ್ರವಾಸಿಗರಿಗೆ ಬಿಸಿ ತುಪ್ಪವಾದ ಮಲ್ಪೆ ಸೈಂಟ್ ಮೇರಿಸ್ ದ್ವೀಪ

Must read

ಸೈಂಟ್ ಮೇರಿಸ್ ದ್ವೀಪ, ಕರಾವಳಿ ಪ್ರವಾಸೋದ್ಯಮದ ಹೆಮ್ಮೆಯ ಗರಿಮೆ, ದೇಶದಲ್ಲೇ ಪ್ರಸಿದ್ಧಿ ಪಡೆದ ಪ್ರವಾಸಿಗರ ಮೆಚ್ಚಿನ ತಾಣ. ಇಂತಹ ಸೈಂಟ್ ಮೇರಿಸ್ ದ್ವೀಪವೀಗ ಬಲು ದುಬಾರಿ . ದರ ಹೆಚ್ಚಳದಿಂದ, ಬಡವರು, ದಡದಿಂದಲೇ ಐಲ್ಯಾಂಡ್ ನೋಡಿ ವಾವ್ ಎನ್ನುವಂತಾದ್ರೆ, ಹಣ ಇದ್ದವರು ಐಸ್ಲ್ಯಾಂಡ್‌ಗೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ.

ಉಡುಪಿಯ ಪ್ರಸಿದ್ಧ ಸೈಂಟ್ ಮೇರಿಸ್ ದ್ವೀಪದ ಸದ್ಯದ ಸ್ಥಿತಿಯಲ್ಲಿ ಹೇಳೋದಾದ್ರೆ ಇದು ಶ್ರೀಮಂತರ ಐಲ್ಯಾಂಡ್‌. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಹಲವಾರು ಬೀಚ್ ಇದ್ರೂ ಪ್ರವಾಸಿಗರಿಗೆ ಮುಕ್ತವಾಗಿರುವ ಐಲ್ಯಾಂಡ್ ಅಂತ ಇರೋದು, ಉಡುಪಿಯ ಮಲ್ಪೆಯಿಂದ ಆರು ಕಿಲೋಮೀಟರ್ ದೂರದಲ್ಲಿ ಇರೋ ಸೈಂಟ್ ಮೇರಿಸ್ ದ್ವೀಪ ಮಾತ್ರ.

ಸದ್ಯ ದ್ವೀಪಕ್ಕೆ ಹೋಗುವ ಹಡಗುಗಳ ದರ ಮಾತ್ರ ಬಲು ದುಬಾರಿ ಆಗಿ, ಪ್ರವಾಸಿಗರಿಗೆ ಬಿಸಿ ತುಪ್ಪವಾಗಿವಾಗಿದೆ. ಕಳೆದ ಬಾರಿ ಸೀವಾಕ್​ನಿಂದ 250 ಇತ್ತು ಈ ಬಾರಿ 300ರಷ್ಟು ಟಿಕೇಟ್ ದರ ಇದೆ. ಇನ್ನೂ ಮಲ್ಪೆ ಬೀಚ್‌ನಿಂದ 400 ಚಾರ್ಜ್ ಮಾಡ್ತಿದ್ದಾರೆ. ಇದ್ರ ಜೊತೆಗೆ ಪಾರ್ಕಿಂಗ್ ಮಾಡೋಕು ಹಣ ನೀಡುವ ಅನಿವಾರ್ಯತೆ ಪ್ರವಾಸಿಗನದ್ದು. 3 ವರ್ಷದಿಂದ 10 ವರ್ಷದ ಮಕ್ಕಳಿಗೆ ಸ್ಪಲ್ಪ ರಿಯಾಯಿತಿ ಹೊರತು ಪಡಿಸಿದ್ರೆ ಎಲ್ಲರಿಗೂ ಒಂದೇ ರೇಟ್.

ಇಷ್ಟು ಹಣ ಕೊಟ್ಟು ಐಲ್ಯಾಂಡ್ ಬಂದ್ರು ಕೇವಲ 1 ಗಂಟೆ ಮಾತ್ರ ನಿಲ್ಲೋಕೆ ಅವಕಾಶ ನೀಡಲಾಗುತ್ತಿದೆ. ಹಿಂದೆಲ್ಲ ಸರ್ಕಾರಿ ಶಾಲಾ ಮಕ್ಕಳು ಬಂದು ಐಲ್ಯಾಂಡ್ ಸೌಂದರ್ಯ ಸವಿಯುತ್ತಿದ್ದರು ಆದ್ರೀಗ ದುಬಾರಿ ದರದಿಂದ ಐಲ್ಯಾಂಡ್ ಹೋಗುವವರಲ್ಲಿ ಕೇವಲ ಉತ್ತರ ಶ್ರೀಮಂತ ಭಾರತದವರು ಮತ್ತು ಕೇರಳಿಗರು ಮಾತ್ರ ಕಂಡು ಬರುತ್ತಿದ್ದಾರೆ. ನಮ್ಮ ನಾಡಿನವರು ದುಬಾರಿ ಐಲ್ಯಾಂಡ್ ಹೋಗಲಾಗದೇ ದೂರವೇ ಉಳಿಯುವಂತಾಗಿದೆ.
ದ್ವೀಪದಲ್ಲೂ ಪ್ಲಾಸ್ಟಿಕ್‌ನಲ್ಲಿ ತಿಂಡಿ ತೆಗೆದುಕೊಂಡು ಹೋಗುವಂತಿಲ್ಲ ಹೀಗಾಗಿ ಅಲ್ಲೇ ಸಿಗುವ ಪುಡ್‌ಗಳನ್ನು ಖರೀದಿ ಮಾಡೋ ಅನಿವಾರ್ಯತೆ ಕೂಡ ಪ್ರವಾಸಿಗರದ್ದು.

ಕೊರೊನಾ ಕಾರಣದಿಂದ ಆರ್ಥಿಕವಾಗಿ ಕುಗ್ಗಿರುವ ಜನ ಐಲ್ಯಾಂಡ್ ಹೋಗಿ ಒಂದಷ್ಟು ಹೊತ್ತು, ನೆಮ್ಮದಿ ಇದ್ದು ಬರೋಣ ಅಂದ್ರೆ ದುಬಾರಿ ದರದಿಂದ ಸಾಧ್ಯ ಆಗ್ತಾ ಇಲ್ಲ, ಹೀಗಾಗಿ ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಾದ ಅಗತ್ಯತೆ ಇದೆ. ಇಲ್ಲವಾದರೆ ದರ ಹೀಗೆ ವರ್ಷ ವರ್ಷ ಏರುತ್ತಲೇ ಹೋಗಿ ಶ್ರೀಮಂತ ಐಲ್ಯಾಂಡ್ ಎನ್ನುವ ಹೆಸರು ಬಂದರು ಬರಬಹುದು.

Also read:  ದಬಾಂಗ್-3 ಸಿನಿಮಾದ ಟೈಟಲ್ ಸಾಂಗ್ ರಿಲೀಸ್

Latest article