Thursday, May 19, 2022

#TV5 ViralReal ಇದು ಬಾಂಗ್ಲದೇಶದ ಗರಿಗರಿ ನೋಟ್ ಪ್ರಿಂಟ್ ಫ್ಯಾಕ್ಟರಿಯ ಅಸಲಿ ಕತೆ

Must read

ಇದು ವೈರಲ್ ಸುದ್ದಿಯ ರಿಯಲ್ ಕತೆ : 1000, 500 ರೂಪಾಯಿ ಹಳೆಯ ನೋಟ್ ಬ್ಯಾನ್ ಆಗಿದ್ದೇ ತಡ, ಒಂದಲ್ಲಾ ಒಂದು ಸುದ್ದಿ ನೋಟ್‌ಗಳ ಬಗ್ಗೆ ಹರಿದಾಡ್ತಾ ಇದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪಾರುಪತ್ಯ ಸಾಧಿಸಿ ಬಿಟ್ಟಿದೆ. ಈ ಮೂಲಕ ನಮಗೂ ನಿಮಗೆಲ್ಲಾ ಇದು ಹೌದಾ..? ಹೀಗೆ ಬರ್ತಾ ಇದ್ಯಾ..? ಹಾಗೇ ಹೀಗೆ ಅಂತ ಸುದ್ದಿಗೆ ಹೇಳಿದ್ದು ಆಯ್ತು. ಈಗ ಮತ್ತೊಂದು ಸುದ್ದಿ ಹರಿದಾಡ್ತಾ ಇದೆ. ಆ ಸುದ್ದಿ ಏನು, ಈ ಸ್ಟೋರಿ ಓದಿ..

ಕಳೆದ ವರ್ಷ 1000ರ, 500 ರೂಪಾಯಿ ನೋಟು ಬ್ಯಾನ್ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದೇ ತಡ, ಅದೆಷ್ಟೋ ಮಂದಿ, ಹಾರ್ಟ್ ನಿಂತಂತೆ ಆಗಿತ್ತು. ಇಳಿ ಸಂಜೆಯ ಹೊತ್ತಲ್ಲಿ, ಶುಕ್ರವಾರದ ರಾತ್ರಿ ಮೋದಿ ಸರ್ಕಾರ ಬೀಸಿದ ಈ ಚಾಟಿ ಏಟಿಗೆ, ತರ ತರ ಅಂತ ಒದ್ದಾಡಿದವರು ಎಷ್ಟೋ. ಶುಭ ಕಾರ್ಯಗಳನ್ನ ಇಟ್ಟುಕೊಂಡ ಪೋಷಕರು ಬಿದ್ದ ಪಡಿಪಾಟಲು, ಕಷ್ಟ, ಅಬ್ಬಾ ಇನ್ನೂ ಮರೆಯೋಕೆ ಆಗಿಲ್ಲ ಅನಿಸುತ್ತದೆ.

ಬ್ಯಾಂಕ್ ಮುಂದೆ ಸಾಲುಗಟ್ಟಿ, ನಿಮ್ಮದೇ ದುಡ್ಡಿಗೆ ಭಿಕ್ಷುಕರಂತೆ ನಿಂತ ಕ್ಷಣಗಳನ್ನು ಹೇಗೆ ತಾನೇ ಮರೆಯೋಕೆ ಆಗುತ್ತದೆ ಅಲ್ವಾ..? ಬ್ಯಾಂಕ್‌ನ ಮುಂದೆ ಎಲ್ಲೆಲ್ಲೂ ಕ್ಯೂ, ಎಲ್ಲೆಲ್ಲೂ ರಷ್. ಒಂದು ಸಾವಿರ, ಐದು ನೂರು ರೂಪಾಯಿ ಬ್ಯಾನ್ ಆಗಿದ್ದೇ ತಡ, ದೇಶದಲ್ಲಿ ಆರ್ಥಿಕ ಅಸ್ಥಿರತೇನೇ ಉಂಟಾಗಿ ಬಿಡ್ತು ಎಂದು ಅನೇಕರು ಹೌಹಾರಿದ್ದೂ ಉಂಟು..

ನೋಟ್‌ ಬ್ಯಾನ್‌ ಬಳಿಕ ಬಾಂಗ್ಲಾದೇಶದಲ್ಲಿ ಪ್ರಿಂಟ್‌ ಆಗ್ತಾ ಇದ್ಯಾ ನಕಲಿ ನೋಟ್.?

ಇನ್ನೂ ತಮ್ಮ ಮಗಳು, ಮಗ ಮದುವೆ ಮಾಡೋಕೆ ರೆಡಿಯಾಗಿದ್ದ ಪೋಷಕರು, ಹೊಂದಿಸಿದ್ದ ಹಣವನ್ನ, ಬಾಣಸಿಗರು, ಚೌಟರಿಯವರು, ತಗೊಳ್ಳದ ಪರಿಸ್ಥಿಯಲ್ಲಿ ವಿಲವಿಲ ಅಂತ ಒದ್ದಾಡಿದ್ರು. ದೇವರೇ ಏನಪ್ಪ ಮಾಡಲಿ. ಹೇಗೆ ಮಗ, ಮಗಳ ಮದುವೆ ಮಾಡಲಿ ಎಂದು ತಲೆಮೇಲೆ ಕೈಹೊತ್ತು ಕುಳಿತವರೂ ಹೆಚ್ಚಿದ್ದರು. ಇರೋ ಹಣವನ್ನು ಬದಲಾವಣೆ ಮಾಡಿಕೊಂಡು ಹೇಗಾದರೂ ಮಾಡಿ ಮಂಗಳ ಕಾರ್ಯ ಮಾಡಿಯೇ ತೀರಬೇಕು ಅಂತ ಹೊರಟವರು ಹೇಗೋ ಗೆದ್ದುಬಿಟ್ರು..

ಕಾಲ ಈಗ ಎಲ್ಲವನ್ನು ಮರೆಸಿಬಿಟ್ಟಿದೆ. ಆ ದಿನಗಳನ್ನು ಹಿಂದೆ ಹಾಕಿ, ಮುಂದೆ ತಳ್ಳಿದೆ. ನೋಟು ಅಮಾನ್ಯೀಕರಣದ ಸಂದರ್ಭ, ಪರಿಸ್ಥಿತಿ, ಈಗ ಕೇವಲ ಇತಿಹಾಸದ ಪುಟಗಳು. ನಾವು ನೀವೆಲ್ಲಾ ಮರೆತು, ಹೊಸ ಗರಿ ಗರಿ ನೋಟಿನ ಚಲಾವಣೆಯಲ್ಲಿ ಬೆರೆತು, ದಿನ ಕೆಳೆಯುತ್ತಿದ್ದೇವೆ…

[story-lines]

ಆದರೇ, ಹೊಸ ನೋಟಿನ ಬಗ್ಗೆ, ಹೊಸ ಬಗೆಯ ಸುದ್ದಿಗಳು, ಹೊಸ ಬಗೆಯ ಕತೆಗಳು, ದಿನೇ ದಿನೇ ಇಂದಿನ ಫವರ್ ಪುಲ್ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ. ಸರ ಸರನೆ ಅತ್ತಿಂದ ಇತ್ತಿಂದ ವೈರಲ್ ಆಗಿ, ಇಡೀ ಜಗತ್ತಿಗೆ ಕ್ಷಣ ಮಾತ್ರದಲ್ಲಿ ಹರಡ್ತಾ ಇವೆ. ಎಲ್ಲನ್ನು ಬೆರಗು ಗೊಳಿಸಿ, ವೈರಲ್‌ಗೆ ಮಾರುಗೊಳಿಸಿ, ಸದ್ದು ಮಾಡ್ತಿವೆ…

Also read:  ಸ್ವಚ್ಛ ಪರಿಸರದ ಸಂಕಲ್ಪ ಮಾಡೋಣ ಬನ್ನಿ

ಈ ಹೊಸ ನೋಟಿನ ಸುದ್ದಿಯಲ್ಲಿ, ಹೊಸ ಕತೆಯಲ್ಲಿ ಹರಿದಾಡುತ್ತಿವ ವೈರಲ್ ಸುದ್ದಿಯೇ, ಬಾಂಗ್ಲಾ ಕಾರ್ಖಾನೆಯಲ್ಲಿ ತಯಾರಾಗುತ್ತಿವೆ ಕಂತೆ ಕಂತೆ ನಕಲಿ ನೋಟುಗಳು..! ಎಂಬ ತಲೆ ಬುಡ ಇಲ್ಲದ ಸುದ್ದಿ. ಈ ಸುದ್ದಿ ಎಷ್ಟು ಸತ್ಯವೋ, ಎಷ್ಟು ಸುಳ್ಳೋ ತಿಳಿಯದ ಸಾಮಾಜಿಕ ಮಾಧ್ಯಮ ಬಳಸೋ ನಾವು ನೀವೆಲ್ಲಾ, ಸುದ್ದಿ ಬಂದಿದ್ದೇ ತಡ, ಫಾರ್ವಡ್, ಫಾರ್ವಡ್. ಇದಕ್ಕೆ ಹೌದಾ..? ನಿಜನಾ..? ರಿಪ್ಲೆೈಗಳು…

Also read:  ತೂತುಕುಡಿಯಿಂದ 3 ಕಿ.ಮೀ.ದೂರದ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ಕ್ಯಾನ್ಸರ್ ರೋಗಿ!

ಅಷ್ಟಕ್ಕೂ ಈ ಸುದ್ದಿ ನಿಜನಾ..? ಬಾಂಗ್ಲಾ ಕಾರ್ಖಾನೆಯಲ್ಲಿ ತಯಾರಾಗ್ತಿದೆಯ ಭಾರತದ ಕರೆನ್ಸಿ ನೋಟುಗಳು..? ಹೀಗೆ ತಯಾರಾಗಿ ಅಯ್ಯೋ ಈಗಾಗಲೇ ಚಲಾವಣೆಯಲ್ಲಿ ಇರಬೇಕು. ಹೊಸ ನೋಟ್ ಬೇರೆ ಯಾವುದು ನಕಲಿ, ಯಾವುದು ಅಸಲಿ ಗುರ್ತಿಸೋದೇ ಕಷ್ಟ. ಈ ನಡುವೆ ಇದೊಂದು ನಕಲಿ ನೋಟು ಬೇರೆ. ಅಬ್ಬಾ ಹೇಗಪ್ಪಾ ಗುರ್ತಿಸೋದು ಅಂತ ಸುದ್ದಿ ಓದಿದ ತಕ್ಷಣ ನೀವೆಲ್ಲಾ ಉದ್ಗಾರ ತೆಗೆದು ಬಿಟ್ಟೋರಿರಬೇಕು.

ಬಾಂಗ್ಲಾದೇಶದ ಕಾರ್ಖಾನೆಯಲ್ಲಿ ಭಾರತದ ನೋಟ್‌ ಪ್ರಿಂಟ್‌ ವೀಡಿಯೋ ವೈರಲ್

ಇದಕ್ಕೆ ಟಾಂಗ್ ಕೊಡುವಂತೆ ಈ ವಿಡೀಯೋ ಬೇರೆ.. ಕಾರ್ಖಾನೆಯಲ್ಲಿ ವ್ಯಕ್ತಿಯೊಬ್ಬ 50 ಮತ್ತು 200 ರೂಪಾಯಿ ಮುಖಬೆಲೆಯ ಹೊಸ ನೋಟುಗಳ ಕಂತೆ ಕಂತೆ ಜೋಡಿಸ್ತಾ ಇರೋದು. ಇಡೀ ಹೀಗೆ ಕಾರ್ಖಾನೆಯೇ ನೋಟುಗಳ ಕಂತೆಯಿಂದ ತುಂಬಿ ಹೋಗಿರೋದು. ಅಬ್ಬಾ ಇಷ್ಟು ನಕಲಿ ನೋಟ್ ಪ್ರಿಂಟ್ ಮಾಡ್ತಾರಾ ಎಂಬ ಆಶ್ಚರ್ಯವನ್ನು ಹುಟ್ಟು ಹಾಕಿಸಿರಬೇಕು….

ಅಷ್ಟಕ್ಕೂ ಇದು ನಕಲಿ ನೋಟು ತಯಾರಿಸುವ ಕಾರ್ಖಾನೆಯೇ ಎಂಬ ಕ್ಷಣಕಾಲದ ಯೋಚನೆ ಕೂಡ ಮಾಡದೇ, ನಾವು ನೀವೆಲ್ಲಾ, ಪಟ್ ಪಟ್ ಅಂತ ಫಾರ್ವಡ್ ಮಾಡಿ ಬಿಟ್ವಿ. ಬಾಂಗ್ಲಾದೇಶದಿಂದ ಇಂತಹ ನಕಲಿ ನೋಟಿನ ಕಾರ್ಖಾನೆ ಇದೆ. ಇಲ್ಲಿಂದ ನಕಲಿ ಹೊಸ ನೋಟು ಭಾರತಕ್ಕೆ ಬರ್ತಾ ಇದೆಯಂತೆ ಎಚ್ಚರ ಎಂದು ಎಚ್ಚರಿಸಿದ್ರಿ. ವೀಕ್ಷಕರೇ ನಿಮ್ಮ ಈ ಕಾಳಜಿಗೆ ಥ್ಯಾಂಕ್ಸ್. ನಿಮ್ಮ ಈ ಜಾಗೃತಿಗೆ ಬೇಷ್. ಆದರೇ ಈ ವಿಡಿಯೋ ಹಿಂದಿನ ಅಸಲಿ ಕತೆಯೇ ಬೇರೆ…

ಓದುಗರೇ, ಬಾಂಗ್ಲಾದೇಶದ ಕರೆನ್ಸಿ ಪ್ರಿಂಟ್ಟಿಂಗ್ ವಿಡಿಯೋ ಕೇವಲ ವೈರಲ್. ಇಂತಹ ಯಾವುದೇ ಕಾರ್ಖಾನೇ, ಭಾರತೀಯ ರಿಸರ್ವ್ ಬ್ಯಾಂಕ್ ಒಡೆತನದಲ್ಲಿ ಇರದೇ, ಮತ್ತೆ ಬೇರೆ ಹೊರಗಿನ ಎಲ್ಲಿಯೂ ಇಲ್ಲ. ಹೀಗೆ ಇರೋಕು ಸಾಧ್ಯವಿಲ್ಲ. ಅನ್ನು ಮೊದಲು ಮನದಟ್ಟು ಮಾಡ್ಕೊಳ್ಳಿ. ಯಾವುದೇ ಕಾರಣಕ್ಕೂ ನಕಲಿ ನೋಟ್ ಪ್ರಿಂಟ್ ಕಾರ್ಖಾನೆ, ಮಿಷಿನ್ ಇದೆ ಎನ್ನೋದನ್ನು ನಿಮ್ಮ ತಲೆಯಿಂದ ದೂರ ಸರಿಸಿಬಿಡಿ.

ಯಾಕೆಂದರೇ ಅದಕ್ಕೆ ನಮ್ಮ ಕ್ರೈಬ್ರಾಂಟ್, ಸಿಸಿಬಿ ಸೇರಿದಂತೆ ಸ್ಟ್ರಾಂಗ್ ಆಗಿರೋ ಪೊಲೀಸ್ ಇಲಾಖೆ ಅವಕಾಶವನ್ನೇ ಕೊಡೋದಿಲ್ಲ. ಕದೀಮರನ್ನು, ಹೀಗೆ ಮಾಡಿ, ಕಲರ್ ಪ್ರಿಂಟ್ ತೆಗೆದು ಕಂಬಿ ಹಿಂದೆ ಬಿದ್ದವರೇ ಹೆಚ್ಚು. ಇನ್ನೂ ಹೀಗೊಂದು ಕಾರ್ಖಾನೆ ಮಾಡಿ, ಹೀಗೆ ವಿಡೀಯೋ ಮಾಡಿ ಬಿಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ಹಾಕ್ಬಿಟ್ರೇ ಸುಮ್ಮನೇ ಬಿಟ್ಟಾರಾ ಹೇಳಿ..?

ಮಕ್ಕಳ ಆಟಿಕೋ ನೋಟ್‌ ಪ್ರಿಂಟ್‌ ಮಾಡೋ ಕಾರ್ಖಾನೆ

ಇದು ನೆವರ್.. ಇದು ಸಾಧ್ಯವಿಲ್ಲ… ಎಂತೆಂಥ ಕದೀಮರನ್ನು ಎಡೆಮುರಿಕಟ್ಟಿರೋ ನಮ್ಮ ದೇಶದ, ರಾಜ್ಯದ ಪೊಲೀಸರು, ಇಷ್ಟರ ಹೊರಗೆ, ಇಂತವರನ್ನು ಹೇಗೆ ತಾನೇ ಬಿಟ್ಟು ಬಿಡುತ್ತೆ ಹೇಳಿ..? ಹೇಗೆ ತಾನೇ ಬಂಧಿಸಿ, ಕಂಬಿ ಹಿಂದೆ ತಳ್ಳಿ, ದಿನಗಳನ್ನು ಏಣಿಸದೇ ಬಿಡುತ್ತದೆ ಅಲ್ವಾ..?

ಹೌದು, ಹಾಗೆ ಮಾಡೇ ಬಿಡುತ್ತದೆ. ಹೀಗೆ ಪುಲ್ ಸ್ಕ್ಟೀಕ್ಟ್, ಪುಲ್ ಫವರ್ ಪುಲ್ ಪೊಲೀಸ್ ಇಲಾಖೆ ಇರುವಾಗ ಅದ್ಯಾವ ಬಾಂಗ್ಲಾದೇಶದ ನೋಟು ನಮ್ಮ ಭಾರತಕ್ಕೆ ಕಾಲಿಡುತ್ತದೆ..? ಹೀಗೆ ಒಂದು ವೇಳೆ ಕಾರ್ಖಾನೆ ಇದ್ದರೇ, ಇಂಟರ್ ಕ್ರೈಂ ಪೊಲೀಸ್ ಟೀಮ್ ಬಿಟ್ಟು ಇದುವರೆಗೆ ಸುಮ್ಮನಿರುತ್ತಾ..? ನೋ ನೆವರ್. ಇದು ಕೇವಲ ಫೇಕ್ ನ್ಯೂಸ್. ಬಾಂಗ್ಲಾನೂ ಅಲ್ಲ, ಬೇರೆ ದೇಶಾನೂ ಅಲ್ಲ. ಇದು ಅಲ್ಲಿ ಇಲ್ಲಿ ಸಿಕ್ಕ ವಿಡೀಯೋ ಇಟ್ಟು ಎಡಿಟ್ ಮಾಡಿ, ವೈರಲ್ ಮಾಡಿದ ವಿಡೀಯೋ, ವೈರಲ್ ಮಾಡಿದ ಸುದ್ದಿ ಅಷ್ಟೇ…

Also read:  ರೇವಣ್ಣ ಕುಟುಂಬದವರು ಜನರ ಪ್ರಾಣ ಹಿಂಡುತ್ತಿದ್ದಾರೆ ಅವರನ್ನು ಸೋಲಿಸಿಬಿಡು: ಹಾಸನಾಂಬೆಗೆ ಭಕ್ತನ ಪತ್ರ
Also read:  ಲಾಕ್​​​ಡೌನ್​​​ ಬಳಿಕ ಮೊದಲು ರಿಲೀಸ್​ ಸಿನಿಮಾ ಯಾವುದು?

ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ, ಕ್ಷಣ ಮಾತ್ರದಲ್ಲಿ ವೈರಲ್ ಆಗಿ ಬಿಡ್ತು. ಇದನ್ನು ನಾವು ನೀವು, ನಂಬದೇ, ನಿಜಾ ಇರಬಹುದು ಎಂದೇ ಭಾವಿಸಿ, ಆ ಗ್ರೂಪ್‌ಗೆ, ಈ ಗ್ರೂಪ್‌ಗೆ ಫಾರ್ವಡ್ ಮಾಡಿ, ಮತ್ತಷ್ಟು ವೈರಲ್ ಮಾಡಿದ್ವಿ. ಆದರೇ ಆರ್‌ಬಿಐ ನಕಲಿ ನೋಟುಗಳ ಹಾವಳಿ ನಿಲ್ಲಿಸಲು ಶತಪಥ ಪ್ರಯತ್ನ ಮಾಡ್ತಾ ಇದೆ. ಕ್ಷಣ ಕ್ಷಣಕ್ಕೂ ಹದ್ದಿನ ಕಣ್ಣನ್ನು ಇಟ್ಟಿದೆ..

ಹೀಗೆ ಹದ್ದಿನ ಕಣ್ಣನ್ನು ಇಟ್ಟಿದ್ದರೂ, ಹಳೆ ನೋಟು ನಿಷೇಧದ ನಂತ್ರವೂ, ನಕಲಿ ನೋಟುಗಳ ಹಾವಳಿ ಪತ್ತೆಯಾಗ್ತಾ ಇದೆ. ಜೊತೆಗೆ ಇದಕ್ಕೆ ಮತ್ತಷ್ಟು ಹುರುಪು ನೀಡಿದಂತೆ, ಈ ವಿಡೀಯೋ ಮೂಲಕ ಸದ್ದು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್

ಕಾರ್ಖಾನೆಯಲ್ಲಿ ವ್ಯಕ್ತೆಯೊಬ್ಬ 50 ಮತ್ತು 200 ರೂ ಮುಖಬೆಲೆಯ ಹೊಸ ನೋಟುಗಳ ಕಂತೆಯನ್ನು ಜೋಡಿಸ್ತಾ ಇದ್ದಾನೆ. ಇಡೀ ಕಾರ್ಖಾನೆಯು ನೋಟುಗಳ ಬಂಡಲ್‌ಗಳಿಂದ ತುಂಬಿ ಹೋಗಿದೆ. ಹೀಗೆ ಹರಿದಾಡುವ ವಿಡೀಯೋ ಕೆಳಗೆ ಬಾಂಗ್ಲಾದೇಶದಲ್ಲಿ ನಕಲಿ ನೋಟುಗಳನ್ನು ತಯಾರಿಸುವ ಕಾರ್ಖಾನೆ ಎಂಬುದಾಗಿ ಅಡಿಬರಹ ಬೇರೆ. ಹೀಗೆ ವಿಡಿಯೋ ನೋಡಿದ ತಕ್ಷಣ ಯಾರು ತಾನೇ ನಂಬೋಲ್ಲ ಅಲ್ವಾ..?

ಆದರೇ ಈ ವೀಡಿಯೋದಲ್ಲಿ ಇರುವಂತೆ, ನಿಜಕ್ಕೂ ನಕಲಿ ನೋಟುಗಳ ತಯಾರಿಕೆ ಕಾರ್ಖಾನೆ ಬಾಂಗ್ಲದೇಶದಲ್ಲಿ ಇದ್ಯಾ ಎಂಬುದ ಬಗ್ಗೆ, ನಮ್ಮ ವೈರಲ್ ಯಾವುದು, ರಿಯಲ್ ಯಾವುದು ತಂಡ ಬೆನ್ನು ಹತ್ತಿತು. ತನಿಖಾ ವರದಿಗಾರಿಕೆಯ ಮೂಲಕ ಇದರ ವಾಸ್ತವ ಸತ್ಯದ ಸಂಶೋಧನೆಗೆ ಇಳಿಯಿತು. ಆಗ ತಿಳಿದಿದ್ದೇ, ಇದು ಕೇವಲ ವೈರಲ್. ಇದು ಫೇಕ್ ನ್ಯೂಸ್ ಎಂಬ ವೈರಲ್ ವೀಡಿಯೋ ಹಿಂದಿನ ವಾಸ್ತವ ಸತ್ಯ..

ಇದು ಕೇವಲ ವೈರಲ್ ಸುದ್ದಿ. ಇದು ಕೇವಲ ಫೇಕ್‌ನ್ಯೂಸ್

ಓದುಗರೇ, ನಿಮ್ಮ ಕೈನಲ್ಲಿ ಮೊಬೈಲ್ ಇದ್ಯಾ..? ನಿಮ್ಮ ಮೊಬೈಲ್‌ನಲ್ಲಿ ಈ ವಿಡಿಯೋ ಇದ್ಯಾ..? ಸ್ವಲ್ಪ ಆ ವಿಡೀಯೋ ಓಪನ್ ಮಾಡಿ. ಸೂಕ್ಷ್ಮವಾಗಿ ಗಮನಿಸಿ…

ಏನಾದರೂ ಗೊತ್ತಾಯ್ತಾ ವೀಡಿಯೋದಲ್ಲಿನ ಸೂಕ್ಷ್ಮಗಳು..? ಇಲ್ವಾ..? ಮತ್ತೊಮ್ಮೆ ನೋಡಿ.., ಸೂಕ್ಷ್ಮ ದೃಷ್ಠಿಯಿಂದ, ಹದ್ದಿನ ಕಣ್ಣ ನೆಟ್ಟು ಆ ವೀಡಿಯೋ ನೋಡಿ. ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ ಎಂದು ನಮೂದಾಗಬೇಕಿದ್ದ ಸ್ಥಳದಲ್ಲಿ, ಇರೋದು ಚಿಲ್ಡ್ರನ್ ಬ್ಯಾಂಕ್ ಆಪ್ ಇಂಡಿಯಾ.. ಎಂದು ಬರೆಯಲಾಗಿದೆ..

ಹಾಗಾದರೇ ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ ಎಂಬಲ್ಲಿ ಯಾಕೆ ಹೀಗೆ ಚಿಲ್ಡ್ರನ್ ಬ್ಯಾಂಕ್ ಆಪ್ ಇಂಡಿಯಾ ಅಂತ ಬರೆದಿದೆ ಎಂಬ ಯೋಚನೆ ಕೂಡ ನೀವು ಮಾಡಿಲ್ಲ ಅಲ್ವಾ..? ಯಾವುದೇ ಭಾರತೀಯ ನೋಟಿನಲ್ಲಿ ಹೀಗೆ ಬರೆಯಲಾಗಿದ್ಯಾ ವೀಕ್ಷಕರೇ..? ಬರೆದಿಲ್ಲ, ನಾವು ನೀವೆಲ್ಲಾ ಬಳಸ್ತಾ ಇರುವ ನೋಟಿನ ಮೇಲೆ ಬರೆದಿರೋದು, ಕೇವಲ ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ ಅಂತ ತಾನೇ..? ಹಾಗಿದ್ದಮೇಲೆ ಈ ವೀಡಿಯೋ ಎಷ್ಟು ಸುಳ್ಳು ಹೇಳ್ತಾ ಇದೆ ಅಂತ ಗೊತ್ತಾಯ್ತು ಅಲ್ವಾ..?

Also read:  ಈ ಐದು ಪ್ರಮುಖ ಆಟಗಾರರು ಏಕದಿನ ಪಂದ್ಯದಲ್ಲಿ ಸಿಕ್ಸರ್​​​​ ಬಾರಿಸಿದ ಇತಿಹಾಸವೇ ಇಲ್ಲ​​
Also read:  ಫ್ಯಾಂಟಂಗೂ ಮೊದಲೇ ಹೊಸ ಚಿತ್ರಕ್ಕೆ ಕಿಚ್ಚ ಗ್ರೀನ್​ಸಿಗ್ನಲ್

ಇನ್ನೂ ನೀವು ಕಂತೆ ಕಂತೆ ನೋಟು ತಯಾರಿಸಿ, ಈ ಕಾರ್ಖಾನೆಯಲ್ಲಿ ಇಡಲಾಗಿದ್ದನ್ನು ನೋಡ್ತಾ ಇದ್ದೀರಲ್ಲಾ, ಇವು ನಕಲಿ ನೋಟಲ್ಲ. ಬಾಂಗ್ಲಾದೇಶದಿಂದ ಭಾರತಕ್ಕೆ ನಕಲಿ ನೋಟು ಸರಬರಾಜು ಆಗ್ತಾ ನೂ ಇಲ್ಲ. ಬದಲಾಗಿ, ಮಕ್ಕಳಿಗೆ ಆಟ ಆಡೋಕೆ ಎಂದು ತಯಾರಿಸ್ತಾ ಇರೋ ಅಸಲಿ ನೋಟ್ ತರನೇ ಇರೋ ಚಿಲ್ಡ್ರನ್ ನೋಟ್ಸ್…

ಮೇಲ್ನೋಟಕ್ಕೆ ಇವು ಅಸಲಿ ನೋಟಿನ ತರ ಕಂಡ್ರೂ, ಅಸಲಿ ನೋಟಿಗೂ, ಈ ಮಕ್ಕಳಾಟದ ನೋಟಿಗೂ ತುಂಬಾನೇ ವ್ಯತ್ಸಾಸ ಇದೆ. ಅಲ್ಲದೇ ವೀಡಿಯೋದಲ್ಲಿನ ನೋಟುಗಳು, ಆರ್‌ಬಿಐ ಮುದ್ರಿಸಿದ ನೋಟ್‌ಗಿಂತ ದೊಡ್ಡದಾಗಿ ಕೂಡ ಇದ್ದಾವೆ. ಜೊತೆಗೆ 50, 200 ರೂಪಾಯಿಯಲ್ಲಿ ಸರಿಯಾದ ಜಾಗದಲ್ಲಿ ಇರಬೇಕಿದ್ದ ರೂಪಾಯಿ ಚಿನ್ಹೆ ನೋಡಿ ಎಲ್ಲಿದೆ..

ಈ ಎಲ್ಲಾ ಸೂಕ್ಷ್ಮಾತಿ ಸೂಕ್ಷ್ಮಗಳಿಂದ ವ್ಯತ್ಯಾಸವಿದ್ದು, ಈ ನೋಟುಗಳು ಮಕ್ಕಳಿಗಾಗಿ ತಯಾರಿಸಿರುವ ನೋಟುಗಳೇ ವಿನಹ, ಬದಲಾಗಿ ಬಾಂಗ್ಲಾದಿಂದ ತಯಾರಾಗಿ, ಭಾರತಕ್ಕೆ ಬರುತ್ತಿರುವ ನಕಲಿ ನೋಟುಗಳಲ್ಲ. ಕೇವಲ ಮಕ್ಕಳಿಗಾಗಿ ಆಟಕ್ಕೆ ತಯಾರಿಸಿರುವ ನೋಟುಗಳು.

ಇನ್ನೂ ಈ ವೀಡಿಯೋ ಎಲ್ಲಿಂದ ಉದ್ಬವ ಆಯ್ತು. ಯಾರು ಇದರ ಹಿಂದಿನ ಕಾರಣ ಕರ್ತರು ಎಂಬ ಮತ್ತಷ್ಟು ಕುತೂಹಲಕ್ಕೆ ಇಳಿದ ನಮ್ಮ ತಂಡಕ್ಕೆ, ಮೂಲ ಕಾರಣ ಕರ್ತನ ಮಾಹಿತಿ ಲಭ್ಯ ಆಗಷ್ಟು ವೀಡಿಯೋ ವೈರಲ್ ಆಗಿ ಹರಿದಾಡಿಬಿಟ್ಟಿತ್ತು. ಆದರೇ, ವೀಡಿಯೋದಲ್ಲಿ ಮರಾಠಿ ಮಾತನಾಡುತ್ತಿರುವುದು ಮಾತ್ರ ಕೇಳಿ ಬರುತ್ತಿರುವುದರಿಂದ, ಇದು ಭಾರತದಲ್ಲೇ ತಯಾರಾದ ಯಾರದೋ ಕೈಯ ಕರಾಮತ್ತು ಎಂದಷ್ಟೇ ಹೇಳಬಹುದು..

ಓದುಗರೇ, ಭಯಪಡಬೇಡಿ, ನಕಲಿ ನೋಟ್ ಪ್ರಿಂಟ್ ಆಗ್ತಾ ಇಲ್ಲ

ಸೋ ಬಾಂಗ್ಲಾ ಕಾರ್ಖಾನೆಯಲ್ಲಿ ಭಾರತೀಯ ನಕಲಿ ನೋಟು ತಯಾರಾಗ್ತಾ ಇಲ್ಲ. ಇದು ಕೇವಲ ವೈರಲ್ ವೀಡಿಯೋ ಎಂದು ಈಗ ಗೊತ್ತಾಯ್ತು ಅಲ್ವಾ ವೀಕ್ಷಕರೇ..? ಮತ್ತೆ ಹೀಗೆ ಯಾರಾದರೂ ಇಂತಹ ವೀಡೀಯೋ ಕಳಿಸಿದರೇ, ವೈರಲ್ ಆಗೋಕೆ ಬಿಡದೇ, ವಾಸ್ತವ ನಿಜಾಂಶವನ್ನು ಅವರಿಗೆ ತಿಳಿಸಿಕೊಟ್ಟು, ವೈರಲ್ ಆಗೋಕೆ ಬಿಡಬೇಡಿ…

ವಸಂತ ಬಿ ಈಶ್ವರಗೆರೆ, ನ್ಯೂಸ್ ಡೆಸ್ಕ್, ಟಿವಿ5

Latest article