₹5ಕೋಟಿ ವೆಚ್ಚದ ಸೆಟ್​ನಲ್ಲಿ ಕಿಚ್ಚ-ಜಾಕ್ವೆಲಿನ್​ ಡಾನ್ಸ್​​..!

ವಿಕ್ರಾಂತ್​ ರೋಣನಿಗೆ ಜೊತೆಯಾದ ಲಂಕೆಯ ಹಾಟ್​ ಬೆಡಗಿ..!
₹5ಕೋಟಿ ವೆಚ್ಚದ ಸೆಟ್​ನಲ್ಲಿ ಕಿಚ್ಚ-ಜಾಕ್ವೆಲಿನ್​ ಡಾನ್ಸ್​​..!

ಬುರ್ಜ್​ ಖಲೀಫಾ ಮೇಲೆ ವಿಕ್ರಾಂತ್​ ರೋಣ ಟೈಟಲ್​ ಲೋಗೋ ಲಾಂಚ್ ಆದ ಮೇಲೆ ಈ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಜಾಸ್ತಿಯಾಯ್ತು. ಸಿನಿಮಾ ಯಾವಾಗ ತೆರೆ ಕಾಣುತ್ತೆ ಅಂತ ಕಿಚ್ಚನ ಅಭಿಮಾನಿಗಳು ಕಾಯ್ತ ಇದ್ದಾರೆ. ಇದೀಗ ಚಿತ್ರದ ಚಿತ್ರೀಕರಣ ಕಂಪ್ಲೀಟ್​ ಆಗಿದ್ದು, ತೆರೆ ಕಾಣಲು ಕೆಲವೇ ದಿನಗಳು ಬಾಕಿ ಇದೆ. ಈ ಮಧ್ಯೆಯೇ ಚಿತ್ರದ ಬಗ್ಗೆ ಹೊಸ ಅಪ್ಡೇಟ್​ವೊಂದು ಸಿಕ್ಕಿದ್ದು, ಬಾಲಿವುಡ್​​​ ಹಾಟ್​ ಬೆಡಗಿ ಜಾಕ್ವೆಲಿನ್​ ಫರ್ನಾಂಡಿಸ್​ ಚಿತ್ರಕ್ಕೆ ಎಂಟ್ರಿಯಾಗಿದ್ದಾರೆ.

ವಿಕ್ರಾಂತ್​ ರೋಣದಲ್ಲಿ ಕಿಚ್ಚ ಸುದೀಪ್​ ಜೊತೆ ಜಾಕ್ವೆಲಿನ್​ ಫರ್ನಾಂಡಿಸ್ ಹೆಜ್ಜೆ ಹಾಕಿದ್ದಾರೆ. ಜಾನಿ ಮಾಸ್ಟರ್​ ಸಾರಥ್ಯದಲ್ಲಿ ಈ ಹಾಡು ಚಿತ್ರೀಕರಣಗೊಂಡಿದ್ದು, ಸುಮಾರು 4ರಿಂದ 5 ಕೋಟಿ ವೆಚ್ಚದ ಅದ್ಧೂರಿ ಸೆಟ್​ನಲ್ಲಿ​​ ಈ ಒಂದು ಸಾಂಗ್​ ಶೂಟ್​ ಮಾಡಲಾಗಿದೆಯಂತೆ.

ಜಾಕ್ವೆಲಿನ್​ ಫರ್ನಾಂಡಿಸ್ ಕೇವಲ ಸಾಂಗ್​ ಅಷ್ಟೇ ಅಲ್ಲಾ, ಚಿತ್ರದ ಪ್ರಮುಖ ದೃಶ್ಯಗಳಲ್ಲೂ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನು ಜಾಕ್ವೆಲಿನ್ ಡಾನ್ಸ್​ ಹಾಗೂ ಕೆಲಸದ ಮೇಲಿನ ಅವರ ಶೃದ್ಧೆಗೆ ಕಿಚ್ಚ ಕೂಡಾ ಫಿಧಾ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಸುದೀಪ್​ , ಸಾಂಗ್​ ಹಾಗೂ ಸಿನಿಮಾಗೆ ಹೊಸ ಎನರ್ಜಿ ತುಂಬಿದ ನಿಮಗೆ ಧನ್ಯವಾದಗಳು. ನಿಮ್ಮ ಡಾನ್ಸ್​ನಿಂದ ನಾನೂ ಎರಡೂ ಹೆಜ್ಜೆ ಜಾಸ್ತಿ ಹಾಕುವಂತಾಯಿತು ಎಂದು ಖುಷಿ ಹಂಚಿಕೊಂಡಿದ್ದಾರೆ.

ನಿನ್ನೆ ಚಿತ್ರದ ಶೂಟಿಂಗ್​ ಪೂರ್ಣಗೊಂಡಿದ್ದು, ಸುದೀಪ್ ಚಿತ್ರತಂಡಕ್ಕೆ ಭಾವುಕ ವಿದಾಯ ಹೇಳಿದ್ದಾರೆ. ಕಿಚ್ಚ ಸುದೀಪ್​ ಒಂದು ವರ್ಷಕ್ಕೂ ಹೆಚ್ಚು ಕಾಲ ವಿಕ್ರಾಂತ್​​ ರೋಣ ಚಿತ್ರಕ್ಕಾಗಿ ತೊಡಗಿಸಿಕೊಂಡಿದ್ದರು. ಇದೇ ಚಿತ್ರತಂಡ ಸುದೀಪ್​ ಅವರಿಗೆ ಮರೆಯಲಾಗದ ಸಿಹಿ ಉಡುಗೊರೆ ನೀಡಿರುವುದು ಗೊತ್ತೇ ಇದೆ. ಹೀಗಾಗಿ ಈ ಚಿತ್ರದ ಬಗ್ಗೆ ಕಿಚ್ಚ ಸುದೀಪ್​ಗೆ ಹೆಚ್ಚಿನ ಒಲವಿದ್ದು, ಇಷ್ಟು ದಿನ ಶೂಟಿಂಗ್​ನಲ್ಲಿ ಜೊತೆಯಾದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

ವಿಕ್ರಾಂತ್ ರೋಣ ಚಿತ್ರ ಘೋಷಣೆ ಆದಾಗ ಹಂಚಿಕೊಂಡಿದ್ದ ಫೋಟೋವನ್ನೇ ಮತ್ತೆ ತಮ್ಮ ಟ್ವಿಟರ್​ ಹಂಚಿಕೊಂಡಿರುವ ಕಿಚ್ಚ, ಕಳೆದ ವರ್ಷ ಮಾರ್ಚ್ 02ಕ್ಕೆ ಸಿನಿಮಾ ಪ್ರಾರಂಭವಾಗಿತ್ತು. ಒಂದೂವರೆ ವರ್ಷದ ಬಳಿಕ ನಿನ್ನೆ ಚಿತ್ರೀಕರಣ ಮುಗಿಸಿದ್ದೇವೆ. ಚಿತ್ರತಂಡವನ್ನು ಹಾಗೂ ಸೆಟ್ಗೆ ಹೋಗುವುದನ್ನು ನಾನು ತುಂಬಾ ಮಿಸ್ ಮಾಡಿಕೊಳ್ತೇನೆ ಎಂದಿದ್ದಾರೆ.

ಇನ್ನು ಚಿತ್ರದ ನಿರ್ದೇಶಕ ಅನೂಪ್​​​ ಭಂಡಾರಿ ಕೂಡ ವಿಕ್ರಾಂತ್​​ ರೋಣ ಚಿತ್ರೀಕರಣ ಕಂಪ್ಲೀಟ್​​ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಚಿತ್ರದ ಪ್ರತಿ ಹಂತದಲ್ಲೂ ಜೊತೆಗಿದ್ದವರಿಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನು ವಿಕ್ರಾಂತ್ ರೋಣದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಮುಗಿದಿವೆ ಎನ್ನುವ ಸುದ್ದಿಗಳು ಸಹ ಹರಿದಾಡುತ್ತಿದೆ. ಚಿತ್ರಕ್ಕೆ ನಿರ್ಮಾಪಕ ಜಾಕ್​ ಮಂಜು ಬಂಡವಾಳ ಹೂಡಿದ್ದು, ನಿರೂಪ್​ ಭಂಡಾರಿ, ನೀತಾ ಅಶೋಕ್​ ಲೀಡ್​ ರೋಲ್​ನಲ್ಲಿ ಮಿಂಚಿದ್ದಾರೆ.

ಈ ಹಿಂದೆ ಚಿತ್ರತಂಡ ಆಗಸ್ಟ್​ 19ಕ್ಕೆ ವಿಕ್ರಾಂತ್​ ರೋಣ ತೆರೆ ಕಾಣಲಿದೆ ಎಂದು ತಿಳಿಸಿತ್ತು. ಆದರೆ ಸಮಯ ಸಂದರ್ಭ ನೋಡಿಕೊಂಡು ರಿಲೀಸ್​ ಡೇಟ್​ ಬಗ್ಗೆ ಚಿತ್ರತಂಡ ನಿರ್ಧಾರ ಮಾಡುವ ಸಾಧ್ಯತೆ ಇದೆ.

ವರದಿ-ಮಲ್ಲಿಕಾ ಪೂಜಾರಿ

Related Stories

No stories found.
TV 5 Kannada
tv5kannada.com