Wednesday, May 18, 2022

ಸ್ವಂತ ಬ್ರ್ಯಾಂಡ್​ ಹುಟ್ಟುಹಾಕಿದ ಚಾಲೆಂಜಿಂಗ್​ ಸ್ಟಾರ್ ಪತ್ನಿ

Must read

ಸಾಮಾಜಿಕ ಕಾರ್ಯಗಳು, ರೈತ ಪರ ಕೆಲಸಗಳು ಅಂದ್ರೆ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಸದಾ ಮುಂದು. ಇದೀಗ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಪತ್ನಿ ವಿಜಯಲಕ್ಷ್ಮಿ. ರೀಸೆಂಟಾಗಿ ಆನ್​ಲೈನ್​ ಆ್ಯಪ್ ಮೂಲಕ ರೈತರಿಗೆ ನೆರವಾಗಿ ನಿಂತ ವಿಜಯಲಕ್ಷ್ಮಿ ಅವರಿಗೆ ಇಂದು ದೊಡ್ಡಮಟ್ಟದ ಶ್ಲಾಘನೆ ಸಿಕ್ಕಿದೆ.

ಚಾಲೆಂಜಿಂಗ್​ ಸ್ಟಾರ್ ಅಭಿನಯದ ಈ ಮಾಸ್​ ಡೈಲಾಗ್​ ಇವತ್ತು ಹೆಚ್ಚು ರಿಲವೆಂಟ್​ ಎನಿಸುತ್ತೆ. ಯಜಮಾನ ಚಿತ್ರದ ಈ ಡೈಲಾಗ್​ ಅಭಿಮಾನಿಗಳನ್ನ ರಂಜಿಸಿತ್ತು. ಆದರೆ, ಇಂದು ಇದೇ ಡೈಲಾಗ್​ ಸ್ವತಃ ದಚ್ಚುಗೆ ಖುಷಿ ಕೊಟ್ಟಿದೆ. ಅದಕ್ಕೆ ಕಾರಣ ಒನ್ ಅಂಡ್​ ಓನ್ಲಿ ದರ್ಶನ್​ ಅವರ ಧರ್ಮಪತ್ನಿ ವಿಜಯಲಕ್ಷ್ಮಿ.

ಯಜಮಾನ ಚಿತ್ರದ ಡೈಲಾಗ್​ಗೂ ದರ್ಶನ್​ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೂ ಏನ್​ ಸಂಬಂಧ ಅನ್ನೋದಾದ್ರೆ, ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ಮೈ ಫ್ರೆಶ್ ಬಾಸ್ಕೆಟ್ ಎಂಬ ಆನ್​​ಲೈನ್​ ಆ್ಯಪ್​ ಮಾಡುವ ಮೂಲಕ ರೈತರ ನೆರವಿಗೆ ನಿಂತಿದ್ದು ಗೊತ್ತೇಯಿದೆ. ಆ ಆ್ಯಪ್​ ನ್ನ ಬಳಸಿಕೊಂಡು ರೈತರು ನೇರವಾಗಿ ತಮ್ಮ ಉತ್ಪನ್ನಗಳನ್ನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಗ್ರಾಹಕರಿಂದ ನೇರವಾಗಿ ಹಣ ರೈತರಿಗೆ ಸಿಗುತ್ತಿತ್ತು. ಇದರಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿಯಾಗಲಿ, ಉತ್ಪನ್ನಗಳ ಬಗ್ಗೆ ಯಾವುದೇ ಅನುಮಾನಗಳಾಗಲಿ ಇರಲಿಲ್ಲ. ಇಂಥಾದ್ದೊಂದು ವಿಭಿನ್ನ ಆಲೋಚನೆ ಹಾಗೂ ಆ್ಯಪ್​ ಮೂಲಕ ವಿಜಯಲಕ್ಷ್ಮಿ ದರ್ಶನ್​ ಅವರು ನಾಡಿನ ರೈತರ ಸಹಾಯಕ್ಕೆ ನಿಂತಿದ್ದರು.

ಇಂಥಾದ್ದೊಂದು ಬ್ರಾಂಡ್​ ಹುಟ್ಟು ಹಾಕಿದ ವಿಜಯಲಕ್ಷ್ಮಿ ದರ್ಶನ್​ ಅವರ ಕಾರ್ಯಕ್ಕೆ ಇಂದು ದೊಡ್ಡಮಟ್ಟದ ಶ್ಲಾಘನೆ ಸಿಕ್ಕಿದೆ. ರೈತರ ಒಳಿತಿಗಾಗಿ ಮಾಡಿದ ಅವರ ಕಾರ್ಯದಿಂದಲೇ ವಿಜಯಲಕ್ಷ್ಮಿಯವರು ನಾಡಿನ ಉದಯೋನ್ಮುಖ ಮಹಿಳಾ ಉದ್ಯಮಿ ಎನ್ನುವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿಜಯಲಕ್ಷ್ಮಿಯವರು ಸದ್ದಿಲ್ಲದೇ ಮಾಡುತ್ತಿದ್ದ ಈ ಕಾರ್ಯವನ್ನ ಟೈಮ್ಸ್​ ಬ್ಸುಸಿನೆಸ್​ ಸಂಸ್ಥೆ ಗುರುತಿಸಿದೆ. ವಿಜಯಲಕ್ಷ್ಮಿಯವರ ಕಾರ್ಯವನ್ನ ಶ್ಲಾಘಿಸಿ ನಾಡಿನ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ. ಈ ಗೌರವದ ಬಗ್ಗೆ ಸ್ವತಃ ವಿಜಯಲಕ್ಷ್ಮಿ ದರ್ಶನ್ ತಮ್ಮ ಟ್ವಿಟರ್ ಖಾತೆಯಲ್ಲಿ ಸಂತೋಷವನ್ನ ಹಂಚಿಕೊಂಡಿದ್ದಾರೆ.

Also read:  ಅಂತರಿಕ್ಷದಲ್ಲಿ ಕಳೆದುಹೋದವರು ಏನಾಗುತ್ತಾರೆ?

ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅಂತೆಯೇ ವಿಜಯಲಕ್ಷ್ಮಿಯವರು ಕೂಡ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ದರ್ಶನ್​ ಅವರಂತೆಯೇ ಅವರು ಕೂಡ ರೈತರ ಸಹಾಯಕ್ಕೆ ನಿಂತಿದ್ದಾರೆ. ಸ್ವಂತ ಬ್ರಾಂಡ್​ ಕಟ್ಟುವ ಮೂಲಕ ಅನ್ನದಾತನ ಬೆನ್ನಿಗೆ ನಿಂತಿರೋದು ಖುಷಿಯ ವಿಚಾರ.

Latest article