Wednesday, May 18, 2022

ವಿದ್ಯಾರ್ಥಿಗಳು ಹಾಗೂ ವೃದ್ದರ ಮೇಲೆ ಹುಚ್ಚು ನಾಯಿ ದಾಳಿ: 20 ಮಂದಿ ಆಸ್ಪತ್ರೆಗೆ ದಾಖಲು

Must read

ತುಮಕೂರು: ಹುಚ್ಚು ನಾಯಿ ಕಚ್ಚಿ 20ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ನಡೆದಿದೆ.

ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಾಗೂ ವೃದ್ದರ ಮೇಲೆ ಹುಚ್ಚು ನಾಯಿ ಏಕಾಏಕಿ ದಾಳಿ ಮಾಡಿವೆ. ಸದ್ಯ ಗಾಯಗೊಂಡ 20 ಜನರಿಗೆ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತುರುವೇಕೆರೆಯಲ್ಲಿ ಬೀದಿನಾಯಿಗಳ ಕಾಟ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದೆ ಕಣ್ಣುಚ್ಚಿ ಕುಳಿತ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest article