ಅನ್ನಪೂರ್ಣಿ ಎಂಬ ಮಹಿಳೆ ತಾನು ಆದಿ ಪರಾಶಕ್ತಿ ದೇವರ ಅವತಾರ ಎಂದು ಹೇಳಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೂಲಗಳ ಪ್ರಕಾರ ಅನ್ನಪೂರ್ಣಿ ಚೆಂಗಲ್ಪಟ್ಟು ಜಿಲ್ಲೆಯ ತಿರುಪೋರೂರಿನಲ್ಲಿ ವಾಸಿಸುತ್ತಿದ್ದಾರೆ. ಆಕೆಯೇ ಆದಿ ಪರಾಶಕ್ತಿಯ ದೇವರ ಅವತಾರ ಎಂದು ಕರೆದುಕೊಂಡಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿವಾದಾತ್ಮಕ ಚರ್ಚೆಗಳು ಇದರ ಮೇಲಾಗುತ್ತಿವೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಅನ್ನಪೂರ್ಣಿ ರಾಜಗಾಂಭೀರ್ಯದಲ್ಲಿ ಕುಳಿತಿದ್ದಾಳೆ. ಆಕೆಯ ಭಕ್ತರೊಬ್ಬರು ಆಕೆಯ ಕಾಲುಗಳನ್ನು ಹಿಡಿದು ಕಿರುಚುತ್ತಿದ್ದಾರೆ ಮತ್ತು ಅಳುತ್ತಿದ್ದಾರೆ.
ಇತರ ಭಕ್ತರು ಕೈಗಳನ್ನು ಮೇಲೆತ್ತಿ ನಮಸ್ಕರಿಸುತ್ತಾ ಆಕೆಯನ್ನು ಪೂಜಿಸುತ್ತಿದ್ದಾರೆ. ಆಕೆ ಸಹ ಇದಕ್ಕೆ ಸಹಕರಿಸಿ ದೇವರ ಹಾಗೆಯೇ ಕುಳಿತು ಪೋಸ್ ಕೊಟ್ಟಿದ್ದಾಳೆ.
ದೇವರ ಹೆಸರಲ್ಲಿ ನಡೆಯುವ ಇಂತಹ ಕೃತ್ಯಗಳಿಂದ ಅಮಾಯಕರು ಹಣ ಕಳೆದುಕೊಂಡು ವಂಚನೆಗೆ ಒಳಗಾಗುತ್ತಾರೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು. ಹಾಗೆ ಇವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಸಹ ಆಗ್ರಹ ಮಾಡಿದ್ದಾರೆ.