Tuesday, May 17, 2022

ಮನುಷ್ಯನನ್ನು ಹೋಲುವ ಮರಿಗೆ ಜನ್ಮವಿತ್ತ ಮೇಕೆ..!

Must read

ಈ ಜಗತ್ತೆ ಒಂದು ಕೌತುಕದ ಗೂಡು..ದಿನನಿತ್ಯ ಸಾವಿರಾರು ಕುತೂಹಲಗಳು,ಕೌತುಕಗಳು ನಡೆಯುತ್ತಲೇ ಇರುತ್ತವೆ..ಇವು ನಂಬಲು ಅಸಾಧ್ಯವಾದರೂ ನಂಬಲೇ ಬೇಕಾದ ಸತ್ಯಗಳು.

ಅದೇ ರೀತಿಯ ಘಟನೆಯೊಂದು ಅಸ್ಸಾಂ ನಲ್ಲಿ ನಡೆದಿದೆ..ಇಲ್ಲಿನ ಕ್ಯಾಚಾರ್ ಜಿಲ್ಲೆಯಲ್ಲಿ ಮೇಕೆಯೊಂದು ಮನುಷ್ಯನನ್ನು ಹೋಲುವ ಮರಿಗೆ ಜನ್ಮ ನೀಡಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.

ಅಸ್ಸಾಂನ ಧೋಲೈ ವಿಧಾನಸಭಾ ಕ್ಷೇತ್ರದ ಗಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೇಕೆ ಮರಿ ಇನ್ನೂ ಬದುಕಿದೆ. ಮನುಷ್ಯನ ಹೋಲಿಕೆ ಹೊಂದಿರುವ ಮೇಕೆಯನ್ನು ಕಂಡು ಜನ ಅಚ್ಚರಿಗೊಂಡಿದ್ದಾರೆ. ಮೇಕೆ ಮರಿಯ ಕಣ್ಣು, ಮೂಗು ಮತ್ತು ಬಾಯಿ ಮನುಷ್ಯನಂತೆ ಇದ್ದು, ಅದರ ಕಿವಿಗಳು ಮಾತ್ರ ಮೇಕೆಯಂತಿದೆ. ಈ ವಿಚಾರ ಎಲ್ಲೆಡೆ ಹಬ್ಬುತ್ತಿದ್ದಂತೆಯೇ ಇಡೀ ಗ್ರಾಮದ ಜನರು ಅಪರೂಪದ ಮೇಕೆ ಮರಿಯನ್ನು ನೋಡಲು ಜಮಾಯಿಸಿದ್ದಾರೆ.

Latest article