Tuesday, May 17, 2022

ರತನ್ ಟಾಟಾ ಅವರ ಬರ್ತ್​ಡೇ ವಿಡಿಯೋದಲ್ಲಿದ್ದ ಯುವಕ ಯಾರು ಗೊತ್ತಾ..?

Must read

ಹಿರಿಯ ಉದ್ಯಮಿ ರತನ್ ಟಾಟಾ ಅವರ ಪರಿಚಯ ನೀಡುವ ಅಗತ್ಯವಿಲ್ಲ. ಯಾಕೆಂದರೆ ಅವರು ತಮ್ಮ ಕೆಲಸ ಮತ್ತು ಸರಳತೆಗಾಗಿ ವಿಶ್ವದ್ಯಾಂತ ಹೆಸರುವಾಸಿಯಾಗಿದ್ದಾರೆ.

ಮಂಗಳವಾರ (ಡಿಸೆಂಬರ್ 28) ಅವರ ಹುಟ್ಟುಹಬ್ಬವಿದ್ದು, 84ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

ಈ ಆಚರಣೆಯ ವೇಳೆಯೂ ಅವರು ಸರಳತೆ ಮೆರೆದಿದ್ದಾರೆ. ವಿಡಿಯೋದಲ್ಲಿ ರತನ್​ ಟಾಟಾ ಅವರು ಕುರ್ಚಿಯ ಮೇಲೆ ಕುಳಿತಿದ್ದಾರೆ ಮತ್ತು ಅವರ ಮುಂಭಾಗದ ಮೇಜಿನ ಮೇಲೆ ಸಣ್ಣ ಕಪ್‌ಕೇಕ್ ಇರಿಸಲಾಗಿದೆ. ಈ ಪುಟ್ಟ ಕೇಕ್ ಕತ್ತರಿಸುವ ಮೂಲಕ ಹಿರಿಯ ಉದ್ಯಮಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಮಯದಲ್ಲಿ, ಒಬ್ಬ ಯುವಕ ಅವರೊಂದಿಗೆ ಕುಳಿತಿರುವುದು ಕಂಡುಬರುತ್ತದೆ. ಆ ಯುವಕ ರತನ್ ಟಾಟಾ ಅವರ ಭುಜದ ಮೇಲೆ ಕೈ ಹಾಕಿ ಆತ್ಮೀಯವಾಗಿ ಕೇಕ್​ ತಿನ್ನಿಸುತ್ತಾರೆ.

ಈ ವಿಡಿಯೋ ಸದ್ಯ ವೈರಲ್​ ಆಗಿದ್ದು, ರತನ್​ ಟಾಟಾ ಅವರ ಜೊತೆಗಿರುವ ಯುವಕ ಯಾರು ಎನ್ನುವ ಕುತೂಹಲ ಎಲ್ಲರಿಗೂ ಕಾಡಿತ್ತು. ರತನ್ ಟಾಟಾ ಜೊತೆ ಕಾಣಿಸಿಕೊಂಡಿರುವ ಯುವಕನ ಹೆಸರು ಶಂತನು ನಾಯ್ಡು, ಶಂತನು ರತನ್ ಟಾಟಾ ಅವರ ಆಪ್ತ ಕಾರ್ಯದರ್ಶಿ. ಅವರು ಸುಮಾರು 3 ವರ್ಷಗಳಿಂದ ಟಾಟಾ ಗ್ರೂಪ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ರತನ್​ ಟಾಟಾ ಹಾಗೂ ಶಂತನು ಅವರ ಮಧ್ಯೆ ಉತ್ತಮ ಬಾಂಧವ್ಯವಿದ್ದು, ಶಂತನು ರತನ್​ ಟಾಟಾ ಅವರ ಯಂಗೆಸ್ಟ್​ ಫ್ರೆಂಡ್​​​​ ಅಂತಾ ಕೂಡ ಹೇಳಬಹುದು.

 

View this post on Instagram

 

A post shared by Viral Bhayani (@viralbhayani)

Latest article