age is just a number ಯಾವುದೇ ಕೆಲಸಕ್ಕೆ, ಯಾವುದೇ ಸಾಧನೆ, ಯಾವುದೇ ಕಲೆಗಾಗಲಿ ವಯಸ್ಸಿನ ಮಿತಿ ಇಲ್ಲ. ಮನಸ್ಸಿದ್ದರೆ ಮಾರ್ಗ, ಇಷ್ಟವಿರುವ ಕೆಲಸವನ್ನು ಮನಬಿಚ್ಚಿ ಮಾಡಲು ಯಾವುದೇ ಮಿತಿ ಇಲ್ಲ ಎನ್ನುವುದನ್ನು ಈ ಜೋಡಿ ಸಾಬೀತುಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೃದ್ಧ ಜೋಡಿಯ ಅಪೂರ್ವ ನೃತ್ಯ ಎಂತವರು ಮೆಚ್ಚುವಂತಿದೆ.
weddingbazaarofficial ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ವೃದ್ಧ ದಂಪತಿಯ ರೊಮ್ಯಾಂಟಿಕ್ ಹಾಗೂ ಎನರ್ಜಿಟಿಕ್ ವಿಡಿಯೋ ಸದ್ಯ ನೋಡುಗರ ಮನ ಗೆದ್ದಿದೆ. ಮದುವೆ ಸಮಾರಂಭದಲ್ಲಿ ಈ ಜೋಡಿ ತಮ್ಮ ವಯಸ್ಸು ಮರೆತು ಮನಬಿಚ್ಚಿ ನೃತ್ಯ ಮಾಡಿದ್ದು, ಯುವ ಜನತೆಯನ್ನು ನಾಚಿಸುವಂತಿದೆ.
ಸದ್ಯ ಈ ವಿಡಿಯೋ ನೋಡುಗರ ಮೆಚ್ಚುಗೆ ಪಡೆದಿದ್ದು, ವೃದ್ಧ ದಂಪತಿಯ ನೃತ್ಯಕ್ಕೆ ವಾವ್ ಎಂದಿದ್ದಾರೆ.
View this post on Instagram