Thursday, August 18, 2022

ಅಬ್ಬಬ್ಬಾ..! ಪುಟ್ಟ ಕೇಕು..ತಲೆ ಮೇಲೆ ಹ್ಯಾಟು..ಈ ಸಂಭ್ರಮ ನೀವು ನೋಡಲೇಬೇಕು..!

Must read

ಕೆಲವರಿಗೆ ಶ್ವಾನಗಳೆಂದರೆ ಅತಿಯಾದ ಪ್ರೀತಿ. ಅದನ್ನು ತಮ್ಮ ಮನೆಯ ಸದಸ್ಯನಂತೆ ಭಾವಿಸುತ್ತಾರೆ. ಮನೆಯ ಮಗುವಿನಂತೆಯೇ ಶ್ವಾನಗಳನ್ನು ಪ್ರೀತಿಯಿಂದ ಬೆಳೆಸುತ್ತಾರೆ. ಇನ್ನು ಅವುಗಳಿಗಾಗಿಯೇ ಸ್ಪೇಷಲ್​ ರೂಂ, ಅವುಗಳೊಂದಿಗೆ ಆಟ ಪಾಠ, ಇನ್ನು ಅವುಗಳ ಬರ್ತ್​ಡೇ ಕೂಡ ಸೆಲೆಬ್ರೇಟ್​ ಮಾಡುವವರನ್ನು ಸಹ ನಾವು ನೋಡಬಹುದು. ಆದರೆ ಬೀದಿ ನಾಯಿಗಳನ್ನು ಇಷ್ಟಪಡದ ವ್ಯಕ್ತಿ ತನ್ನ ಮನೆಯಲ್ಲಿನ ದುಬಾರಿ ನಾಯಿಗಳನ್ನು ಸಾಕಿದರೂ ಅದು ವ್ಯರ್ಥ ಎನ್ನುವ ಮಾತಿದೆ.

ಹಾಗಂತ ಎಲ್ಲಾ ಶ್ವಾನ ಪ್ರಿಯರು ಬೀದಿನಾಯಿಗಳ ಕಾಳಜಿ ಮಾಡಲೇ ಬೇಕಂದಿಲ್ಲ. ಆದರೆ ಇಲ್ಲೊಬ್ಬ ಶ್ವಾನ ಪ್ರೇಮಿಯ ಹೃದಯವಂತಿಕೆಗೆ ಎಂಥವರ ಮನಸ್ಸಾದರೂ ಕರಗಲೇ ಬೇಕು. ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್​ ಆಗುತ್ತಿದ್ದು, ಯುವಕನ ಮೂಕ ಪ್ರೀತಿಗೆ ತಲೆಬಾಗದವರಿಲ್ಲ.

ಅವನೀಶ್​ ಶರಣ್​ ಎನ್ನುವವರು ತಮ್ಮ ಟ್ವಿಟರ್​ ಖಾತೆಯಲ್ಲಿ ವಿಡಿಯೋವೊಂದರನ್ನು ಹಂಚಿಕೊಂಡಿದ್ದು, ಕೇಲವ 2:20 ಸೆಕೆಂಡಿನ ಈ ವಿಡಿಯೋಗೆ ಮೆಚ್ಚುಗೆ ನೀಡದವರಿಲ್ಲ. ವಿಡಿಯೋದಲ್ಲಿ ಯುವಕನೊಬ್ಬ ತನ್ನ ಬೀದಿ ನಾಯಿಗಳ ಹುಟ್ಟುಹಬ್ಬ ಆಚರಿಸಿದ್ದಾರೆ. ಅದರಲ್ಲೂ ಸೆಂಟರ್​ ಆಫ್​ ಅಟ್ರ್ಯಾಕ್ಷನ್​ ಎನ್ನುವಂತೆ ಎರಡು ನಾಯಿಗಳ ಮಧ್ಯೆ ತಾನು ಕೂತು, ಜೊತೆಗೆ ಪುಟ್ಟದೊಂದು ಕೇಕು, ಅಷ್ಟೇ ಅಲ್ಲ ತನ್ನ ಪ್ರೀತಿಯ ಸ್ನೇಹಿತರಿಗೆ ತಲೆ ಮೇಲೆ ಹ್ಯಾಟು..ಅಬ್ಬಬ್ಬಾ ಇವರ ಸೆಲೆಬ್ರೇಷನ್​ ನೋಡೋಕೆ ಎರಡು ಕಣ್ಣು ಸಾಲದು ಎನ್ನುವಂತಿದೆ.

ಒಟ್ಟಾರೆ ಈ ವಿಡಿಯೋ ಸದ್ಯ ಸಖತ್​ ವೈರಲ್​ ಆಗುತ್ತಿದ್ದು, ಶ್ವಾನ ಪ್ರಿಯರಂತೂ ಯುವಕನ ನಡೆಗೆ ಫುಲ್​ ಫಿದಾ ಆಗಿದ್ದಾರೆ.

Latest article