ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವೇ ಮಕರ ಸಂಕ್ರಾಂತಿ. ಒಂದು ವರ್ಷದಲ್ಲಿ 12 ಮಾಸಗಳಿದ್ದು, ಅವುಗಳನ್ನು ಉತ್ತರಾಯಣ ಮತ್ತು ದಕ್ಷಿಣಾಯನ ಎಂದು ವಿಭಾಗಿಸಲಾಗುತ್ತದೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ವೇಶಿಸುವ ದಿನವೇ ಸಂಕ್ರಾಂತಿ.
ಸಂಕ್ರಾತಿ ಹಬ್ಬದಂದು ಎಳ್ಳು ದಾನ ಮಾಡುವ ಸಂಪ್ರದಾಯವಿದೆ. ಎಳ್ಳಿನ ಜೊತೆ ಬೆಲ್ಲ ಕಡಲೆ ಬೀಜ, ಕೊಬ್ಬರಿ ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಇದೆ. ಇದರ ಜೊತೆಗೆ ರೈತರು ಆಗ ತಾನೆ ಬಂದ ಫಸಲನ್ನು ಪೂಜೆ ಮಾಡಿ ದಾನ ಮಾಡಿದರೆ ಮುಂದೆ ಇನ್ನೂ ಹೆಚ್ಚು ಫಲ ಬರುವ ನಿರೀಕ್ಷೆಯಿದೆ ಎನ್ನುವ ನಂಬಿಕೆಯಿದೆ.
ಈ ಎಳ್ಳು ದಾನ ಮಾಡುವ ಹಿಂದೆ ವೈಜ್ಞಾನಿಕ ಕಾರಣ ಸಹ ಇದೆ. ಸಂಕ್ರಾತಿಯ ಸಮಯದಲ್ಲಿ ಹೆಚ್ಚು ಚಳಿ ಇರುತ್ತದೆ. ಈ ಸಮಯದಲ್ಲಿ ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚಾಗುತ್ತೆ. ಜೊತೆಗೆ ಚರ್ಮ ಸಂಬಂಧಿ ಕಾಯಿಲೆಗಳು ಸಹ ಕಡಿಮೆಯಾಗುತ್ತದೆ.
ಒಟ್ಟಾರೆ ಈ ಹಿಂದಿನಿಂದ ನಡೆದುಕೊಂಡು ಬಂದ ಪ್ರತಿಯೊಂದು ಹಬ್ಬ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಜೊತೆಗೆ ಹಬ್ಬ ಹರಿದಿನಗಳು ಮನುಷ್ಯನ ಸಂತೋಷವನ್ನು ಹೆಚ್ಚಿಸುತ್ತದೆ. ಸದಾ ಕೆಲಸ ಒತ್ತಡ ಎನ್ನುವ ಜನರು ಹಬ್ಬ ಆಚರಣೆಯ ಕಾರಣದಿಂದಾದರೂ ಒಂದಿಷ್ಟು ಸಮಯ ಉತ್ತಮವಾಗಿ ಕಳೆಯುತ್ತಾರೆ.