ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಥಿಯೇಟರ್ ಬಳಿಕ ಒಟಿಟಿ ಫ್ರಾಮ್ಗಳಲ್ಲೂ ಪುಷ್ಪ ಸೂಪರ್ ಹಿಟ್.
ಚಿತ್ರದ ರಾ..ರಾ.. ಸಾಮಿ, ಶ್ರೀವಲ್ಲಿ ಸಾಂಗ್ ಅಂತೂ ಕೇವಲ ಸಿನಿಪ್ರಿಯರಿಗಷ್ಟೇ ಅಲ್ಲದೇ, ನಟ- ನಟಿಯರಿಗೆ, ಕ್ರಿಕೆಟಿಗರಿಗೂ ಅಚ್ಚುಮೆಚ್ಚು. ಅದರಲ್ಲೂ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕದವರಿಲ್ಲ ಎನ್ನಬಹುದು ಅಷ್ಟರ ಮಟ್ಟಿಗೆ ಈ ಹಾಡು ವೈರಲ್ ಆಗಿದೆ.
ಇದೀಗ ಭಾರತ ಕ್ರಿಕೆಟ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ತಮ್ಮ ಅಜ್ಜಿ ಜೊತೆ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಹಾರ್ದಿಕ್ ಪಾಂಡ್ಯ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಪಾಂಡ್ಯ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ.
View this post on Instagram