Thursday, May 19, 2022

ಶಾಸ್ತ್ರದ ವೇಳೆ ಬಿದ್ದು ಬಿದ್ದು ನಕ್ಕ ವಧು..! ಮದುವೆ ಕಥೆ ಮುಂದೇನಾಯ್ತು..?

Must read

ಮದುವೆ ಎಲ್ಲರ ಜೀವನದ ಅತ್ಯಮೂಲ್ಯ ಘಟ್ಟ. ತನ್ನ ಜೀವನದ ಸಂಗಾತಿ ಜೊತೆ ಹೊಸ ಬದುಕಿಗೆ ಹೆಜ್ಜೆ ಇಡುವ ಆ ಕ್ಷಣ ತುಂಬಾ ಸುಂದರವಾಗಿರ ಬೇಕು. ಎಂದೂ ಮರೆಯದ ನೆನಪಾಗಿರಬೇಕು ಪ್ರತಿಯೊಬ್ಬರು ಆಸೆ ಪಡುತ್ತಾರೆ. ಆ ದಿನದ ಪ್ರತಿ ಕ್ಷಣವೂ ಕೂಡ ಪ್ರತಿಯೊಬ್ಬರಿಗೂ ಸದಾ ಮಾಸದ ಸಿಹಿ ನೆನಪು.

ಅದೇ ರೀತಿ ಇಲ್ಲೊಂದು ಜೋಡಿ ಹೊಸ ಬದುಕಿಗೆ ಕಾಲಿಡಲು ಸಜ್ಜಾಗಿದೆ. ಈ ವೇಳೆ ವಧುವಿನ ವರ್ತನೆ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಲ್ಲದೇ,  ಮನಸೋಇಚ್ಛೆ ನಕ್ಕಿದ್ದಾರೆ.

ಐಪಿಎಸ್ ಅಧಿಕಾರಿ ದೀಪಾನ್ಶು ಕಬ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ದೃಶ್ಯದಲ್ಲಿ ವಿವಾಹದ ಸಂದರ್ಭದಲ್ಲಿ ವಧು ಬಿದ್ದು ಬಿದ್ದು ನಗುತ್ತಾರೆ. ಈ ದೃಶ್ಯ ಎಲ್ಲರ ಮುಗದಲ್ಲಿ ನಗು ಮೂಡಿಸುತ್ತದೆ.
ಮದುವೆಯ ಶಾಸ್ತ್ರದ ಸಮಯ ಅಂದರೆ ಧರ್ಮ ಗುರು ದಂಪತಿಗಳಿಗೆ ಭೋದಿಸುವಾಗ ವಧು ಇದ್ದಕ್ಕಿಂದಂತೆ ಜೋರಾಗಿ ನಕ್ಕಿದ್ದಾರೆ. ವಧುವಿನ ವರ್ತನೆ ನೋಡಿ ಮೊದಮೊದಲು ಮದುವೆಯಲ್ಲಿ ನೆರೆದಿದ್ದವರು ಗಾಬರಿಯಾಗುತ್ತಾರೆ. ಬಳಿಕ ವರ ಸೇರಿದಂತೆ ಧರ್ಮಗುರುಗಳು ಸಹ ವಧುವಿನ ನಗು ಕಂಡು ಜೋರಾಗಿ ನಗುತ್ತಾರೆ.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ನೋಡಿದ ಪ್ರತಿಯೊಬ್ಬರು ಕೂಡ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Latest article