Tuesday, August 16, 2022

ತಮಿಳುನಾಡಿನ ಇಡ್ಲಿ ಅಮ್ಮನಿಗೆ ಸ್ಪೆಷಲ್​​ ಗಿಫ್ಟ್​ ನೀಡಿದ ಆನಂದ್​ ಮಹೀಂದ್ರಾ..!

Must read

ದೇಶದ ಪ್ರಸಿದ್ಧ ವಾಹನ ತಯಾರಕ ಮಹೀಂದ್ರಾ & ಮಹೀಂದ್ರಾ ಸಂಸ್ಥೆ ಮುಖ್ಯಸ್ಥ ಆನಂದ್ ಮಹೀಂದ್ರಾ 2022 ರ ತಾಯಂದಿರ ದಿನದಂದು ತಮಿಳುನಾಡಿನ ಇಡ್ಲಿ ಅಮ್ಮನಿಗೆ ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಆನಂದ್ ಮಹೀಂದ್ರಾ ಅವರ ಈ ಸಾಮಾಜಿಕ ಔದಾರ್ಯದ ಟ್ವೀಟ್ ವೈರಲ್​ ಆಗುತ್ತಿದೆ.

ತಾಯಂದಿರ ದಿನದ ಅಂಗವಾಗಿ ಆನಂದ್ ಮಹೀಂದ್ರಾ ಟ್ವಿಟ್ಟರ್ ನಲ್ಲಿ ‘ಇಡ್ಲಿ ಅಮ್ಮಾ’ಗೆ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. “ಸಕಾಲದಲ್ಲಿ ಮನೆ ನಿರ್ಮಾಣವನ್ನು ಪೂರ್ಣಗೊಳಿಸಿ, ತಾಯಂದಿರ ದಿನದಂದು ಇಡ್ಲಿ ಅಮ್ಮನವರಿಗೆ ಉಡುಗೊರೆಯಾಗಿ ನೀಡಿದ ನಮ್ಮ ತಂಡಕ್ಕೆ ಅಭಿನಂದನೆಗಳು ಸಲ್ಲಬೇಕು. ಅವಳು ತಾಯಿಯನ್ನು ಪೋಷಿಸುವ, ಕಾಳಜಿ ವಹಿಸುವ ಮತ್ತು ನಿಸ್ವಾರ್ಥಿಯ ಗುಣಗಳ ಮೂರ್ತರೂಪವಾಗಿದ್ದಾಳೆ. ನಿಮ್ಮೆಲ್ಲರಿಗೂ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು ಎಂದು ಅವರು ಟ್ವೀಟ್​ ಮಾಡಿದ್ದಾರೆ.

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ವಾಸಿಸುವ ಎಂ. ಕಮಲಾತಾಲ್ ಅವರು ‘ಇಡ್ಲಿ ಅಮ್ಮ’ ಎಂದೇ ಫೇಮಸ್​..! ಅವರು ಕೇವಲ ಒಂದು ರೂಪಾಯಿಗೆ ಇಡ್ಲಿಗಳನ್ನು ಮಾರಾಟ ಮಾಡುತ್ತಾರೆ ಮತ್ತು ಈಗ ಸುಮಾರು ಮೂರು ವರ್ಷಗಳಿಂದ ಇದೇ ಕಾಯಕ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ, ಅವರ ಕೆಲಸದಿಂದ ಸಂತೋಷಗೊಂಡ ಮಹೀಂದ್ರಾ, ‘ಇಡ್ಲಿ ಅಮ್ಮ’ಗೆ ಮನೆಯನ್ನು ಉಡುಗೊರೆಯಾಗಿ ನೀಡುವುದಾಗಿ ಭರವಸೆ ನೀಡಿದ್ದರು ಮತ್ತು ಈಗ ಅವರು ಈ ತಾಯಂದಿರ ದಿನದಂದು ತಮ್ಮ ಬದ್ಧತೆಯನ್ನು ಪೂರೈಸಿದ್ದಾರೆ.

Latest article