ಹೊಸ ಅವತಾರದಲ್ಲಿ ಅಜಯ್​ ದೇವಗನ್​..!

ಹೊಸ ಲುಕ್​​ಗೆ ಫ್ಯಾನ್ಸ್​ ಜೊತೆ ಸೆಲೆಬ್ರೆಟಿಗಳು ಫಿದಾ..!
ಹೊಸ ಅವತಾರದಲ್ಲಿ ಅಜಯ್​ ದೇವಗನ್​..!

ಬಾಲಿವುಡ್​ ನಟ ಅಜಯ್​ ದೇವಗನ್​ ಯಾವುದೇ ಪಾತ್ರಕ್ಕಾದರೂ ಜೀವ ತುಂಬುವ ಪ್ರತಿಭಾವಂತ ನಟ.ಅವರ ಪರ್ಸ್​ನಾಲಿಟಿ ಲುಕ್​ ​ ಕೂಡ ಯಾವು ಪಾತ್ರಕ್ಕಾದರೂ ಸೂಟ್ ಆಗ್ಬಿಡುತ್ತೆ.. ಇದೀಗ ಅಜಯ್​ ದೇವಗ್ನ್​ ಹೊಸ ಲುಕ್​​ವೊಂದು ರಿವೀಲ್ ಆಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗ್ತಿದೆ.

ನಟ ಅಜಯ್​ ದೇವಗನ್​ ಆ್ಯಕ್ಷನ್​​ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸಖತ್​ ರಗಡ್​ ಲುಕ್​ಗಳಲ್ಲೇ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚೊತ್ತಿದ್ದಾರೆ. ಇದೀಗ ಅಜಯ್​ ಹೊಸ ಲುಕ್​​ನಲ್ಲಿ ಕಾಣಿಸಿಕೊಂಡಿದ್ದು, ಫ್ಯಾನ್ಸ್​ ಅಷ್ಟೇ ಅಲ್ಲದೆ ಸೆಲೆಬ್ರೆಟಿಗಳು ಕೂಡ ಫಿದಾ ಆಗಿದ್ದಾರೆ. ಕೆಲವೇ ಗಂಟೆಗಳ ಹಿಂದೆಯಷ್ಟೆ ಅಜಯ್ ದೇವಗನ್ ಅವರ ನ್ಯೂ ಲುಕ್​ ರಿವೀಲ್ ಆಗಿದ್ದು, ಇದರಲ್ಲಿ ಹೊಸ ಹೇರ್​ ಕಟ್​ ಜೊತೆಗೆ ಸಾಲ್ಟ್​​ ಅಂಡ್​ ಪೆಪ್ಪರ್​​ ಲುಕ್​​ನಲ್ಲಿ ಗಡ್ಡ ಬಿಟ್ಟಿದ್ದಾರೆ.

ಅಂದಹಾಗೇ ಸೆಲೆಬ್ರಿಟಿ ಹೇರ್​ ಸ್ಟೈಲಿಸ್ಟ್​ ಆಲೀಂ ಹಾಕಿಮ್​ ಅಜಯ್​ ದೇವಗನ್ ಅವರಿಗೆ ಈ ಲುಕ್​ ಕೊಟ್ಟಿದ್ದು, ಈ ಸ್ಟೈಲ್​ ​ ಸದ್ಯ ಸಖತ್​ ವೈರಲ್​ ಆಗುತ್ತಿದೆ. ಇನ್ನು ಅಜಯ್​ ದೇವಗನ್ ಅವರ ಹೊಸ ಅವತಾರಕ್ಕೆ ಅನಿಲ್ ಕಪೂರ್, ಅಭಿಷೇಕ್ ಬಚ್ಚನ್, ಕಾರ್ತಿಕ್ ಆರ್ಯನ್​ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಅಭಿಮಾನಿಗಳಂತೂ ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ.

ಇನ್ನು ಅಜಯ್​ ದೇವಗನ್ ಅವರ ರುದ್ರ ದ ಎಡ್ಜ್​ ಆಫ್​ ಡಾರ್ಕ್​ನೆಸ್​ ವೆಬ್​ ಸರಣಿಯ ಶೂಟಿಂಗ್​ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಈ ವೆಬ್​ ಸೀರಿಸ್​ಗಾಗಿಯೇ ಅಜಯ್​ ಈ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.

ಇನ್ನು ಅಜಯ್​ ದೇವಗನ್ ಹಾಗೂ ನಟಿ ಪ್ರಣೀತಾ ಸುಭಾಷ್ ಅಭಿನಯದ ಭುಜ್​ ಚಿತ್ರ ಆಗಸ್ಟ್ 13ರಂದು ಒಟಿಟಿ ಮೂಲಕ ರಿಲೀಸ್​ ಆಗಲಿದ್ದು, ಮೈದಾನ್​ ಚಿತ್ರ ಇದೇ ವರ್ಷ ಅಕ್ಟೋಬರ್​ 15ರಂದು ತೆರೆ ಕಾಣಲಿದೆ. ಸದ್ಯ ತ್ರಿಬಲ್​ ಆರ್​ ಚಿತ್ರದಲ್ಲಿ ಬ್ಯೂಸಿಯಾಗಿರುವ ಅಜಯ್​ ದೇವಗನ್​ ಸಿನಿಮಾ ಜೊತೆಜೊತೆಗೆ ವೆಬ್​ ಸೀರಿಸ್​ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಒಟ್ಟನಲ್ಲಿ ಪದೇ ಪದೇ ರಗಡ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಜಯ್​ ದೇವಗನ್ ಹೊಸ ಅವತಾರದ ಹಿಂದಿನ ಸೀಕ್ರೆಟ್​ ಬಗ್ಗೆ ಕಾದು ನೋಡಬೇಕಿದೆ.

ವರದಿ- ಮಲ್ಲಿಕಾ ಪೂಜಾರಿ

Related Stories

No stories found.
TV 5 Kannada
tv5kannada.com