Age is just a number ವಯಸ್ಸು ಕೇವಲ ಸಂಖ್ಯೆಯಷ್ಟೇ. ಹೊಸವಿಚಾರವನ್ನು ಕಲಿಯಲು ವಯಸ್ಸಿನ ಮಿತಿಯಿಲ್ಲ, ಉತ್ಸಾವಷ್ಟೇ ಮುಖ್ಯ ಎನ್ನುವುದನ್ನು ಇಲ್ಲೊಂದು ವೃದ್ಧ ದಂಪತಿ ಸಾಬೀತುಪಡಿಸಿದ್ದಾರೆ.
ಫೋಟೋಶೂಟ್, ಈಗಿನ ಜನರೇಷನ್ ಯುವಕ ಯುವತಿಯರ ಹಾಟ್ ಫೇವರೇಟ್ ಕ್ರೇಜ್. ನೀವು ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟೋ ಜನ ಮಾಡೆಲ್ಗಳ ಫೋಟೋಶೂಟ್ ನೋಡಿರಬಹುದು. ಆದರೆ ಈ ಸುದ್ದಿಯ ಹೀರೋ ಹಾಗೂ ಹಿರೋಯಿನ್ನಂತಹ ಮಾಡೆಲ್ ಹಾಗೂ ಫೋಟೋಗ್ರಾಫರ್ನ್ನು ನೀವು ಎಲ್ಲೂ ನೋಡಿರಲು ಸಾಧ್ಯವಿಲ್ಲ.
ಇನ್ಸ್ಟಾಗ್ರಾಮ್ನಲ್ಲಿ ಮಿ ಆ್ಯಂಡ್ ಮಿಸಸ್ ವರ್ಮ ಪೇಜ್ನಲ್ಲಿ ಇತ್ತೀಚಿಗೆ ವಿಡಿಯೋವೊಂದು ಶೇರ್ ಮಾಡಲಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಷ್ಟೇ ಅಲ್ಲದೇ ನೋಡುಗರು ಈ ವೃದ್ಧ ದಂಪತಿಯ ಪಾಡು ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.
ವಿಡಿಯೋದಲ್ಲಿ ಮಿ.ವರ್ಮ, ಮಿಸಸ್ ವರ್ಮ ಅವರ ಪೋಟೋಶೂಟ್ ನಡೆಸಿದ್ದಾರೆ. ಮಿಸಸ್ ವರ್ಮ ಸಿಂಪಲ್ ಸೀರೆಯುಟ್ಟು ಮಾಡೆಲ್ಗಳಂತೆ ಪೋಸ್ ಕೊಟ್ರೆ, ಮಿ. ವರ್ಮ ಪ್ರೋಫೆಷನಲ್ ಫೋಟೋಗ್ರಾಫರಂತೆ ನೆಲದ ಮೇಲೆ ಉರುಳಾಡಿ ತಮ್ಮ ಮೊಬೈಲ್ನಲ್ಲಿ ಫೋಟೋ ತೆಗೆದಿದ್ದಾರೆ. ಇಷ್ಟೆಲ್ಲಾ ಕಷ್ಟಪಟ್ಟು ಕೊನೆಗೆ ಮಿ.ವರ್ಮ ತೆಗೆದಿರುವ ಫೋಟೋ ನೋಡುಗರ ಮುಖದಲ್ಲಿ ನಗುತರಿಸಿದೆ.
ಇನ್ನು ಇವರಿಬ್ಬರ ಈ ವಿಡಿಯೋ ನೋಡಿ ಒಂದಿಷ್ಟು ಮಂದಿ ವಾವ್ ಸೋ ಕ್ಯೂಟ್ ಅಂದ್ರೆ ಇನ್ನೊಂದಿಷ್ಟು ಮಂದಿ ನನಗೂ ಈ ರೀತಿಯ ಫೋಟೋಗ್ರಾಫರ್ ಬೇಕು ಎಂದು ಕಮೆಂಟ್ ಮಾಡಿದ್ದಾರೆ.