ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಗಂಡ ಹೆಂಡತಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆಯಿಟ್ಟ ನಟಿ ಸಂಜನಾ ಗಲ್ರಾನಿ ಬಹುಭಾಷಾ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಸಂಚಲನ ಮೂಡಿಸಿದ್ದರು.
View this post on Instagram
ಅಜೀಜ್ ಪಾಷಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವರು ಸಿನಿಮಾ ವೃತ್ತಿ ಜೀವನದಿಂದ ಅಂತರ ಕಾಯ್ದುಕೊಂಡು ವೈಯಕ್ತಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದರು.
ಇಂದು ಗಲ್ರಾನಿ ಕುಟುಂಬದಲ್ಲಿ ಡಬಲ್ ಸಂಭ್ರಮ ಮನೆ ಮಾಡಿದ್ದು, ನಿಕ್ಕಿ ಗಲ್ರಾನಿ ಇಂದು ತೆಲುಗು ನಟ ಆದಿ ಪಿನಿಶೆಟ್ಟಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
View this post on Instagram
ಇತ್ತೀಚೆಗಷ್ಟೇ ನಟಿ ಸಂಜನಾ ಗಲ್ರಾನಿ ಬೇಬಿ ಬಂಪ್ ಫೋಟೋಶೂಟ್, ಸೀಮಂತ ಶಾಸ್ತ್ರದ ಫೋಟೋಗಳು ವೈರಲ್ ಆಗಿದ್ದವು. ಸದ್ಯ ಗಂಡು ಮಗುವಿನ ತಾಯಾಗಿರುವ ಸಂಜನಾ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.