Tuesday, May 17, 2022

ಮಾಲೀಕನ ಪ್ರಾಣ ಉಳಿಸಲು ಹಾವಿನೊಂದಿಗೆ ಕಾದಾಡಿ ಪ್ರಾಣ ತೆತ್ತ ಶ್ವಾನ..!

Must read

ಅನ್ನ ಹಾಕುವ ಮಾಲೀಕನೊಂದಿಗೆ ಶ್ವಾನ ಯಾವಾಗಲೂ ನಿಯತ್ತಿನಿಂದ ಇರುತ್ತದೆ ಎಂಬುದು ಅನೇಕ ಸಲ ಸಾಬೀತುಗೊಂಡಿದೆ. ಸದ್ಯ ಆಂಧ್ರಪ್ರದೇಶದಲ್ಲಿ ನಡೆದಿರುವ ಘಟನೆ ಕೂಡ ಅದಕ್ಕೆ ಜ್ವಲಂತ ಉದಾಹರಣೆಯಾಗಿದೆ.

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ನಿಂದಿಗಾಮದಲ್ಲಿ ನಡೆದಿರುವ ಪ್ರಕರಣ ಇದಾಗಿದೆ. ಮುರುಳಿ ಎಂಬ ವ್ಯಕ್ತಿ ತಮ್ಮ ಫಾರ್ಮ್​ಹೌಸ್​​​ನಲ್ಲಿ ಕಳೆದ ಆರು ವರ್ಷಗಳಿಂದ ರೊಟ್ಟೀಲರ್ ಎಂಬ​ ತಳಿಯ ಎರಡು ನಾಯಿ ಮರಿ ಸಾಕಿದ್ದು, ಅದರಲ್ಲಿ ಒಂದು ಹೆಣ್ಣು ಮತ್ತೊಂದು ಗಂಡು ಇದೆ.

ಎರಡು ದಿನಗಳ ಹಿಂದೆ ಮುರಳಿ ಮಲಗುವ ಕೋಣೆಯೊಳಗೆ ಹಾವೊಂದು ನುಗ್ಗಿದೆ. ಅದರ ಹುಡುಕಾಟ ನಡೆಸಿದ್ರೂ ಹಾವು ಪತ್ತೆಯಾಗಿಲ್ಲ. ಹೀಗಾಗಿ ಮುರಳಿ ಫಾರ್ಮ್​ಹೌಸ್​​ನಿಂದ ಹೊರಟು ಹೋಗಿದ್ದಾರೆ. ಕೆಲ ಗಂಟೆಗಳ ನಂತರ ಅವರು ತೋಟದ ಮನೆಗೆ ವಾಪಸ್​​ ಆಗಿದ್ದು, ಈ ವೇಳೆ ಗಂಡು ನಾಯಿ ಹಾವನ್ನ ಕೊಂದು ತಾನೂ ಸತ್ತು ಬಿದ್ದಿರುವುದನ್ನ ನೋಡಿದ್ದಾರೆ. ನಾಯಿ ಸಾವಿಗೆ ಮುರುಳಿ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ಜೊತೆಗೆ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮುರಳಿ, 2017ರಿಂದಲೂ ಫಾರ್ಮ್​ಹೌಸ್​​ನಲ್ಲಿ ಎರಡು ನಾಯಿ ಮರಿ ಸಾಕಿದ್ದು, ಅವುಗಳಿಗೆ ಕೈಸರ್​ ಹಾಗೂ ಫ್ಲೋರಾ ಎಂದು ಹೆಸರಿಡಲಾಗಿತ್ತು. ಕಳೆದ ಎರಡು ದಿನಗಳ ಹಿಂದೆ ನಾನು ಮಲಗುವ ಕೋಣೆಯಲ್ಲಿ ಹಾವು ನುಗ್ಗಿದೆ. ಎಷ್ಟು ಹುಡುಕಿದರೂ ಅದು ಸಿಕ್ಕಿರಲಿಲ್ಲ, ಆದರೆ, ನಾಯಿ ಅದನ್ನ ಹುಡುಕಿ ಕೊಂದು ಹಾಕಿದ್ದು, ಈ ವೇಳೆ ಕಡಿತಕ್ಕೊಳಗಾಗಿ ತನ್ನ ಪ್ರಾಣ ಸಹ ಕಳೆದುಕೊಂಡಿದೆ ಎಂದು ದುಃಖ ವ್ಯಕ್ತಪಡಿಸಿದರು.

Latest article