ಮದುವೆ ಅಂದ್ರೆನೇ ಸಂಭ್ರಮ. ಜೀವನದ ಬಹುಮುಖ್ಯ ಘಟ್ಟ ಮದುವೆ ಪತ್ರಿಯೊಂದು ಘಳಿಗೆಯೂ ನೆನಪಿನಲ್ಲಿ ಉಳಿಯುವಂತೆ ಆಗಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಇನ್ನು ಮದುವೆಯ ದಿನ ಶಾಸ್ತ್ರ ಸಂಪ್ರದಾಯದ ಜೊತೆ ವಧು ವರನ ಕಾಲೆಯುವ ಪ್ರಸಂಗಗಳು ನಡೆಯುತ್ತಲೇ ಇರುತ್ತದೆ. ಅದೇ ರೀತಿ ಇಲ್ಲೊಂದು ಮದುವೆಯಲ್ಲಿ ವಧುವಿನ ಕಡೆಯವರು ಮಾಡಿದ ಪ್ರಾಂಕ್ಗೆ ವರ ಹೊಟ್ಟೆ ಹುಣ್ಣಗಾಗುವಷ್ಟು ನಕ್ಕಿದ್ದಾರೆ.
ರಾಪಿ ರೋಜಾಸ್ ಎಂಬವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಜೊತೆಗೆ ವಿಡಿಯೋ ನೋಡಿದ ಪ್ರತಿಯೊಬ್ಬರ ಮುಖದಲ್ಲೂ ಸಹ ನಗು ಮೂಡಿದೆ.
ರೋಜಾಸ್ ಹಾಗೂ ಅಲೆಕ್ಸ್ ಎನ್ನುವವರು ಇತ್ತೀಚಿಗೆ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯ ದಿನ ರೋಜಾಸ್ ತನ್ನ ಪತಿ ಪ್ರಾಂಕ್ ಮಾಡಲು ಪ್ಲಾನ್ ಮಾಡಿದ್ದಾರೆ. ಅದರಂತೆ ಅಲೆಕ್ಸ್ ಕಿಟಕಿ ಕಡೆಗೆ ನೋಡುತ್ತಾ ನಿಂತಿದ್ದರು. ಅಲ್ಲಿಗೆ ವಧುವಿನ ಡ್ರೆಸ್ ತೊಟ್ಟ ವ್ಯಕ್ತಿಯೊಬ್ಬರು ಬರುತ್ತಾರೆ. ನಿಧಾನವಾಗಿ ಅಲೆಕ್ಸ್ ಭುಜದ ಮೇಲೆ ಕೈ ಇಡುತ್ತಾರೆ. ತನ್ನ ಪತ್ನಿಯನ್ನು ಮದುವೆ ಡ್ರೆಸ್ನಲ್ಲಿ ನೋಡುವ ಖುಷಿಯಲ್ಲಿ ಅಲೆಕ್ಸ್ ಹಿಂದಿರುಗಿದ್ದು, ತನ್ನೆದುರು ಇರುವವರನ್ನ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಅದ್ಯಾಕೆ ಅಂತಿರಾ..? ಅಲ್ಲಿಗೆ ವಧುವಿನ ಡ್ರೆಸ್ ತೊಟ್ಟು ಬಂದಿದ್ದು ರೋಜಾಸ್ ಅಲ್ಲ, ಬದಲಾಗಿ ಅಲೆಕ್ಸ್ ಆತ್ಮೀಯ ಸ್ನೇಹಿತ ಜೊನಾಥನ್ ಲೋಪೆರಾ ಎನ್ನುವವರು. ಈ ದೃಶ್ಯವನ್ನು ಕಂಡು ಮದುವೆಗೆ ಬಂದಿದ್ದವರು ಬಿದ್ದು, ಬಿದ್ದು ನಕ್ಕಿದ್ದಾರೆ.