ತಮ್ಮ ಡಿಫರೆಂಟ್ ಐಡಿಯಾಗಳಿಂದಲೇ ಜನರಿಗೆ ಹತ್ತಿರವಾದ ಹಿರೋ ರಿಯಲ್ ಸ್ಟಾರ್ ಉಪೇಂದ್ರ. ತೆರೆ ಮೇಲಷ್ಟೇ ಅಲ್ಲದೇ ರಿಯಲ್ ಲೈಫ್ನಲ್ಲೂ ಉಪ್ಪಿ ಕೆಲಸಗಳು ಸೂಪರ್ ಹಿಟ್. ಕೊರೊನಾ ಸಂಕಷ್ಟದಲ್ಲಿರುವವರಿಗೆ ನೆರೆವಾಗುತ್ತಿರುವ ,ಉಪ್ಪಿ ಅಭಿಮಾನಿ ಬಳಗ ಇನ್ನಷ್ಟು ದೊಡ್ಡದಾಗಿದೆ.
ಉಪೇಂದ್ರ ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಪ್ರಯತ್ನಗಳನ್ನು ಮಾಡಿ ರಿಯಲ್ ಸ್ಟಾರ್ ಎನಿಸಿಕೊಂಡ್ರು. ಸೂಪರ್ ಸಿನಿಮಾದಲ್ಲಿ ಜನನಾಯಕನ ಪಾತ್ರ ಮಾಡಿ ದೇಶದ ಉದ್ಧಾರಕ್ಕೆ ಡಿಫರೆಂಟ್ ಐಡಿಯಾಗಳನ್ನು ತೆರೆಯ ಮೇಲಿಟ್ರು. ಅದಾದ ಬಳಿಕ ರಿಯಲ್ ಲೈಫ್ನಲ್ಲೂ ಜನನಾಯಕನಾಗಿ ಪ್ರಜಾಕೀಯ ಪಕ್ಷ ಕಟ್ಟಿದ್ರು. ಕೇವಲ ಸಿನಿಮಾ ನಾಯಕನಷ್ಟೇ ಆಗದೇ, ಜನನಾಯಕನಾಗಿ ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸಿದ್ರು. ಅದರ ಪರಿಣಾಮವೇ ಇಂದು ಉಪ್ಪಿ ಅಭಿಮಾನಿ ಬಳಗ ಮತ್ತಷ್ಟು ವಿಸ್ತಾರಗೊಂಡಿದೆ.
ಟ್ವಿಟರ್ನಲ್ಲಿ 2 ನೇ ಸ್ಥಾನ ಪಡೆದ ಸ್ಯಾಂಡಲ್ವುಡ್ ನಟ..
ಟ್ವಿಟರ್ನಲ್ಲಿ ರಿಯಲ್ ಸ್ಟಾರ್ಸ್ ಫಾಲೋವರ್ಸ್ ಸಂಖ್ಯೆ ಕಳೆದ ಕೆಲ ದಿನಗಳಿಂದ ಏರಿಕೆ ಕಂಡಿದೆ, ಎಷ್ಟರ ಮಟ್ಟಿಗೆ ಅಂದ್ರೆ ಈಗ ಒಂದು ಮಿಲಿಯನ್ ಜನ ಉಪ್ಪಿನ ಫಾಲೋ ಮಾಡ್ತಿದ್ದಾರೆ. ಈ ಖುಷಿಯನ್ನು ಸ್ವತಃ ಉಪ್ಪಿ ಹಂಚಿಕೊಂಡಿದ್ದು, ತಮ್ಮ ವಿಚಾರಗಳನ್ನು ಫಾಲೋ ಮಾಡೋರಿಗೆ ಧನ್ಯವಾದ ತಿಳಿಸಿದ್ದಾರೆ.
ಅಷ್ಟೇ ಅಲ್ಲ ಟ್ವಿಟರ್ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಗಳಿಸಿರುವ ಸ್ಯಾಂಡಲ್ವುಡ್ ನಾಯಕರ ಪೈಕಿ ಉಪ್ಪಿ ಸದ್ಯ 2 ನೇ ಸ್ಥಾನದಲ್ಲಿದ್ದಾರೆ. 2.5 ಮಿಲಿಯನ್ ಫಾಲೋವರ್ಸ್ ಮೂಲಕ ಕಿಚ್ಚ ಸುದೀಪ್ ಮೊದಲ ಸ್ಥಾನದಲ್ಲಿದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ 3ನೇ ಸ್ಥಾನದಲ್ಲಿದ್ದಾರೆ.
ಟ್ವಿಟರ್ನಲ್ಲಿ ಉಪ್ಪಿ ಸಹಾಯದ ಪಿನ್ ಟು ಪಿನ್ ಮಾಹಿತಿ..!
ಇತ್ತೀಚಿಗೆ ಉಪೇಂದ್ರ ಮಹತ್ವದ ಕಾರ್ಯವೊಂದಕ್ಕೆ ಕೈ ಹಾಕಿದ್ದು, ಇದರಿಂದ ಇಂದು ಅದೆಷ್ಟೋ ಜನರ ಹಸಿವು ನೀಗಿದೆ. ಹೌದು ಕೊರೊನಾದಿಂದ ಅದೇಷ್ಟೋ ಮಂದಿ ಹೊಟ್ಟೆಗೆ ಹಿಟ್ಟಿಲ್ಲದೇ ಒದ್ದಾಡ್ತಿದ್ರೆ, ಇತ್ತ ತಾವು ಬೆಳೆದ ಬೆಳೆಗಳನ್ನು ಕೊಳ್ಳುವವರಿಲ್ಲದೇ, ಬೆಳೆ ಹಾಳಾಗುತ್ತಿರುವುದನ್ನು ಕಂಡು ನಮ್ಮ ಅನ್ನದಾನ ರೈತರ ಬಳಗವು ಕಣ್ಣೀರಿಡುತಿತ್ತು. ಈ ಇಬ್ಬರ ನಡುವೆ ಸೇತುವೆ ಬೆಸೆದಿದ್ದೇ ನಮ್ಮ ಉಪ್ಪಿ.
ಲಾಕ್ಡೌನ್ನಲ್ಲಿ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಒದಗಿಸಿ, ಖರೀದಿ ಮಾಡಿ, ಸಂಕಷ್ಟದಲ್ಲಿರುವವರಿಗೆ ಹಂಚೋಕ್ಕೆ ಶುರುಮಾಡಿದ್ರು ರಿಯಲ್ ಸ್ಟಾರ್. ಈ ವಿಚಾರಗಳನ್ನು ಉಪೇಂದ್ರ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದರು. ಇದರಿಂದ ಪ್ರೇರೆಪಿತರಾದ ಅವರ ಅಭಿಮಾನಿಗಳು ತಮ್ಮ ಸುತ್ತಮುತ್ತಲಿನ ರೈತರ ಬೆಳೆಗಳನ್ನು ಕೊಂಡು. ಬಡವರಿಗೆ ಹಂಚಿದರು. ಈ ಚೈನ್ ಬಹುದೊಡ್ಡದಾಗಿ ಬೆಳೆದು, ಇಂದು ಅನೇಕ ಮಂದಿ ಹಸಿವಿನಿಂದ ಮುಕ್ತರಾಗಿದ್ದಾರೆ.
ಒಟ್ಟಿನಲ್ಲಿ ಉಪೇಂದ್ರ ಅವರ ಆಲೋಚನೆಗಳು ಸಮಾಜಮುಖಿಯಾಗಿದ್ದು, ಹಸಿದು, ನೋವುಂಡು ಮಲಗುತ್ತಿದ್ದ ಅದೇಷ್ಟೋ ಜೀವಗಳು ಇಂದು ನೆಮ್ಮದಿಯಲ್ಲಿರುವಂತಾಗಿದೆ. ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ಉಪ್ಪಿ ಅವರ ಅಭಿಮಾನಿ ಬಳಗ ಇನ್ನಷ್ಟು ದೊಡ್ಡದಾಗಿ, ಸಮಾಜಕ್ಕೆ ನೆರವಾಗಲಿ ಎನ್ನುವುದೇ ಎಲ್ಲರ ಆಶಯ.
ವರದಿ-ಮಲ್ಲಿಕಾ ಪೂಜಾರಿ