Sunday, October 2, 2022

ಪ್ರಶಾಂತ್​ ಸಂಬರಗಿಗೆ ನನ್ನ ಹೆಸರು ತೆಗೆದುಕೊಳ್ಳುವ ಯೋಗ್ಯತೆ ಇಲ್ಲ – ನಟಿ ಸಂಜನಾ ಗಲ್ರಾನಿ

Must read

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಅವರು ಪ್ರತಿಕ್ರಿಯೆ ನೀಡಿದ್ದು, ಡ್ರಗ್ ಕೇಸ್ ಸಂಬಂಧ ಮಾಧ್ಯಮಗಳು ನಿರಂತರವಾಗಿ ಕರೆ ಮಾಡುತ್ತೀವೆ. ನಾನು ಈ ವಿಚಾರವಾಗಿ ಏನು ಮಾತಾನಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಡ್ರಗ್​ ಮಾಫಿಯಾದಲ್ಲಿ ವಿಚಾರದ ಕುರಿತು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ ಅವರು, ನಾನು ಏನು ಮಾತಾಡಿದರು ಅದು ಪಬ್ಲಿಸಿಟಿಯಾಗುತ್ತೆ. ಇದರ ವಿಚಾರವಾಗಿ ನಮಗೆ ಚೀಪ್​​ ಪಬ್ಲಿಸಿಟಿ ಬೇಡ. ನಾನು ಮಾಧ್ಯಮಕ್ಕೆ ರಾಸ್ ರೆಸ್ಪಾನ್ಸ್ ಕೊಡಲು ಇಷ್ಟವಿಲ್ಲ ಎಂದರು.

ಗಂಡ ಹೆಂಡತಿ ಒಂದೇ ಸಿನಿಮಾ ಮಾಡಿದ ಸಂಜನಾ, ಅವಳನ್ನ ತನಿಖೆ ಮಾಡಿ ನಿಜಾ ಅಂಶ ಬಯಲಿಗೆ ತನ್ನಿ ಎಂದಿದ್ದರು ಈ ಬಗ್ಗೆ ಮಾತನಾಡಿದ ಅವರು, ಸದ್ಯ ನಾನು ಪ್ರಶಾಂತ್ ಸಂಬರಗಿ ಬಗ್ಗೆ ನಾನು ಎಲ್ಲು ಕೂಡ ಕೆಟ್ಟದಾಗಿ ಮಾತಾಡಿಲ್ಲ, ಅವರು ರಾಜಕಾರಣಿಗಳಿಗೆ ಬ್ರೋಕರ್ ರೀತಿ ವರ್ತಿಸಿದ್ದಾರೆ ಜೊತೆಗೆ ಅವರು ಮಾಧ್ಯಮದಲ್ಲಿ ನನ್ನ ಬಗ್ಗೆ ಕೂಡ ಪ್ರಶ್ನಿಸಿದ್ದಾರೆ ಎಂದು ಹೇಳಿದರು.

ಇನ್ನು ನಾನು ಈವರೆಗೆ 50 ಸಿನಿಮಾದಲ್ಲಿ ನಟಿಸಿದ್ದೀನಿ. ದರ್ಶನ್, ಶಿವಣ್ಣ, ಪವನ್ ಕಲ್ಯಾಣ, ಮೋಹನ್ ಲಾಲ್, ಸುದೀಪ್ ಜೊತೆ ನಟಿಸಿದ್ದೇನೆ. ಅಲ್ಲದೇ, ಬಾಲಿವುಡ್​ನಲ್ಲಿ ಸ್ಮಾಲ್​​ಸ್ಕ್ರೀನ್ ಶೇರ್ ಮಾಡಿದ್ದೇನೆ. ಪ್ರಶಾಂತ್ ಸಂಬರಗಿ 200 ರೂಪಾಯಿ ತೆಗೆದುಕೊಂಡು ಚೀಪ್​ ಪಬ್ಲಿಸಿಟಿಗೆ ಬಂದಿದ್ದಾರೆ. ಸದ್ಯದ ಸೂಕ್ಷ್ಮ ಸಂಧರ್ಭದಲ್ಲಿ ಬರೀ ನಟಿಯರ ಹೆಸರು ತೆಗೆದುಕೊಂಡು ಫೀಲ್ಮೆ ಚೇಂಬರ್​ ತೆಗೆದು, ಪಬ್ಲಿಸಿಟಿ ಮಾಡುತ್ತಿದ್ದಾರೆ. ಸಂಬರಗಿಗೆ ನನ್ನ ಹೆಸರು ತೆಗೆದುಕೊಳ್ಳುವ ಯೋಗ್ಯತೆ ಇಲ್ಲ. ನನಗೆ ತಂದೆ-ತಾಯಿ ಚಿಕ್ಕ ವಯಸ್ಸಿನಲ್ಲಿ ಹೇಳಿಕೊಟ್ಟಿದ್ದಾರೆ. ನಾಯಿ ಬೊಗಳಿದ್ರೆ ನೀನು ತಿರುಗಿಸಿ ಬೊಗಳಬೇಡ. ಅದನ್ನ ಸೈಡ್​ಲೈನ್ ಮಾಡಿ ಮುಂದೆ ಸಾಗು. ಹಾಗೇ ನಾನು ಎಲ್ಲಾದಕ್ಕೂ ಪ್ರೋವ್ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ನನಗೆ ಗೊತ್ತು ನಾನು ಐಶ್ವರ್ಯ ರೈ ಅಲ್ಲ. ಆದರೆ, ನನ್ನದೇ ಫ್ಯಾನ್ಸ್ ಹುಟ್ಟಿಸಿಕೊಂಡಿದ್ದೇನೆ. ಅಲ್ಲದೇ, ನನ್ನ ಬಗ್ಗೆ ನನಗೆ ಗೊತ್ತು. ಕನ್ನಡ, ತಮಿಳು ಚಿತ್ರ ರೀಲಿಸ್​ಗೆ ಸಿದ್ದವಿದೆ. ನನ್ನ ಜೀವನದ ಪ್ರತಿಕ್ಷಣವು ಕೂಡ ಸಾಧನೆಗೆ ಆಲೋಚಿಸಿದ್ದೇನೆ. ನಾನು 16 ವರ್ಷದಿಂದ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದೇನೆ. ಅಲ್ಲದೇ, ಈ 16 ವರ್ಷದಲ್ಲಿ ಎಲ್ಲಿಂದ ಆದಾಯ ಬಂದಿದೆ. ಇವೆಲ್ಲಾವನ್ನು ನಾನು ಸಾಕ್ಷಿ ಸಮೇತ ಕೊಡಬಲ್ಲೆ ಎಂದು ಸಂಜನಾ ಸಂಜನಾ ಗಲ್ರಾನಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

Also read:  ಟ್ರಾಫಿಕ್​ ಪೊಲೀಸ್​ ಮನೆಯಲ್ಲಿ ಚಿನ್ನದ ಟಾಯ್ಲೆಟ್​​

Latest article