ಅಮೆರಿಕ: ಅಫ್ಘಾನಿಸ್ತಾನದಿಂದ ಸೈನ್ಯ ಹಿಂತೆಗೆದುಕೊಂಡಿದ್ದನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದು, ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.
ಆಫ್ಘಾನ್ ವಿಚಾರವಾಗಿ ಮೊದಲ ಬಾರಿ ಪ್ರತಿಕ್ರಿಯಿಸಿರುವ ಬೈಡನ್, ಅಮೆರಿಕ ಆಫ್ಘಾನ್ನಲ್ಲಿನ ಬೆಳವಣಿಗೆ ಗಮನಿಸುತ್ತಿದೆ. ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಸೇನೆ ಹಿಂಪಡೆಯುವುದು ಟ್ರಂಪ್ ಸರ್ಕಾರದ ಆದೇಶ. ಟ್ರಂಪ್ ಸರ್ಕಾರದ ಆದೇಶವನ್ನು ನಾನು ಜಾರಿ ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ.
ಅಲ್ ಖೈದಾ ದುರ್ಬಲಗೊಳಿಸುವಲ್ಲಿ ಅಮೆರಿಕ ಯಶಸ್ವಿಯಾಗಿದೆ. ಉಗ್ರರ ವಿರುದ್ಧ ಹೋರಾಟಕ್ಕೆ ನಾವು 1 ಲಕ್ಷ ಕೋಟಿ ಡಾಲರ್ ವೆಚ್ಚ ಮಾಡಿದ್ದೇವೆ. ಅಶ್ರಫ್ ಘನಿ ದೇಶದ ಜನರ ನಂಬಿಕೆ ಉಳಿಸಿಕೊಳ್ಳಲಿಲ್ಲ. ಅಫ್ಘಾನಿಸ್ತಾನದಲ್ಲಿ ಇನ್ನೂ 20 ವರ್ಷ ಸೇನೆ ನಿಯೋಜಿಸಿದ್ರೂ ವ್ಯರ್ಥ ಎಂದು ಬೈಡನ್ ಹೇಳಿದ್ದಾರೆ.