Sunday, October 2, 2022

ಕರ್ನಾಟಕ ಫಿಲಂ ಚೇಂಬರ್​ಗೆ ಪ್ರಶಾಂತ್​ ಸಂಬರಗಿ ಐದು ಪ್ರಶ್ನೆಗಳು

Must read

ಬೆಂಗಳೂರು: ಸಾ.ರಾ ಗೋವಿಂದ್ ನನ್ನ ಮೇಲೆ ಹಗುರವಾಗಿ ಮಾತನಾಡಿದ್ದಾರೆ, ನನ್ನ 20 ವರ್ಷದ ಸಿನಿ ಜರ್ನಿ ಬಗ್ಗೆ ಅವರಿಗೆ ಗೊತ್ತಾ(?) ಎಂದು ಪ್ರಶಾಂತ್​ ಸಂಬರಗಿ ಅವರು ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದ್ ಮೇಲೆ ಗರಂ ಆದರು.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಇಂಡಸ್ಟ್ರಿಗೆ ಹೀರೊ ಆಗಬೇಕು ಆಸೆ ಇಟ್ಕೊಂಡು ಬಂದೆ. ಕೆಲವರು ನನ್ನ ಬಗ್ಗೆ ಗೂಬೆ ಕೂರಿಸಿದರು. 2000 ಇಸವಿಯಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದೀನಿ ಎಂದರು.

ಇನ್ನು ನನಗೆ ಮೊದಲು ಪರಿಚಯವಾಗಿದ್ದೇ ಕಿಚ್ಚ ಸುದೀಪ್. ಸುದೀಪ್​ಗೆ ಪ್ಯಾರಾಚೂಟ್ ಹಾಕಿಸಿ ಜಿಗಿಸಿದ್ದೆ. ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದ ಉಪೇಂದ್ರರಿಗೂ ಒಂದು ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಮಾಡಿದ್ದೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಐಶ್ವರ್ಯ’ ಚಿತ್ರವನ್ನ ವಿತರಿಸಿದ್ದೆ ಎಂದು ಪ್ರಶಾಂತ್​ ಸಂಬರಗಿ ಅವರು ಮಾತನಾಡಿದ್ದಾರೆ.

ಸದ್ಯ ನಾನು ಎಷ್ಟು ಸಿನಿಮಾಗಳನ್ನ ವಿತರಣೆ ಮಾಡಿದ್ದೇನೆ. ನಾನು ಚಿತ್ರರಂಗದಿಂದ 5 ಕೋಟಿ ನಷ್ಟ ಅನುಭವಿಸಿದ್ದೇನೆ ಎಂದು ಸಂಬರಗಿ ಅವರು ಆರೋಪ ಮಾಡಿದಲ್ಲದೇ, ಸಿಂಗಲ್ ಸ್ಕ್ರೀನ್ ಪರದೆಗಳಿಂದ ಅನ್ಯಾಯ ಆಗಿದೆ. ಫಿಲಂ ಚೆಂಬರ್​ಗೆ ನನ್ನ 5 ಪ್ರಶ್ನೆ ಎಂದು ಕೇಳಿದ್ದಾರೆ.

1. ಸಾ.ರಾ. ಗೋವಿಂದ್ ಯಾಕೆ ನನ್ನ ಮೇಲೆ ಈ ರೀತಿ ಹೇಳಿಕೆ ಕೊಡ್ತಾರೆ?

2. ಬಾಹುಬಲಿ -1 ರಿಲೀಸ್ ಆಯ್ತು. ಆದರೆ, ಬಾಹುಬಲಿ-2 ರಿಲೀಸ್ ಮಾಡೋಕೆ ಯಾಕೆ ತಕರಾರು ತೆಗೆದರು?

3. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಎಷ್ಟು ಅನ್ಯಾಯವಾಗಿದೆ?

4. ಸಾ.ರಾ.ಗೋವಿಂದ್ ರೋಲ್ ಕಾಲ್ ಮಾಡಿದ್ಯಾಕೆ?

5. ಸಾ.ರಾ.ಗೋವಿಂದ್ ಮತ್ತು ಗ್ಯಾಂಗ್ ಬಗ್ಗೆ ಯಾಕೆ ಯಾರು ಮಾತನಾಡುತ್ತಿಲ್ಲ?

Latest article