Tuesday, May 17, 2022

ಹೆಣ್ಣು ಮಕ್ಕಳ ಪೋಷಕರಿಗೆ ಚಿರು ಪತ್ನಿ ಪ್ರಾಮಿಸ್

Must read

ಸ್ಯಾಂಡಲ್​ವುಡ್​ ಸೆಲೆಬ್ರೆಟಿಗಳು ಸೋಶಿಯಲ್​ ಮೀಡಿಯಾದಲ್ಲಿ ಏನಾದ್ರೊಂದು ಪೋಸ್ಟ್​ಗಳನ್ನ ಹಾಕ್ತಾನೇ ಇರ್ತಾರೆ. ಆದರೆ, ಈ ಬಾರಿ ಮೇಘನಾ ರಾಜ್ ಹಾಕಿರುವ ಪೋಸ್ಟ್ ಎಲ್ಲರ ಮನಗೆದ್ದಿದೆ.ಜವಾಬ್ದಾರಿಯುತ ತಾಯಿ ಸ್ಥಾನದಲ್ಲಿ ನಿಂತು, ಹೆಣ್ಣುಮಕ್ಕಳ ಪೋಷಕರಿಗೆ ಪ್ರಾಮಿಸ್​ ಮಾಡಿದ್ದಾರೆ. 

ಚಿರು ಅಗಲಿಕೆಯಿಂದ ನೊಂದಿದ್ದ ಮೇಘನಾರಾಜ್,​ ಆ ನೋವನ್ನ ಜೂನಿಯರ್ ಚಿರು ಆಗಮನದಿಂದ ಚೇತರಿಸಿಕೊಳ್ತಿದ್ದಾರೆ. ಜೂ.ಚಿರು ಎಂಟ್ರಿಯಿಂದ ಚಿರು ಮತ್ತು ಮೇಘನಾ ಫ್ಯಾಮಿಲಿಯಲ್ಲಿ ಸಂತಸ ಮನೆಮಾಡಿದೆ. ಅದರ ಜೊತೆಗೆ ತಾಯಿ ಮೇಘನಾರಾಜ್​ ಜವಾಬ್ದಾರಿ ಕೂಡ ಹೆಚ್ಚಾಗಿದೆ. ಮುದ್ದಿನ ಮಗನನ್ನು ಹೇಗೆ ಬೆಳೆಸಬೇಕು ಅನ್ನೋ ಬಗ್ಗೆ ಯೋಚನೆ ಮಾಡಿದ್ದಾರೆ ಮೇಘನಾರಾಜ್.

ರೀಸೆಂಟಾಗಿ ಮೇಘನಾರಾಜ್​ ಸೇರಿದಂತೆ ಪೋಷಕರು ಮತ್ತು ಮಗುವಿಗೆ ಕೊರೊನಾ ಪಾಸಿಟಿವ್ ಆಗಿತ್ತು..ಈ ವಿಚಾರವನ್ನ ಸ್ವತಃ ಸೋಶಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದರು ಮೇಘನಾ. ಸದ್ಯ ಇಡೀ ಕುಟುಂಬ ಆರೋಗ್ಯವಾಗಿ, ಆರಾಮವಾಗಿ ಇದ್ದಾರೆ. ಮೇಘನಾರಾಜ್​ ಕೂಡ ಮುದ್ದು ಕಂದಮ್ಮನ ಪಾಲನೆ -ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯ ಮೇಘನಾರಾಜ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದನ್ನ ಹಾಕಿದ್ದಾರೆ. ಈ ಪೋಸ್ಟ್​ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಒಬ್ಬ ತಾಯಿಯ ಜವಾಬ್ದಾರಿಯನ್ನ ಎತ್ತಿ ಹಿಡಿದಿದೆ. ಒಬ್ಬ ತಾಯಿಯಾಗಿ ಮೇಘನಾ ತಮ್ಮ ಮಗುವನ್ನ ಹೇಗೆ ಬೆಳೆಸಲಿದ್ದಾರೆ ಅನ್ನೋದನ್ನ ಬಿಂಬಿಸ್ತಿದೆ. ಈ ಪೋಸ್ಟ್ ಮೂಲಕ ಹೆಣ್ಣುಮಕ್ಕಳ ಪೋಷಕರಿಗೆ ಪ್ರಾಮಿಸ್ ಮಾಡಿದ್ದಾರೆ ಮೇಘನಾ ರಾಜ್.

ನಿಮ್ಮ ಮಗಳು ಸೇಫಾಗಿರುವಂತೆ ನಾನು ನನ್ನ ಮಗನನ್ನ ಬೆಳೆಸುತ್ತೆನೆ. ಇದು ನನ್ನ ಪ್ರಾಮಿಸ್ ಅಂತ ಮೇಘನಾ ಪೋಸ್ಟ್ ಹಾಕಿದ್ದಾರೆ. ಸಮಾಜದಲ್ಲಿ ಸಮಾನತೆ ಇದೆ ಅಂತಾದ್ರೂ, ಇದು ಕೇವಲ ಬಾಯಿಮಾತಿಗಷ್ಟೇ ಸೀಮಿತವಾದಂತಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನಕ್ಕಂತೂ ಫುಲ್​ ಸ್ಟಾಪ್​ ಇಡೋಕ್ಕಾಗ್ತಿಲ್ಲ. ಹಾಗಾಗಿ ಗಂಡುಮಕ್ಕಳನ್ನು ಬೆಳೆಸಬೇಕಾದ ರೀತಿಯ ಬಗ್ಗೆ ಮೇಘನಾ ರಾಜ್ ಪೋಸ್ಟ್ ಹೇಳುತ್ತಿದೆ. ಗಂಡು ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಿದರೆ ಹೆಣ್ಣು ಮಕ್ಕಳು ಸುರಕ್ಷಿತವಾಗಿರಲು ಸಾಧ್ಯ, ನಾನು ನನ್ನ ಮಗನನ್ನು ಹಾಗೆಯೇ ಬೆಳೆಸುತ್ತೇನೆ ಅಂತಿದ್ದಾರೆ ಮೇಘನಾ ರಾಜ್.

ಮೇಘನಾರಾಜ್​ರ ಈ ಬರವಣಿಗೆ ನಿಜಕ್ಕೂ ಅರ್ಥಪೂರ್ಣವಾದದ್ದು. ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು, ವ್ಯಕ್ತಿತ್ವ ರೂಪಿಸಿಕೊಳ್ಳಲು, ಅವರು ಬೆಳೆಯೋ ರೀತಿ ಮತ್ತು ವಾತಾವರಣ ಕೂಡ ಕಾರಣವಾಗಿರುತ್ತೆ. ಹಾಗಾಗಿ ಮಗನನ್ನ ಬೆಳೆಸುವಲ್ಲಿ, ತಾಯಿ ಮೇಘನಾರಾಜ್ ಬಹಳ ಕಾಳಜಿ ತೋರ್ತಿದ್ದಾರೆ.

Also read:  ಸಂಕಷ್ಟದಲ್ಲಿರುವ ಸಿನಿಮಾ ಕಲಾವಿದರಿಗೆ, ಕಾರ್ಮಿಕರಿಗೆ ರಾಕಿಂಗ್​​ ಸ್ಟಾರ್​ ನೆರವು

Latest article