Tuesday, May 17, 2022

ಸೋಶಿಯಲ್​ ಮೀಡಿಯಾದಲ್ಲಿ ಅದಿತಿ ಪ್ರಭುದೇವಾ ಸಾಂಗ್​ ಟೀಸರ್ ವೈರಲ್

Must read

ಶಾನೆ ಟಾಪಾಗಿರೋ ಹುಡುಗಿ ಅದಿತಿ ಪ್ರಭುದೇವಾ ಈಗ ಪರ್ಫೆಕ್ಟ್ ಗರ್ಲ್​. ಲಾಕ್​ಡೌನ್​ನಲ್ಲಿ ಸಿನಿಮಾ ಶೂಟಿಂಗ್​ ಇಲ್ಲದೇ ಎಲ್ಲಾ ನಟಿಮಣಿಯರು ಫ್ರೀ ಆಗಿ ಕಾಲ ಕಳೆಯುವಾಗ ಅದಿತಿ ಮಾತ್ರ ಸದ್ದಿಲ್ಲದೇ ಆಲ್ಬಂ ಸಾಂಗ್​ ಮಾಡಿ ಮುಗಿಸಿದ್ದಾರೆ. ಇದೀಗ ಆ ಸಾಂಗ್​ ಟೀಸರ್​ ರಿಲೀಸ್ ಆಗಿದ್ದು , ಸೋಶಿಯಲ್​ ಮೀಡಿಯಾದಲ್ಲಿ ಪಾಸಿಟಿವ್ ರೆಸ್ಪಾನ್ಸ್​ ಸಿಕ್ತಿದೆ.

ಸ್ಯಾಂಡಲ್​​ವುಡ್​ನಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳನ್ನ ಮಾಡಿದ್ರೂ, ಕಡಿಮೆ ಸಮಯದಲ್ಲೇ ಭರವಸೆ ಮೂಡಿಸಿದ ನಟಿ ಅದಿತಿ ಪ್ರಭುದೇವಾ. ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿರೋ ಅದಿತಿ, ವೆರಿ ಗುಡ್​ ಫರ್ಫಾಮರ್​ ಕೂಡ ಹೌದು. ಸಿನಿಮಾಗಳಲ್ಲಿ ಹೆಚ್ಚಾಗಿ ಹೋಮ್ಲಿ ಗರ್ಲ್​ ಆಗಿ ಕಾಣಿಸಿಕೊಳ್ಳೋ ಅದಿತಿ ಇದೀಗ ಸಖತ್​ ಬೋಲ್ಡ್​ ಅಂಡ್ ಗ್ಲಾಮ್​ ಲುಕ್​ನಲ್ಲಿ ಮಿಂಚಿದ್ದಾರೆ. ಅದು ತಮ್ಮದೇ ಅಭಿನಯದ ಹೊಸ ಆಲ್ಬಂ ಸಾಂಗ್​​ಗಾಗಿ.

ಅಂದ್ಹಾಗೇ ಈ ಆಲ್ಬಂ ಗೆ ಪರ್ಫೇಕ್ಟ್​ ಗರ್ಲ್​ ಅಂತ ಟೈಟಲ್​ ಇಟ್ಟಿದ್ದು, ಈಗಿನ ಜನರೇಶನ್ ಹುಡುಗ, ತನ್ನ ಹುಡುಗಿ ಹೇಗಿರಬೇಕು ಅಂತ ಇಮ್ಯಾಜಿನ್​ ಮಾಡ್ತಾನೆ ಅನ್ನೋದೇ ಈ ಹಾಡಿನ ಕಾನ್ಸೆಪ್ಟ್. ಈ ಹಾಡಿನಲ್ಲಿ ಅದಿತಿ ಪ್ರಭುದೇವ ಕೂಡ ಸಖತ್​​ ಡಿಫ್ರೆಂಟ್​​ ಲುಕ್​ನಲ್ಲಿ ಮಿಂಚಿದ್ದು, ಕಾಸ್ಟ್ಯೂಮ್​, ಹೇರ್​ಸ್ಟೈಲ್​, ಎಲ್ಲವನ್ನೂ ಹೊಸದಾಗಿ ಟ್ರೈ ಮಾಡಿದ್ದಾರೆ. ಜೊತೆಗೆ ಅದಿತಿ ಈ ಹಾಡಿನಲ್ಲಿ ಬೈಕ್​ ರೈಡಿಂಗ್​ ಮಾಡಿರೋದು ಕೂಡ ವಿಶೇಷವಾಗಿದೆ.

ಪರ್ಫೇಕ್ಟ್​ ಗರ್ಲ್​ ಹಾಡನ್ನ ಬೆಂಗಳೂರು ಸುತ್ತಮುತ್ತ ಇನ್​ಡೋರ್ ಮತ್ತು ಔಟ್​ಡೋರ್​ ಲೋಕೇಷನ್​ಗಳಲ್ಲಿ 2 ದಿನಗಳ ಕಾಲ ಶೂಟ್ ಮಾಡಲಾಗಿದೆ. ಈ ಹಾಡಿಗೆ ಸಾಹಿತ್ಯ, ಸಂಗೀತ, ದನಿ, ನಿರ್ಮಾಣ ಎಲ್ಲದರ ಜವಾಬ್ದಾರಿ ಹೊತ್ತಿರೋದು ಯಂಗ್​ ಟ್ಯಾಲೆಂಟ್​ ಅಭಿ ಮಲ್ಟಿ. ಇನ್ನು ನಿರ್ದೇಶನ ಮತ್ತು ಕೊರಿಯೋಗ್ರಫಿ ಅಭಿಷೇಕ್​ ಮತಡ್ ಮಾಡಿದ್ರೆ, ಶ್ರೀನಿವಾಸ್ ಕ್ಯಾಮೆರಾ ವರ್ಕ್​ ಮಾಡಿದ್ದಾರೆ. ಚಂದನ್​ಗೌಡ ಕಾಸ್ಟ್ಯೂಮ್, ಬಾಸಿಕ್ಸ್​ ಮ್ಯೂಸಿಕ್ ಈ ಹಾಡಿಗಿದೆ.

ಸದ್ಯ ಸ್ಯಾಂಡಲ್​​ವುಡ್​ ಬ್ಯುಸಿಯೆಸ್ಟ್​ ನಟಿಮಣಿಯರ ಲಿಸ್ಟ್​ಗೆ ಸೇರಿರೋ ಅದಿತಿ ಪ್ರಭುದೇವಾ ಓಲ್ಡ್ ಮಾಂಕ್, ತೋತಾಪುರಿ, ಗಜಾನನ ಗ್ಯಾಂಗ್, ದಿಲ್​ಮಾಲ್​ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಎಲ್ಲಾ ಸಿನಿಮಾಗಳಿಗೂ ಮುನ್ನ ಪರ್ಫೆಕ್ಟ್ ಗರ್ಲ್​ ಆಲ್ಬಂ ಸಾಂಗ್​ ಮೂಲಕ ಸಿನಿಪ್ರಿಯರನ್ನ ರಂಜಿಸಲಿದ್ದಾರೆ.

Also read:  'ಸಿನಿ ರಸಿಕರಿಗೆ ಕಾಮಿಡಿ ಟಾನಿಕ್​​ ಕುಡಿಸಲು ಈ ಶುಕ್ರವಾರ ಬ್ರಹ್ಮಚಾರಿ ಸಿದ್ಧ'

Latest article