ಸೆಲ್ಫಿ ಜನಜೀವನದಲ್ಲಿ ಹಾಸು ಹೊಕ್ಕಿದೆ. ಕೆಲವರಿಗೆ ಅತೀಯಾದ ಸೆಲ್ಫಿ ಕ್ರೇಜ್ ಇದ್ದು, ಇದೇ ಪ್ರಾಣಕ್ಕೆ ಕಂಟಕವಾಗಿರುವ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಇದೇ ರೀತಿ ಗನ್ ಜೊತೆ ಸೆಲ್ಫಿ ತೆಗೆದುಕೊಳ್ಳು ಹೋದ ನವವಿವಾಹಿತೆ ಸಾವನ್ನಪ್ಪಿರುವ ಘಟನೆ ಲಕ್ನೋದಲ್ಲಿ ನಡೆದಿದೆ.
ರಾಧಿಕಾ ಎನ್ನುವ ನವವಿವಾಹಿತೆ ಗನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೊಬೈಲ್ ಬಟನ್ ಕ್ಲಿಕ್ ಮಾಡುವ ಬದಲು ಗನ್ ಟ್ರಿಗರ್ ಒತ್ತಿದ್ದಾರೆ. ಇನ್ನು ಆ ಗನ್ಗೆ ಬುಲೆಟ್ ಲೋಡ್ ಆಗಿರುವ ಬಗ್ಗೆ ಆಕೆಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ.
ಗನ್ ಶಾಟ್ನಿಂದ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು, ಆದರೆ ಮಾರ್ಗ ಮಧ್ಯಯೇ ರಾಧಿಕ ಸಾವನ್ನಪ್ಪಿದ್ದಾರೆ. ಯುವತಿ ಮನೆಯವರು ಇದು ಕೊಲೆ ಎಂದು ಆರೋಪಿಸಿದ್ದಾರೆ. ಆದರೆ ರಾಧಿಕ ಪತಿ ಮಾತ್ರ ಇದು ಆಕಸ್ಮಿಕ ಘಟನೆ ಆಕೆಗೆ ಗನ್ ಬಗ್ಗೆ ಬಹಳ ಆಸಕ್ತಿಯಿದ್ದು, ಅದರೊಂದಿಗೆ ಜಾಸ್ತಿ ಫೋಟೋಗಳನ್ನು ತೆಗೆಯುತ್ತಿದ್ದಳು ಎಂದಿದ್ದಾರೆ.