Tuesday, May 17, 2022

ತಿರುಪತಿಗೆ ಹೋಗಲು ಕಾದಿರುವ ಭಕ್ತರಿಗೆ ಸಿಹಿ ಸುದ್ದಿ

Must read

ಹೈದರಾಬಾದ್: ತಿರುಪತಿವೆಂಕಟೇಶ್ವರ ದೇವರ ವಿಶೇಷ ದರ್ಶನಕ್ಕಾಗಿ ಆನ್ಲೈನ್ ಮೂಲಕ ಪ್ರತಿ ದಿನ ವಿತರಿಸುವ ಪಾಸ್ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ತಿರುಪತಿ ತಿರುಮಲ ದೇವಸ್ಥಾನ ಶನಿವಾರ ತಿಳಿಸಿದೆ. ಆಗಸ್ಟ್ ತಿಂಗಳ ಟಿಕೆಟ್ಗಳ ಸಂಖ್ಯೆಯನ್ನು 5,000ದಿಂದ 8,000ಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಕೋವಿಡ್-19 ಪ್ರಕರಣಗಳ ತೀವ್ರತೆಯನ್ನು ಆಧರಿಸಿ ಟಿಕೆಟ್ಗಳ ಸಂಖ್ಯೆಯನ್ನು ಪರಿಷ್ಕರಿಸಲಾಗುವುದು. ತಿರುಪತಿಗೆ ಬರುವ ಭಕ್ತರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಟಿಟಿಡಿ ಸಿಇಒ ಡಾ.ಜವಾಹರ್ ರೆಡ್ಡಿ ಮನವಿ ಮಾಡಿದ್ದಾರೆ.

Latest article