Tuesday, May 17, 2022

ಏನಿದು ಮೂರು ಮಕ್ಕಳ ಹೊಸ ನೀತಿ..? ಈ ನಿರ್ಧಾರದ ಹಿಂದಿನ ಹೊಸ ತಂತ್ರವೇನು..?

Must read

ಚೀನಾದ ಕಮ್ಯುನಿಸ್ಟ್ ಸರ್ಕಾರವು ಮಕ್ಕಳ ನೀತಿಯಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಚೀನಾ ಈಗ ಮೂರು ಮಕ್ಕಳ ನೀತಿಯನ್ನು ಅನುಮೋದಿಸಿದೆ. ಅಂದರೆ ಚೀನಾದ ಜನರು ಈಗ ಮೂರು ಮಕ್ಕಳನ್ನು ಪಡೆಯಬಹುದು. ಮೂರು ಮಕ್ಕಳಿಗೆ ಜನ್ಮ ನೀಡುವವರಿಗೆ ವಿಶೇಷ ಆರ್ಥಿಕ ಪ್ರೋತ್ಸಾಹವನ್ನೂ ನೀಡುವುದಾಗಿ ಚೀನಾ ಸರ್ಕಾರ ಹೇಳಿದೆ.

ಚೀನಾದಲ್ಲಿ ಮಕ್ಕಳ ನೀತಿಯಲ್ಲಿ ಬದಲಾವಣೆಗೆ ಬಹಳ ದಿನಗಳಿಂದ ಬೇಡಿಕೆ ಇತ್ತು. ಈ ಹಿಂದೆ1980 ರಲ್ಲಿ ಒನ್ ಚೈಲ್ಡ್ ಪಾಲಿಸಿಯ ಕಠಿಣವಾದ ಒಂದು ಮಗುವಿನ ನೀತಿಯಿಂದಾಗಿ ಪ್ರಪಂಚದಾದ್ಯಂತ ಈಗಾಗಲೇ ಟೀಕಿಸಲ್ಪಟ್ಟಿತ್ತು. ಈ ಕಾರಣಕ್ಕಾಗಿ ಚೀನಾ 2016 ರಲ್ಲಿ ಒಂದು ಮಗುವಿನ ಬದಲು ಎರಡು ಮಕ್ಕಳ ನೀತಿಯನ್ನು ಜಾರಿಗೊಳಿಸಿತು. ಈಗ ಅದನ್ನು ಮತ್ತೆ ಬದಲಾಯಿಸಲಾಗಿದೆ.

ಏನಿದು ಚೀನಾದ ಮೂರು ಮಕ್ಕಳ ಹೊಸ ನೀತಿ..? 

ಆಗಸ್ಟ್ 20 ರಂದು ಚೀನಾ ಸರ್ಕಾರ ಮೂರು ಮಕ್ಕಳ ನೀತಿಯನ್ನು ಅನುಮೋದಿಸಿದೆ. ಅಂದರೆ ಈಗ ಚೀನಾದ ಪ್ರಜೆಗಳು ಮೂರು ಮಕ್ಕಳನ್ನು ಹೊಂದಲು ಸಾಧ್ಯವಾಗುತ್ತದೆ. ಈ ವರ್ಷದ ಮೇ ತಿಂಗಳಲ್ಲಿ ಚೀನಾದ ಆಡಳಿತ ಕಮ್ಯುನಿಸ್ಟ್ ಪಕ್ಷವು ಎರಡು-ಮಕ್ಕಳ ನೀತಿಯನ್ನು ಸಡಿಲಗೊಳಿಸಿತು. ಎಲ್ಲಾ ಪೋಷಕರಿಗೆ ಮೂರು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಟ್ಟಿತು. ಆಗಸ್ಟ್ 20 ರಂದು ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್​ನ ಸ್ಥಾಯಿ ಸಮಿತಿಯು ಈ ಹೊಸ ನೀತಿಯನ್ನು ಅಂಗೀಕರಿಸಿತು.

ಅದೇ ಸಮಯದಲ್ಲಿ, ಪೋಷಕರು ಹೆಚ್ಚು ಮಕ್ಕಳನ್ನು ಹೆರಬೇಕು, ಇದಕ್ಕಾಗಿ ಸರ್ಕಾರವು ಜನರಿಗೆ ಆರ್ಥಿಕ ಸಹಾಯವನ್ನು ನೀಡುವುದಾಗಿ ಘೋಷಿಸಿದೆ. ಈ ಹೊಸ ಮಸೂದೆಯಲ್ಲಿ ಸರ್ಕಾರವು ಹಣಕಾಸು, ತೆರಿಗೆ, ವಿಮೆ, ಶಿಕ್ಷಣ, ವಸತಿ ಮತ್ತು ಉದ್ಯೋಗಗಳಂತಹ ಅನೇಕ ಕ್ಷೇತ್ರಗಳಲ್ಲಿ ಪೋಷಕರಿಗೆ ಸಹಾಯ ಮಾಡಲಿದೆ, ಇದರಿಂದ ಪೋಷಕರ ಮೇಲೆ ಮಕ್ಕಳನ್ನು ಬೆಳೆಸುವುದಕ್ಕೆ ಆರ್ಥಿಕ ಹೊರೆ ಬೀಳುವುದನ್ನು ತಪ್ಪಿಸುತ್ತಿದೆ.

ಚೀನಾ ಏಕೆ ಈ ನಿರ್ಧಾರ ತೆಗೆದುಕೊಂಡಿತು?

ದೇಶದಲ್ಲಿ ಕಡಿಮೆಯಾಗುತ್ತಿರುವ ಯುವ ಪೀಳಿಗೆ ಮತ್ತು ಹೆಚ್ಚಾಗುತ್ತಿರುವ ವೃದ್ಧರ ಸಂಖ್ಯೆ ಇದಕ್ಕೆ ಪ್ರಮುಖ ಕಾರಣ. ಚೀನಾದಲ್ಲಿ ಈಗ ಯುವಜನತೆಯ ಸಂಖ್ಯೆ ಕಡಿಮೆಯಾಗುತ್ತಿದೆ ಒನ್ ಚೈಲ್ಡ್ ಪಾಲಿಸಿ ಜಾರಿಯಾದ ನಂತರ. ಚೀನಾದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರ ಜನಸಂಖ್ಯೆಯು 260 ಮಿಲಿಯನ್‌ಗಿಂತ ಹೆಚ್ಚಾಗಿದೆ. ಮುಂದಿನ 10 ವರ್ಷಗಳಲ್ಲಿ ಚೀನಾದ ಜನಸಂಖ್ಯೆಯ ಸುಮಾರು ಕಾಲು ಭಾಗದಷ್ಟು ಜನರು 65 ವರ್ಷಕ್ಕಿಂತ ಮೇಲ್ಪಟ್ಟವರಾಗಿರುತ್ತಾರೆ ಎನ್ನುವುದು ಚೀನಾ ಸರ್ಕಾರಿ ಮೂಲಕ್ಷ ಸಮೀಕ್ಷೆಯ ವರದಿಯಿಂದ ತಿಳಿದು ಬಂದಿದೆ. ದೇಶದಲ್ಲಿ ವೃದ್ಧರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ, ಈ ಕಾರಣದಿಂದಾಗಿ ಚೀನಾದ ಆರ್ಥಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಯುವಕರ ಕೊರತೆ ಎದುರಾಗುತ್ತಿದೆ. ಈಗಾಗಲೇ ಕೆಲಸಗಾರರ ಬಿಕ್ಕಟ್ಟನ್ನು ಎದುರಿಸಿರುವ ಚೀನಾ. ಈ ಬಿಕ್ಕಟ್ಟನ್ನು ನಿವಾರಿಸಲು ಚೀನಾದಲ್ಲಿ ನಿವೃತ್ತಿ ವಯಸ್ಸನ್ನು 65 ವರ್ಷ ವಯಸ್ಸಿಗೆ ಹೆಚ್ಚಿಸಬೇಕಾಯಿತು. ಚೀನಾದಲ್ಲಿ ಯುವ ದುಡಿಯುವ ಯುವ ಜನಸಂಖ್ಯೆಯು ನಿರಂತರವಾಗಿ ಕಡಿಮೆಯಾಗುತ್ತಿದೆ. 2010 ರ ಹೊತ್ತಿಗೆ ಚೀನಾದಲ್ಲಿ 15-59 ವರ್ಷ ವಯಸ್ಸಿನ ಜನಸಂಖ್ಯೆಯು 70% ಕ್ಕಿಂತ ಹೆಚ್ಚು ಇತ್ತು. ಈಗ ಇದು 2020 ರಲ್ಲಿ 63.4% ಕ್ಕೆ ಇಳಿದಿದೆ ಇದೇ ಈಗ ಚೀನಾದ ಈ ನಿರ್ಧಾರಕ್ಕೆ ಕಾರಣವಾಗಿದೆ.

Also read:  ಮತ್ತೆ ನಾಯಕನ ಪಾತ್ರದಲ್ಲಿ ಮಿಂಚಲಿದ್ದಾರೆ ರಿಷಬ್ ಶೆಟ್ಟಿ
Also read:  ದೇಶದಲ್ಲಿ ಒಂದೇ ದಿನ 44,658 ಮಂದಿಗೆ ಕೊರೊನಾ ಸೋಂಕು

ಕುಸಿಯುತ್ತಿರುವ ಜನನ ಪ್ರಮಾಣ..!

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊದಿರುವ ರಾಷ್ಟ್ರ ಚೀನಾ ಈಗ ಕಡಿಮೆ ಜನನ ಪ್ರಮಾಣವನ್ನು ಹೊಂದಿದೆ ಮತ್ತು ಈ ಅಂಕಿ ಅಂಶವು ನಿರಂತರವಾಗಿ ಕಡಿಮೆಯಾಗುತ್ತ ಸಾಗುತ್ತಿದೆ. 2016 ರಲ್ಲಿ ಚೀನಾದಲ್ಲಿ 1.8 ಕೋಟಿ ಮಕ್ಕಳು ಜನಿಸಿದರು, 2019 ರಲ್ಲಿ ಈ ಸಂಖ್ಯೆ 1.4 ಕೋಟಿಗೆ ಇಳಿಕೆ ಕಂಡಿತು, 2020 ರಲ್ಲಿ ಈ ಅಂಕಿ ಅಂಶವು 1.2 ಕೋಟಿಗೆ ಇಳಿಕೆ ಕಂಡಿದೆ. ಇದು 1960 ರ ನಂತರ ಅತ್ಯಂತ ಕಡಿಮೆ ಪ್ರಮಾಣದ ಜನನ ದಾಖಲಾತಿಯಾಗಿದೆ. 1960 ರಲ್ಲಿ ಭೀಕರ ಬರಗಾಲದಿಂದಾಗಿ ಚೀನಾದಲ್ಲಿ ಜನನ ಪ್ರಮಾಣ ಕುಸಿದಿತ್ತು.

ಕುಸಿಯುತ್ತಿರುವ ಜನಸಂಖ್ಯೆ

ವಿಶ್ವ ಬ್ಯಾಂಕ್ 2030-40ರ ವೇಳೆಗೆ ಚೀನಾದ ಜನಸಂಖ್ಯೆಯು ಉತ್ತುಂಗಕ್ಕೇರಲಿದೆ ಎಂದು ಅಂದಾಜಿಸಿದೆ. ಆದರೆ ನಂತರ ಚೀನಾದ ಜನಸಂಖ್ಯೆಯು ಕುಸಿಯಲು ಪ್ರಾರಂಭವಾಗುತ್ತದೆ. ಆದಾಗ್ಯೂ ಮುಂಬರುವ ದಶಕದಲ್ಲಿ, ಪ್ರಸ್ತುತ ಕ್ಷೀಣಿಸುತ್ತಿರುವ ಜನಸಂಖ್ಯೆಯನ್ನು ಅವಲೋಕಿಸುತ್ತಿರುವ ತಜ್ಞರು ವ್ಕ್ತ ಪಡಿಸಿರುವ ಅಭಿಪ್ರಾಯದಂತೆ. ಸದ್ಯ1.44 ಬಿಲಿಯನ್ ಆಗಿರುವ ಜನಸಂಖ್ಯೆ 2100 ರ ಹೊತ್ತಿಗೆ ಸುಮಾರು 1 ಬಿಲಿಯನ್​ಗೆ ಇಳಿಕೆ ಕಾಣಲಿದೆ ಎಂದು ಅಂದಾಜಿಸಿದ್ದಾರೆ. ಮೇ 11, 2021 ರಂದು ಬಿಡುಗಡೆಯಾದ ಚೀನಾದ ಜನಸಂಖ್ಯಾ ದತ್ತಾಂಶದಲ್ಲಿ 2011 ಮತ್ತು 2020 ರ ನಡುವೆ ಚೀನಾದ ಜನಸಂಖ್ಯಾ ಬೆಳವಣಿಗೆ ದರ 5.38% ಆಗಿತ್ತು. 2010 ರಲ್ಲಿ ಇದು 5.84% ರಷ್ಟಿತ್ತು. ಅಲ್ಲದೆ ನಿರಂತರವಾಗಿ ಗಂಡು, ಹೆಣ್ಣುಗಳಲ್ಲಿ ಕುಸಿಯುತ್ತಿರುವ ಫಲವತ್ತತೆಯೂ ಜನಸಂಖ್ಯೆ ಕುಸಿಯಲು ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದೆ.

ಬೆಳೆಯುತ್ತಿರುವ ಲೈಂಗಿಕ ಅನುಪಾತದ ಅಂತರ

ಚೀನಾ ಕಟ್ಟುನಿಟ್ಟಾದ ಒಂದು-ಮಗುವಿನ ನೀತಿಯನ್ನು ಜಾರಿಗೆ ತಂದಾಗ, ಜನರು ತಮ್ಮ ಮಕ್ಕಳಲ್ಲಿ ಒಬ್ಬರೂ ಹುಡುಗಿಯಾಗಬಹುದು ಎಂದು ಭಯಪಡಲಾರಂಭಿಸಿದರು. ಈ ಕಾರಣದಿಂದಾಗಿ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಜನರು ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸಿಕೊಳ್ಳಲು ಆರಂಭಿಸಿದರು. ಇದರ ಪರಿಣಾಮವಾಗಿ ಚೀನಾದಲ್ಲಿಗ ಲಿಂಗ ಅನುಪಾತ ಹೆಚ್ಚಾಗತೊಡಗಿತ್ತು.

1980ರಲ್ಲಿ ಚೀನಾ ಒಂದು ಮಕ್ಕಳ ನೀತಿಯನ್ನು ಏಕೆ ಜಾರಿಗೊಳಿಸಿತ್ತು?

ಚೀನಾ 1979 ರಲ್ಲಿ ಒನ್ ಚೈಲ್ಡ್ ಪಾಲಿಸಿಯನ್ನು ಪರಿಚಯಿಸಿತು, ಇದನ್ನು 1980 ರಿಂದ ಜಾರಿಗೆ ತರಲಾಗಿತ್ತು. ಆಗ ಚೀನಾದ ಜನಸಂಖ್ಯೆ 98.61 ಕೋಟಿ ಮತ್ತು ನಿರಂತರವಾಗಿ ಹೆಚ್ಚುತ್ತ ಹೋಯಿತು. ಹೆಚ್ಚುತ್ತಿರುವ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಅಡ್ಡಿಯಾಗಬಹುದು ಎಂದು ಚೀನಾ ಭಯಪಟ್ಟಿತ್ತು. ಈ ಕಾರಣಕ್ಕಾಗಿ ಈ ಒಂದು ಮಕ್ಕಳ ನೀತಿಯನ್ನು ಜಾರಿಗೊಳಿಸಲಾಯಿತು. ಈ ಸಮಯದಲ್ಲಿ ಜನರಿಗೆ ಕುಟುಂಬ ಯೋಜನೆ ಬಗ್ಗೆ ಅರಿವು ಮೂಡಿಸಲಾಯಿತು ಮತ್ತು ಕಟ್ಟುನಿಟ್ಟನ ಕ್ರಮಗಳನ್ನು ಸಹ ಜಾರಿ ಮಾಡಲಾಯಿತು. ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಕ್ಕಾಗಿ ಜನರಿಗೆ ದಂಡ ವಿಧಿಸಲಾಯಿತು, ಕೆಲಸದಿಂದ ವಜಾ ಮಾಡಲಾಯಿತು, ಮಹಿಳೆಯರಿಗೆ ಗರ್ಭಪಾತ ಮಾಡಿಸಲಾಯಿತು ಮತ್ತು ಪುರುಷರನ್ನು ಬಲವಂತವಾಗಿ ಸಂತಾನ ಹರಣ ಮಾಡಿಸಲಾಯಿತು.

Also read:  ಸೋಶಿಯಲ್​ ಮೀಡಿಯಾದಲ್ಲಿ ಅದಿತಿ ಪ್ರಭುದೇವಾ ಸಾಂಗ್​ ಟೀಸರ್ ವೈರಲ್
Also read:  ಏಪ್ರಿಲ್​ 15ರಂದು ಐಪಿಎಲ್ ನಡೆಯೋದು ಡೌಟ್.!

2016 ರ ಎರಡು ಮಕ್ಕಳನ್ನು ಹೊಂದುವ ನೀತಿಯನ್ನು ಜಾರಿಗೆ ತಂದಿತು.

2016ರ ವರೆಗೆ ಚೀನಾದಲ್ಲಿ ಒಂದು ಮಕ್ಕಳ ನೀತಿ ಜಾರಿಯಲ್ಲಿತ್ತು. ಈ ಸಮಯದಲ್ಲಿ ಚೀನಾ 400 ದಶಲಕ್ಷ ಮಕ್ಕಳು ಜನಿಸುವುದನ್ನು ತಡೆಯಿತು ಎಂದು ವರದಿಗಳು ಹೇಳುತ್ತವೆ. ಇದರ ಪರಿಣಾಮವಾಗಿ ದೇಶದಲ್ಲಿ ವೃದ್ಧರ ಜನಸಂಖ್ಯೆಯು ಹೆಚ್ಚುತ್ತಲೇ ಹೋಯಿತು ಮತ್ತು ಯುವ ಜನಸಂಖ್ಯೆಯು ಕಡಿಮೆಯಾಯಿತು. ಈ ಕಾರಣದಿಂದಾಗಿ 2016ರಲ್ಲಿ ಚೀನಾದಲ್ಲಿ ಎರಡು-ಮಕ್ಕಳ ನೀತಿಯನ್ನು ಜಾರಿಗೆ ತರಲಾಯಿತು.

ವರದಿ-ಸಂತೋಷ್​ ರಾಥೋಡ್​

Latest article