ನಿಮ್ಮ ಹೆಸರು ಗಣೇಶ ಆಗಿದ್ದರೆ ವಂಡರ್ ಲಾಗೆ ಉಚಿತ ಪ್ರವೇಶ

ನಿಮ್ಮ ಹೆಸರು ಗಣೇಶ ಆಗಿದ್ದರೆ ವಂಡರ್ ಲಾಗೆ ಉಚಿತ ಪ್ರವೇಶ

ಭಾರತದ ಪ್ರಮುಖ ಅಮ್ಯೂಸ್ಮೆಂಟ್ ಪಾರ್ಕ್ ಆಗಿರುವ ವಂಡರ್ ಲಾ ವಿಚಿತ್ರ ಆಫರ್ ಒಂದನ್ನು ನೀಡಿದ್ದು, ಗಣೇಶ ಚತುರ್ಥಿಯಂದು ನಿಮ್ಮ ಹೆಸರು ಗಣೇಶನ 108 ಹೆಸರುಗಳಲ್ಲಿ ಒಂದಾಗಿದ್ದರೆ, ನೀವು ಸೆಪ್ಟೆಂಬರ್ 10 ರಂದು ವಂಡರ್ಲಾ ಪಾರ್ಕ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು ಎಂದು ಹೇಳಿದ್ದು ಗಣೇಶನ ಹೆಸರಿರುವ ಹಲವಾರು ಮಂದಿ ಈಗಾಗಲೇ ಆನ್ಲೈನ್ನಲ್ಲಿ ಈ ನೋಂದಾಯಿಸಿದ್ದಾರೆ. ಆಫರ್ ಆಫ್‌ಲೈನ್ ಬುಕಿಂಗ್‌ಗೆ ಮಾತ್ರ ಲಭ್ಯವಿದ್ದು ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್ ಪಾರ್ಕ್‌ಗಳಿಗೆ ಅನ್ವಯಿಸುತ್ತದೆ ಎಂದು ಹೇಳಲಾಗಿದೆ. ಆಫರ್ ಜೊತೆಗೆ, ಐಡಿ ಪ್ರೂಫ್‌ಗಳನ್ನು ಒಯ್ಯುವುದು ಕಡ್ಡಾಯವಾಗಿದೆ.

ಈ ಒಂದು ಆಫರ್ ಕೇವಲ ನೂರು ಮಂದಿಗೆ ಮಾತ್ರ ಲಭ್ಯವಿದೆ ಎಂದು ವಂಡರ್ ಲಾ ತಿಳಿಸಿದೆ.

ವಂಡರ್ಲಾ ಪ್ರವಾಸಿಗರು ತಮ್ಮ ಆನ್‌ಲೈನ್ ಪೋರ್ಟಲ್ bookings.wonderla.com ಮೂಲಕ ಮುಂಚಿತವಾಗಿ ತಮ್ಮ ಪ್ರವೇಶ ಟಿಕೆಟ್ ಕಾಯ್ದಿರಿಸಬೇಕು.

Related Stories

No stories found.
TV 5 Kannada
tv5kannada.com