Sunday, October 2, 2022

ವಿದೇಶಕ್ಕೆ ಹಾರಿದ 3 ಮಕ್ಕಳ ತಾಯಿ: ಪತ್ನಿಯ ಮೋಜು-ಮಸ್ತಿ ನೋಡಿ ಪತಿ ಸಾವಿಗೆ ಶರಣು

Must read

ತುಮಕೂರು: ಪ್ರಿಯಕರನೊಂದಿಗೆ ವಿದೇಶಕ್ಕೆ ಹಾರಿದ ಪತ್ನಿಯ ವರ್ತನೆಯಿಂದ ಮನನೊಂದು ಪತಿ ಸಾವಿಗೆ ಶರಣಾಗಿರುವ ಘಟನೆ ತುಮಕೂರು ನಗರದ ಪಿ.ಎಚ್ ಕಾಲೋನಿಯಲ್ಲಿ ನಡೆದಿದೆ.

ಸಮೀವುಲ್ಲಾ ಮೃತ ದುರ್ದೈವಿ.

ಸಮೀವುಲ್ಲಾ ಪತ್ನಿ ಸಾಹೇರಾ ಭಾನು ಸೌದಿ ಅರೇಬಿಯಾಗೆ ತೆರಳಿದ್ದು, ಮಕ್ಕಳು ಬೇಡಿಕೊಂಡರೂ ವಾಪಸ್​ ಬರದೆ ಮೋಜು-ಮಸ್ತಿ ಮಾಡುತ್ತಾ ಪತಿಗೆ ವಿಡಿಯೋ ಕಾಲ್​ ಮಾಡಿ ರೇಗಿಸುತ್ತಿದ್ದಳು. ಇದರಿಂದ ಮನನೊಂದ ಪತಿ ಸಮೀವುಲ್ಲಾ ಮಕ್ಕಳಿಗೆ ವಿಷವುಣಿಸಿ, ತಾನೂ ವಿಷ ಸೇವಿಸಿದ್ದಾರೆ.

ದುರಾದೃಷ್ಟವಶಾತ್​ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಸಮೀವುಲ್ಲಾ ಸಾವನ್ನಪ್ಪಿದ್ದು, ಮೂರು ಮಕ್ಕಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest article