Wednesday, June 29, 2022

ಶಿವಮೊಗ್ಗದಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತ: ಅಪಾಯಕ್ಕೆ ಅಹ್ವಾನ ನೀಡುತ್ತಿರುವ ನೀರಿನ ಸುಳಿಗಳು

Must read

ಶಿವಮೊಗ್ಗ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದೆ.

ಶಿವಮೊಗ್ಗದ ಗೋಪಾಲಗೌಡ ಬಡಾವಣೆ, ರವೀಂದ್ರನಗರದ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನ ಮನೆಯಿಂದ ಹೊರಬರಲು ಪರದಾಡುವಂತಾಗಿದೆ.

ಇನ್ನು ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ರಸ್ತೆಯ ಪಕ್ಕದಲ್ಲಿರುವ ಗುಂಡಿಗಳು ಅಪಾಯಕ್ಕೆ ಅಹ್ವಾನ ನೀಡುವಂತೆ ಬಾಯ್ತೆರೆದಿವೆ. ರಸ್ತೆ ಪಕ್ಕದಲ್ಲಿರುವ ಯುಜಿಡಿ ಗುಂಡಿಗಳಲ್ಲಿ ಸುಳಿ ನಿರ್ಮಾಣ‌ವಾಗಿದ್ದು, ಫೂಟ್​ಪಾತ್​ನಲ್ಲಿ ನಡೆದುಕೊಂಡು ಹೋಗುವವರು ತಿಳಿಯದೆ ಈ ಸುಳಿಗಳ ಬಳಿ ಕಾಲಿಟ್ಟರೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯಿದೆ.

Latest article