Wednesday, June 29, 2022

ಮಳೆ ನೀರಿನಲ್ಲಿ ತೇಲಿ ಬಂದ ಹಾವು ಕಡಿದು ಮಗು ಅಸ್ವಸ್ಥ

Must read

ಮಂಡ್ಯ: ಮಳೆ ನೀರಿನಲ್ಲಿ ತೇಲಿ ಬಂದ ಹಾವು ಮಗುವಿಗೆ ಕಚ್ಚಿರುವ ಘಟನೆ ಮಂಡ್ಯದ ಬೀಡಿ ಕಾರ್ಮಿಕರ ಕಾಲೋನಿಯಲ್ಲಿ ನಡೆದಿದೆ.

ಕದೀರಾ(4) ಹಾವು ಕಚ್ಚಿ ಅಸ್ವಸ್ಥಗೊಂಡಿರುವ ಮಗು.

ಜಿಲ್ಲೆಯಲ್ಲಿ ನಿರಂತರ ಮಳೆಯಾಗಿದ್ದು, ಬೀಡಿ ಕಾರ್ಮಿಕರ ಕಾಲೋನಿಗೆ ನೀರು ನುಗ್ಗಿದೆ. ಮಳೆ ನೀರಿನಲ್ಲಿ ಹಾವುಗಳ ಕಾಟ ಹೆಚ್ಚಾಗಿದ್ದು, ಮನೆ ಮುಂಭಾಗ ನಿಂತಿದ್ದ ಮಗುವಿಗೆ ಹಾವು ಕಡಿದಿದೆ. ಸದ್ಯ ಹಾವು ಕಡಿದು ಅಸ್ವಸ್ಥಗೊಂಡಿರುವ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Latest article