ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿಕೆ.
“ಕೊರಟಗೆರೆಗೆ ಬಂದು ಉದ್ಘಾಟನೆ ಮಾಡಿರೋದು ಸಂತೋಷ ಕೊಟ್ಟಿದೆ. ಕೋವಿಡ್ ಸಂದರ್ಭದಲ್ಲಿ ಮಂದಿರ ಮಸೀದಿ ಪೂಜಾ ಸ್ಥಳ ಮುಚ್ಚಿದ್ವು.ಕಚೇರಿಗಳು, ಶಾಲೆಗಳು ಮುಚ್ಚಿದ್ವು. ಆಗ 24 ತಾಸು ಬಾಗಿಲು ತೆಗೆದಿದ್ದ ಆಸ್ಪತ್ರೆಗಳು.
ಅಂತ ಕೆಲಸವನ್ನು ಈ ಗ್ರಾಮದಲ್ಲಿ ಮಾಡಲಾಗಿದೆ.
ಕೋವಿಡ್ ಬಂದ ನಂತರ ಮೂಲಭೂತ ಕೆಲಸಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಅದ್ರಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದ್ದೇವೆ.
ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಲ್ಲ. ಅನಾರೋಗ್ಯ ಆಗೋವರೆಗೂ ಕಾಯ್ತಾರೆ, ಆಮೇಲೆ ವೈದ್ಯರ ಬಳಿ ಹೋಗ್ತಾರೆ.
30 ವರ್ಷ ಮೇಲ್ಪಟ್ಟ ವರು ಅದ್ರಲ್ಲೂ ಮಹಿಳೆಯರೂ ಪ್ರತಿ ವರ್ಷ ಆರೋಗ್ಯ ಚೆಕ್ ಮಾಡಿಸಬೇಕು. ಇದ್ರಿಂದ ಸಕ್ಕರೆ ಖಾಯಿಲೆ ಮುಂತಾದವುಗಳನ್ನು ತಡೆಗಟ್ಟಬಹುದು.
ಡಯಲೀಸಿಸ್ ಹಿಂದೆ 30 ಸಾವಿರಕ್ಕೆ ಆಗ್ತಿತ್ತು.
ಈಗ ಅದು 60 ಸಾವಿರ ವರೆಗೂ ಹೋಗಿದೆ.
ಸಕ್ಕರೆ ಖಾಯಿಲೆಯಿಂದಾಗಿ ಹಲವು ಸಮಸ್ಯೆ ಗಳು ದೇಹದ ಮೇಲೆ ಆಗ್ತವೆ.
ಮೂತ್ರಪಿಂಡದ ಮೇಲೆಯೂ ಅದರ ಪರಿಣಾಮ ಬೀಳ್ತಿದೆ.
ನಾನು ಸಚಿವ ಆದ್ಮೆಲೆ, ನನಗೆ ಅವಕಾಶ ಬಂದ ಮೇಲೆ.
ಹೆಲ್ತ್ ಅಂಡ್ ವೆಲ್ ನೆಸ್ ಸೆಂಟರ್, ಮಾಡಿದ್ದೇವೆ.
7ಸಾವಿರ ಸಿ ಎಚ್ ಒ ಗಳನ್ನು ನೇಮಕ ಮಾಡಿದ್ದೇವೆ.
14 ಟೆಸ್ಟ್ ಗಳನ್ನು ಇದ್ರಲ್ಲಿ ಮಾಡಿದುವ ಅವಕಾಶ ಇದೆ.
ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ 50 ಕ್ಕೂ ಹೆಚ್ಚು ಟೆಸ್ಟ್ ಮಾಡಬಹದು.
24 ಗಂಟೆಯೂ ಇಲ್ಲಿ ವೈದ್ಯರು ಇರುವ ರೀತಿಯಲ್ಲಿ ವ್ಯವಸ್ಥೆ ಮಾಡುತ್ತೇವೆ.
ಡಾ.ಜಿ ಪರಮೇಶ್ವರ್ ರವರು ಮತ್ಸದ್ದಿ ರಾಜಕಾರಣಿ.
1993 ರರಲ್ಲಿ ನನಗೆ MBBS ಸೀಟು ಕೊಟ್ಟಿದ್ದಾರೆ.
ಮೊದನೇ ಸಲ ನನಗೆ ಶಾಸಕ ಆಗೋಕೆ ಅವಕಾಶ ಕೊಟ್ಟಿದ್ದೇ ಅವರು.
2013ರ ರಲ್ಲಿ ನನಗೆ ಶಾಸಕನಾಗೋದಕ್ಕೆ ಅವಕಾಶ ಮಾಡಿಕೊಟ್ಟರು.
ನಾನು ಇವತ್ತು ಬೇರೆ ಪಕ್ಷದಲ್ಲಿ ಇದೇನೆ ಅದು ಬೇರೆ ಮಾತು,
ಆದರೆ ಅವರ ಆತ್ನೀಯತೆಯನ್ನು ನಾನೆಂದು ಮರೆಯಲ್ಲ.
ತುಮಕೂರು ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ.