Monday, January 30, 2023

ಸಿದ್ದರಾಮಯ್ಯವಿರುದ್ಧ ನಳಿನ್ ಕುಮಾರ್ ಕಟೀಲ್ ಕಿಡಿ

Must read

ರಾಜ್ಯದಲ್ಲಿ ಯಾರಾದ್ರು ಪೇಮೆಂಟ್ ಮುಖ್ಯಮಂತ್ರಿ ಇದ್ರೆ ಅದು ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಮೇಡಂ (ಸೋನಿಯಾಗಾಂಧಿ)ಗೆ ಪೇಮೆಂಟ್ ಮಾಡಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಖರ್ಗೆ, ಪರಮೇಶ್ವರ ಸಿನಿಯರ್, ಡಿಕೆಶಿ, ದೇಶಪಾಂಡೆಯಂತ ಲೀಡರ್ ನಡುವೆ ಸಿಎಂ ಆಗಿದ್ದು ಪೇಮೆಂಟ್ ಮಾಡಿಯೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ. PAYCM ನಲ್ಲಿ ಎರಡು ಅರ್ಥ ಇದೆ. ಒಂದು ಪೇ ಸಿಎಂ ಸಿದ್ದರಾಮಯ್ಯ, ಇನ್ನೊಂದು ಪೇ ಕಾಂಗ್ರೆಸ್ ಮೇಡಂ ಅಂತಾ ಕಟೀಲ್ ವ್ಯಂಗ್ಯವಾಡಿದ್ದಾರೆ. ಅಲ್ಲದೆ ‘PAYCM’ ವಿಚಾರವನ್ನ ಕಟೀಲ್ ಸಿದ್ದರಾಮಯ್ಯ ಮತ್ತೆ ಡಿ.ಕೆ.ಶಿವಕುಮಾರ್​ಗೆ ತಗಲಾಕಿದ್ದಾರೆ. ಈ PAYCM ಬುದ್ಧಿವಂತಿಕೆ ಹಿಂದೆ ಡಿಕೆಶಿ ಇದ್ದಾರೆ. ಸಿದ್ದರಾಮಯ್ಯಗಾಗಿಯೇ ಈ ಪೇ ಸಿಎಂ ಅಭಿಯಾನ ಶುರು ಮಾಡಿದ್ದಾರೆ, ಫೋಟೊದಲ್ಲಿ ಮಾತ್ರ ಸಿಎಂ ಬೊಮ್ಮಾಯಿ ಫೋಟೋ ಬಳಕೆ ಮಾಡಿದ್ದಾರೆ.ಸಿದ್ದರಾಮಯ್ಯರನ್ನ ಹೊಡೆಯೋಕೆ ಡಿ.ಕೆ.ಶಿವಕುಮಾರ್​ ಪೇ ಸಿಎಂ ಮುಂದೆ ತಂದಿದ್ದಾರೆ. ನಮ್ಮ ಬಾಯಲ್ಲಿ ಹೇಳಿಸಲೆಂದೆ ಡಿ.ಕೆ.ಶಿವಕುಮಾರ್​ ಈ ಪ್ಲಾನ್ ಮಾಡಿದ್ದಾರೆ ಎಂದು ಕಟೀಲ್ PAYCM ವಿಚಾರವನ್ನು ತಿರುಚಲು ಯತ್ನಿಸಿದರು.

Latest article