Sunday, October 2, 2022

ಮೆದುಳು ನಿಷ್ಕ್ರಿಯವಾಗಿದ್ದ ಯುವತಿಯ ಹೃದಯ ಕಸಿ

Must read

ಮೆದುಳು ನಿಷ್ಕ್ರಿಯವಾಗಿದ್ದ ಯುವತಿಯ ಹೃದಯ ಕಸಿ ಮಾಡಲಾಗಿದೆ. ಹೃದಯ ಕಸಿಗಾಗಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೃದಯ ರವಾನೆ ಮಾಡಲಾಗಿದೆ. ವಿಶೇಷ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಜೀವಂತ ಹೃದಯ ರವಾನೆ ಮಾಡಲಾಗಿದೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೃದಯ ರವಾನೆ ಮಾಡಲಾಗಿದ್ದು. ಬೆಳಗ್ಗೆಯಿಂದಲೇ ಅಂಗಾಂಗ ಕಸಿ ಪ್ರಕ್ರಿಯೆ ನಡೆಲಾಗಿತ್ತು.
ಇನ್ನು ಚಿಕ್ಕಮಗಳೂರಿನಿಂದ ಕ್ಷಣಾರ್ಧದಲ್ಲೇ ಜೀವಂತ ಹೃದಯ ಹೆಲಿಪ್ಯಾಡ್ ತಲುಪಿತ್ತು. ಬಸ್ಸಿನಿಂದ ಬಿದ್ದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪ್ರಥಮ ಪಿಯುಸಿ ರಕ್ಷಿತ ಎಂಬ ಯುವತಿಯ ಮೆದುಳು ನಿಷ್ಕೃಯವಾಗಿತ್ತು. ಹೀಗಾಗಿ ಕುಟುಂಬಸ್ಥರು ಯುವತಿಯ ಒಟ್ಟು ಒಂಬತ್ತು ಅಂಗಗಳನ್ನ ದಾನ ಮಾಡಿದ್ದಾರೆ. ಅಲ್ಲದೇ ಯುವತಿಯ ಅಂಗಾಗಗಳನ್ನ ಚೆನೈ, ಬೆಂಗಳೂರು, ಮಣಿಪಾಲ್​ಗೆ ಅಂಗಾಗ ರವಾನೆ ಮಾಡಲಾಗಿದೆ.

Latest article