Sunday, October 2, 2022

ಕುಲಪತಿಗಳಿಂದ ಗೌರವ ಡಾಕ್ಟರೇಟ್​ ಘೋಷಿಸುವಲ್ಲಿ ಯಡವಟ್ಟು..!

Must read

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಆಚರಣೆ ಹಿನ್ನೆಲೆಯಲ್ಲಿ ನಟ ರಮೇಶ್​ ಅರವಿಂದಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಿ ರಾಣಿ ಚನ್ನಮ್ಮ ವಿ.ವಿ ಕುಲಪತಿಗಳಾದ ಪ್ರೋ. ಎಂ. ರಾಮಚಂದ್ರಗೌಡರಿಂದ ಯಡವಟ್ಟು. ಗೌರವ ಡಾಕ್ಟರೇಟ್​​ ನೀಡಲು ಈ ಮೊದಲು ವಿಶ್ವ ವಿದ್ಯಾಲಯದಿಂದ ಅರ್ಜಿಯನ್ನ ಅಹ್ವಾನಿಸಲಾಗಿತ್ತು. ವಿಶ್ವ ವಿದ್ಯಾಲಯಕ್ಕೆ 15ಕ್ಕೂ ಹೆಚ್ಚು ಜನರಿಂದ ಗೌರವ ಡಾಕ್ಟರೇಟ್​ ಪಡೆಯಲು ಅರ್ಜಿ ಸ್ವೀಕರಿಸಿತ್ತು. ವಿ.ವಿ ಕುಲಪತಿಗಳಿಂದ ಗೌರವ ಡಾಕ್ಟರೇಟ್​ ಘೋಷಿಸುವಲ್ಲಿ ಯಡವಟ್ಟಾಗಿ ನಟ ರಮೇಶ್​ ಅರವಿಂದ ಗೌರವ ಡಾಕ್ಟರೇಟ್​ ಪಡೆಯಲು ಅರ್ಜಿ ಸಲ್ಲಿಸದೆ ಇದ್ದರೂ ನಟ ರಮೇಶ್​ ಅರವಿಂದ ಅವರಿಗೂ ಡಾಕ್ಟರೇಟ್​ ಘೋಷಿಸಿದೆ.

ಸೆಪ್ಪೆಂಬರ್​ 14ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ರಾಣಿ ಚನ್ನಮ್ಮ ವಿ.ವಿಯ ಘಟಿಕೋತ್ಸವದಲ್ಲಿ ನಟ ರಮೇಶ್​​ ಅರವಿಂದ ಸೇರಿ ಮೂರು ಜನರಿಗೆ ಗೌರವ ಡಾಕ್ಟರೇಟ್​ ಘೋಷಣೆಯನ್ನು ಮಾಡಿದೆ. ಸಮಾಜಸೇವೆ ಕ್ಷೇತ್ರದಲ್ಲಿ ವಿ.ರವಿಚಂದರ್, ಧಾರ್ಮಿಕ ಕ್ಷೇತ್ರದಲ್ಲಿ ಮಾತೆ ಅಕ್ಕ ಅನ್ನಪೂರ್ಣಗೆ ಗೌರವ ಡಾಕ್ಟರೇಟ್ ಘೋಷಿಸಿದೆ. ಇನ್ನೂ ನಟ ರಮೇಶ್​ ಅರವಿಂದ ತಮಗೆ ಡಾಕ್ಟರೇಟ್​ ಘೋಷಣೆ ಮಾಡಿರುವುದೇ ಗೊತ್ತಿಲ್ಲ, ನಾನು ಯಾವುದೇ ಅರ್ಜಿಯನ್ನ ಸಲ್ಲಿಸಿಲ್ಲ, ನನಗೆ ವಿವಿಯಿಂದ ಗೌರವ ಡಾಕ್ಟರೇಟ್ ಘೋಷಣೆ ಮಾಡಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದ್ರೆ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೋ ಎಂ. ರಾಮಚಂದ್ರಗೌಡರು ನಟ ರಮೇಶ ಅರವಿಂದ ಅರ್ಜಿ ಸಲ್ಲಿಸಿದ್ದಾರೆ ಎಂದಿದ್ದಾರೆ.

 

Latest article