Thursday, May 19, 2022

ವಿದ್ಯಾರ್ಥಿಗಳನ್ನು ತರಗತಿಗೆ ಕರೆ ತರಲು ಪಾರ್ಕ್​ ರೇಡ್​ ಮಾಡಿದ ಅಧ್ಯಾಪಕರು..!

Must read

ಮೈಸೂರು: ವಿದ್ಯಾರ್ಥಿಗಳನ್ನು ತರಗತಿಗೆ ಕರೆ ತರಲು ಅಧ್ಯಾಪಕರು ರಸ್ತೆ ಹಾಗೂ ಪಾರ್ಕ್​ ರೇಡ್​ ಮಾಡಿರುವ ವಿಚಿತ್ರ ಘಟನೆ ಮೈಸೂರು ನಗರದಲ್ಲಿ ನಡೆದಿದೆ.

ನಗರದ ಪ್ರತಿಷ್ಠಿತ ಕಾಲೇಜುಗಳಾದ ಮರಿಮಲ್ಲಪ್ಪ, ಹಾರ್ಡ್ವಿಕ್, ಮಹಾರಾಜ ಸೇರಿದಂತೆ ಇತರ ಕಾಲೇಜು ವಿದ್ಯಾರ್ಥಿಗಳು ಸಾಮೂಹಿಕವಾಗಿ ತರಗತಿಗಳಿಗೆ ಬಂಕ್​ ಹಾಕಿ ಸುತ್ತಾಡುತ್ತಿದ್ದರು. ಅಲ್ಲದೇ ಇತ್ತಿಚೆಗೆ ಸಾರ್ವಜನಿಕ ವಲಯದಿಂದ ವಿದ್ಯಾರ್ಥಿಗಳ ಮೇಲೆ ದೂರುಗಳು ಸಹ ಹೆಚ್ಚಾಗಿ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಮಹಾರಾಜ ಕಾಲೇಜಿನ ಪ್ರಾಂಶುಪಾಲರ ನೇತೃತ್ವದಲ್ಲಿ ಅಧ್ಯಾಪಕರ ತಂಡ ರಸ್ತೆ ಹಾಗೂ ಪಾರ್ಕ್​ನಲ್ಲಿ ರೇಡ್ ಮಾಡಿದ್ಧಾರೆ.

ಅಧ್ಯಾಪಕರನ್ನು ನೋಡುತ್ತಿದ್ದಂತೆ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿದ್ದು, ಕೆಲ ವಿದ್ಯಾರ್ಥಿಗಳನ್ನು ತರಗತಿಗೆ ಕರೆತರಲಾಗಿದೆ. ಇನ್ನು ಅಧ್ಯಾಪಕ ಸ್ಥಿತಿ ಕಂಡು ಸಾರ್ವಜನಿಕರು ಮರುಗುವಂತಾಗಿದೆ.

Latest article