'ಪ್ರಧಾನಿ ಮೋದಿಯವರೇ ಕೋವಿಡ್​ ಲಸಿಕೆ ತೆಗೆದುಕೊಂಡಿದ್ದಾರೆ' - ಸಿಎಂ ಬಿಎಸ್​ವೈ

ಶೀಘ್ರದಲ್ಲೇ ಉಪಚುನಾವಣೆಗೆ ದಿನಾಂಕ ನಿಗದಿ ಆಗಲಿದೆ
'ಪ್ರಧಾನಿ ಮೋದಿಯವರೇ ಕೋವಿಡ್​ ಲಸಿಕೆ ತೆಗೆದುಕೊಂಡಿದ್ದಾರೆ' - ಸಿಎಂ ಬಿಎಸ್​ವೈ

ಶಿವಮೊಗ್ಗ: ಶೀಘ್ರದಲ್ಲೇ ಉಪಚುನಾವಣೆಗೆ ದಿನಾಂಕ ನಿಗದಿ ಆಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ ಮಿತ್ರರೊಂದಿಗೆ ಚುನಾವಣೆ ದಿನಾಂಕ ನಿಗದಿ ಬಗ್ಗೆ ಮಾತನಾಡಿದ ಅವರು, ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಗೆಲ್ಲಲು ವ್ಯವಸ್ಥೆ ಮಾಡಿಕೊಂಡಿದ್ದೇವೆ. ನೂರಕ್ಕೆ ನೂರರಷ್ಟು ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ನಮ್ಮ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಅವರು ಹಲವರಿಗೆ ಜವಾಬ್ದಾರಿ ವಹಿಸಿದ್ದಾರೆ. ಉಸ್ತುವಾರಿ ವಹಿಸಿಕೊಂಡಿರು ವವರು ಈಗಾಗಲೇ ಪ್ರವಾಸ ಮಾಡುತ್ತಿದ್ದಾರೆ ಎಂದರು.

ನೆರೆ-ಕೋವಿಡ್ ನಡುವೆಯೂ ಒಳ್ಳೆಯ ಬಜೆಟ್ ನೀಡಲು ಪ್ರಯತ್ನ ಮಾಡುತ್ತಿದ್ದೇನೆ. ಯಾವುದಕ್ಕೂ ಕೊರತೆ ಆಗದಂತೆ 8ನೇ ತಾರೀಖು ಬಜೆಟ್ ಮಂಡಿಸುತ್ತೇನೆ ಎಂದು ರಾಜ್ಯ ಬಜೆಟ್​ ಬಗ್ಗೆ ಮಾತನಾಡಿದರು.

ಕೋವಿಡ್ ಲಸಿಕೆ ಎಲ್ಲಾ ನಾಗರಿಕರು ತೆಗೆದುಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರು ಲಸಿಕೆ ತೆಗೆದುಕೊಳ್ಳಿ, ನಾನು ಸಹ ಲಸಿಕೆ ತೆಗೆದುಕೊಳ್ಳುತ್ತೇನೆ. ಪ್ರಧಾನಿ ಮೋದಿಯವರೇ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ. ಪ್ರಧಾನಿಯವರೇ ತೆಗೆದುಕೊಂಡ ಮೇಲೆ ಹಿಂಜರಿಕೆ ಮಾಡದೇ ಲಸಿಕೆ ಹಾಕಿಸಿಕೊಳ್ಳಿ ಎಂದು ಸಿಎಂ ಬಿಎಸ್​ವೈ ಅವರು ಹೇಳಿದರು.

Related Stories

No stories found.
TV 5 Kannada
tv5kannada.com