ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ.
ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆಗಳಿದ್ದು, ಶಿವಮೊಗ್ಗದ ಶಾಂತಮ್ಮ ಲೇಔಟ್, ವಿದ್ಯಾನಗರದ ವಾರ್ಡ್ ನಂಬರ್ 10, 11, 12, ಬೈಪಾಸ್ ರಸ್ತೆ ಪಕ್ಕದ ಲೇಔಟ್, ದೇವಂಗಿ ರತ್ನಾಕರ ಲೇ ಔಟ್, ತರಳಬಾಳು ಗುರು ಭವನ ಲೇಔಟ್, ತ್ಯಾವರಚಟ್ನಹಳ್ಳಿ ಭಾಗ, ಓಲ್ಡ್ ಮಂಡ್ಲಿ ಭಾಗ, ಕೆ.ಆರ್.ಪುರಂ, ಬಾಳೆಗುಂಡಿ ಬಡಾವಣೆ, ಭಾರತೀಯ ಸಭಾಭವನದ ರಸ್ತೆ, ಆರ್ಎಂಎಲ್ ನಗರ, ಪುರಲೆ, ವೆಂಕಟೇಶ ನಗರ ಬಡಾವಣೆಗಳಲ್ಲಿ ಇಂದು ರಾತ್ರಿಯಿಂದ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಳ್ಳಲಿದೆ.
ಈ ಭಾಗಗಳಲ್ಲಿ ಮನೆಗಳ ಒಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ ಯಾವುದೇ ವಿದ್ಯುತ್ ಅವಘಡಗಳು ನಡೆಯಬಾರದು ಎಂಬ ಕಾರಣದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಮೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಆದೇಶ ಹೊರಡಿಸಿದ್ದಾರೆ.