Wednesday, June 29, 2022

ಕಳಪೆ ಬಿತ್ತನೆಬೀಜ ಪೂರೈಕೆ: ತೆನೆ ಕಟ್ಟದೇ ಜಡ್ಡಿನ‌ ರೀತಿ ಬೆಳೆದು ನಿಂತ ಭತ್ತದ ಬೆಳೆ

Must read

ಶಿವಮೊಗ್ಗ: ಕಳಪೆ ಬಿತ್ತನೆಬೀಜ ಪೂರೈಕೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಂಗೋಟೆ ಗ್ರಾಮದ ರೈತ ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಕಳಪೆ ಬಿತ್ತನೆಬೀಜ ಪೂರೈಕೆ ಹಿನ್ನೆಲೆಯಲ್ಲಿ ಭತ್ತದ ಬೆಳೆ ತೆನೆ ಕಟ್ಟದೇ ಜಡ್ಡಿನ‌ ರೀತಿ ಬೆಳೆದು ನಿಂತಿದೆ. ಇದರಿಂದಾಗಿ ಮಂಗೋಟೆ ಗ್ರಾಮದ ರೈತ ಗಾಳೇರ್ ಗಡ್ಲಪ್ಪ ಅವರ ಐದಾರು ತಿಂಗಳ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ರೈತ ಗಡ್ಲಪ್ಪ ಬೇರೆಯವರ ಜಮೀನು ಗುತ್ತಿಗೆ ಪಡೆದು ಸುಮಾರು ಒಂದು ಎಕರೆ ಜಾಗದಲ್ಲಿ ಭತ್ತದ ಬೆಳೆ ಬೆಳೆದಿದ್ದರು. ಭತ್ತದ ಬೆಳೆ ನಾಲ್ಕೈದು ತಿಂಗಳಾದರೂ ತೆನೆ ಕಟ್ಟದೇ ಹುಲ್ಲಿನ ರೀತಿ ಬೆಳೆದು ನಿಂತಿದೆ. ಇದರಿಂದಾಗಿ ಸಾವಿರಾರು ರೂ. ಖರ್ಚು ಮಾಡಿ ಭತ್ತದ ಬೆಳೆ ಬೆಳೆದಿದ್ದ ರೈತ ದಂಪತಿ ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ.

ಕಳಪೆ ಬೀಜದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸ್ಥಳೀಯ ಬೀಜ ಮಾರಾಟಗಾರ ರೈತನಿಗೆ ಹಾರಿಕೆ ಉತ್ತರ ನೀಡಿದ್ದು, ಹವಾಮಾನ ವೈಪರೀತ್ಯದಿಂದ ಹೀಗಾಗಿದೆ ಎಂದಿದ್ದಾನೆ. ಇದೀಗ ಕಳಪೆ ಬೀಜ ನೀಡಿದ ಪೂರೈಕೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತ ಒತ್ತಾಯಿಸಿದ್ದಾರೆ. ಜೊತೆಗೆ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ಮಾಡುವಂತೆ ಆಗ್ರಹಿಸಿದ್ದಾರೆ.

Latest article