Sunday, October 2, 2022

ಡಾ. ರಾಜ್ ಕುಮಾರ್ ಗೆ ಪಿತೃಪಕ್ಷದ ನಮನಗಳನ್ನು ಸಲ್ಲಿಸಿದ ಅಭಿಮಾನಿಗಳು..!

Must read

ಬೆಂಗಳೂರಿನ ಕೆ.ಪಿ.ಅಗ್ರಹಾರ ವ್ಯಾಪ್ತಿಯಲ್ಲಿ ಇಂದು ವಿಶೇಷ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಶ್ರೀಮುತ್ತು ಡಾ|| ಶಿವರಾಜ್‍ಕುಮಾರ್ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ ಕನ್ನಡ ರತ್ನ ಅಭಿಮಾನಿಗಳ ದೇವರು ಡಾ|| ರಾಜ್‌ಕುಮಾರ್ ರವರೆಗೆ ಮಹಾಲಯ ಅಮವಾಸ್ಯೆಯ ಪಿತೃಪಕ್ಷದ ನಮನಗಳನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ ಶ್ರೀ ಕೃಷ್ಣಪ್ಪನವರು ಭಾಗವಹಿಸಿದ್ದರು.. ರಾಜ್ ಕುಮಾರ್ ಅವರ ಅಭಿಮಾನಿಗಳು ಕೂಡ ಪಾಲ್ಗೊಂಡಿದ್ದರು… ಈ ವೇಳೆ ಅಗ್ರಹಾರದ ಅಭಿಮಾನಿಗಳು ಅಣ್ಣಾವ್ರು ಇಷ್ಟ ಪಡುತ್ತಿದ್ದ ಎಲ್ಲ ರೀತಿಯ ತಿಂಡಿ ತಿನಿಸುಗಳನ್ನ ತಯಾರಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಶಾಸಕ ಕೃಷ್ಣಪ್ಪನವರು, ಅಣ್ಣಾವ್ರ ಸರಳತೆಯನ್ನ ಹಾಡಿಹೊಗಳಿದರು. ಪ್ರತಿ ಕನ್ನಡಿಗ ಕೂಡ ಡಾ.ರಾಜ್ ಅವರಿಂದ ಕಲಿಯಬೇಕಾದ್ದು ಬಹಳಷ್ಟಿದೆ ಎಂದು ಭಾವುಕರಾಗಿ ನುಡಿದರು.

Latest article