ಯಾದಗಿರಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸನ್ನತಿ ಬ್ರಿಜ್ ಬ್ಯಾರೇಜ್ನಿಂದ ಯಾದಗಿರಿಯ ಗುರುಸುಣಗಿ ಬ್ಯಾರೇಜ್ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ.
ಈಗಾಗಲೇ ಭೀಮಾನದಿ ತುಂಬಿ ಹರಿಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜನ-ಜಾನುವಾರುಗಳು ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಇನ್ನು ಜಿಲ್ಲಾಡಳಿತ ಸೂಚನೆಗೆ ಕ್ಯಾರೆ ಎನ್ನದ ಜನ ಅಪಾಯದ ನಡುವೆ ಬ್ಯಾರೇಜ್ ಮುಂಭಾಗದಲ್ಲಿನ ಭೀಮಾನದಿಯ ಮಧ್ಯ ಭಾಗಕ್ಕೆ ತೆರಳಿ ಮೀನು ಹಿಡಿದು ಉದ್ಧಟನ ಮೆರೆದಿದ್ದಾರೆ. ಸದ್ಯ ಭಾರೀ ಪ್ರಮಾಣದ ನೀರಿನ ಅಬ್ಬರದ ನಡುವೆಯೂ ಜನರು ಮೀನು ಹಿಡಿಯುವ ದುಸ್ಸಾಹಸ ನಡೆಸಿದ್ದಾರೆ.