ತುಮಕೂರಿನ ಕೊರಟಗೆರೆಯಲ್ಲಿ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಹೇಳಿಕೆ.
ನಾವು ಬಹಳ ಸೂಕ್ಷ್ಮ ದೃಷ್ಟಿಯಿಂದ ಸರ್ಕಾರ ಹಾಗೂ ಸಚಿವರನ್ನು ಸಿಎಂ ಅನ್ನು ಗಮನಿಸುತ್ತಿದ್ದೇವೆ.
ಟೀಕೆ ಟಿಪ್ಪಣಿಗಳನ್ನು ಮಾಡುತ್ತಿರುತ್ತೇವೆ.
ಆದರೆ ಒಬ್ಬ ಸಚಿವರು ಇಡೀ ಕರ್ನಾಟಕದ ಜನ ಸಮುದಾಯಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ ಅಂದರೆ ಅದು ನಮ್ಮ ಡಾ. ಸುಧಾಕರ್ ಅವರು.
ಅವರನ್ನು ಹೊಗಳುವಂತಹ ಪ್ರಶ್ನೆಯಲ್ಲ,
ಕೋವಿಡ್ ಬಂದಂತಹ ಸಂದರ್ಭದಲ್ಲಿ ಅವರಿಗೆ ಬಂದಂತಹ ಸವಾಲ್ ಬಹುಷಃ ಸಿಎಂಗೂ ಬಂದಿಲ್ಲ.
ದಿನ ನಿತ್ಯ ಜನ ಬೈತ್ತಿದ್ದರು. ಮೊದಲನೇದಾಗಿ ಕೋವಿಡ್ ಬಂದಿಲ್ಲ, ಸುಳ್ಳು ಸುಳ್ಳು ಹೇಳ್ತಿದ್ದಾರೆ, ಸುಧಾಕರ್ ಸುಳ್ಳು ಹೇಳುತ್ತಿದ್ದಾರೆ ಅಂತ ಬೈಯುತ್ತಿದ್ದರು. ಅವರು ಕಠಿಣವಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ರಾಜ್ಯದಲ್ಲಿ ಲಕ್ಷಾಂತರ ಜನ ಸಾಯುತ್ತಿದ್ದರು ಅನ್ನೋದನ್ನು ಮರಿಬೇಡಿ.